ಅಕ್ವಾಲೈಫ್ ನಿಂದ ಹುಬ್ಬಳ್ಳಿಯಲ್ಲಿ ವಿಶಿಷ್ಟ ಮೀನುಗಳ ಪ್ರದರ್ಶನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 30 : ನಗರದ ಅಶೋಕ ಹೊಟೆಲ್ ನಲ್ಲಿ ನಡೆಯುತ್ತಿರುವ ಅಪರೂಪದ ಮೀನುಗಳನ್ನೊಳಗೊಂಡ ಅತಿದೊಡ್ಡ ಅಕ್ವಾಲೈಫ್ ಪ್ರದರ್ಶನದಲ್ಲಿ ಅಪರೂಪದ ಮೀನು ಮತ್ತು ಪ್ರಾಣಿಗಳ ಪ್ರದರ್ಶನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ನವೆಂಬರ್ 25 ರಿಂದ ಆರಂಭವಾಗಿರುವ ಈ ಪ್ರದರ್ಶನ ಡಿಸೆಂಬರ್ 4ರ ವರೆಗೆ ನಡೆಯಲಿದೆ. ಮಹಾರಾಷ್ಟ್ರದ ಪುಣೆಯ ಅಕ್ವಾಲೈಫ್ ಸಂಸ್ಥೆಯು ಆಯೋಜಿಸಿರುವ ಈ ಪ್ರದರ್ಶನ 6ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿಂದೆ ಬೆಳಗಾವಿ, ಬೆಂಗಳೂರು ಸೇರಿದಂತೆ ದೇಶದ ಹಲವಾರು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿವಿಧ ಬಗೆಯ ಪಕ್ಷಿಗಳು, ಮತ್ತು ಇತರೆ ಪ್ರಾಣಿಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದ್ದು, ಯುವಜನರಲ್ಲಿ ಪ್ರಾಣಿಗಳ ಕುರಿತು ಕುತೂಹಲ ಮತ್ತು ಜಲಚರಗಳ ಬಗ್ಗೆ ಪ್ರೀತಿ ಬೆಳೆಸುವುದೇ ನಮ್ಮ ಪ್ರದರ್ಶನದ ಮುಖ್ಯ ಕಾರಣ ಎಂದು ಅಕ್ವಾಲೈಫ್ ನ ಲೌಕಿಕ್ ಸೋಮನ್ ಹೇಳಿದರು.

ಈ ಪ್ರದರ್ಶನದಲ್ಲಿ 800 ಕ್ಕೂ ಹೆಚ್ಚು ಬಗೆ-ಬಗೆಯ ಜಾತಿಯ ಮೀನುಗಳಿದ್ದು. 60 ಕ್ಕೂ ಹೆಚ್ಚು ಫಿಶ್ ಟ್ಯಾಂಕ್ ಗಳಲ್ಲಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಯೆಲ್ಲೋ ಬಟರ್ ಫ್ಲೈ, ಚೆಕರ್ಸ್ ಬಾರ್ಬ್, ಅಂಗೋಲನ್ ಎಲಿಫೆಂಟ್ ನೋಸ್, ಬಲೂನ ಡ್ವಾರ್ಫ್, ಸಿಚಿಲ್ಡ್ ಗೋಲ್ಡನ್ ಬಲೂನ, ಬ್ಲಾಕ್ ಗಪ್ಪಿ ಬೋಸೆಮನಿ ರೈನಬೋ, ಬ್ಲೂ ರೈನಬೋ, ರೆಡ್ ಲಾಬ್ ಸ್ಟರ್, ರೆಡ್ ಫೈರ್ ಬೆಲ್ಲಿ ನ್ಯೂಟ್ ಸೇರಿದಂತೆ ಅನೇಕ ಬಗೆಯ ಜಾತಿಯ ಮೀನುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ ಎಂದು ಲೌಕಿಕ ತಿಳಿಸಿದರು.

ಅಕ್ವಾಲೈಫ್ ಸಮುದ್ರದ ಜೀವನ ಶೈಲಿ ಕುರಿತು ವಿಶೇಷ ತರಬೇತಿ ನೀಡುತ್ತಿದೆ. ವಿವಿಧ ಬಗೆಯ ಸಸ್ಯಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಕಳೆದ 6 ತಿಂಗಳಿಂದ ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಪ್ರದರ್ಶನ ನೀಡಲಾಗಿದ್ದು, ಒಟ್ಟು ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ನಮ್ಮ ಮೀನುಗಳ ಪ್ರದರ್ಶನವನ್ನು ವೀಕ್ಷಿಸಿದ್ದಾರೆ.

ಡಿಸೆಂಬರ್ 4 ರವರೆಗೆ ಪ್ರದರ್ಶನ ನಡೆಯಲಿದ್ದು ನಂತರ ಮೈಸೂರಲ್ಲಿ ಮೀನುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಲೌಕಿಕ್ ಹೇಳಿದರು.

ವಿವಿಧ ಬಗೆಯ ಮೀನುಗಳು

ವಿವಿಧ ಬಗೆಯ ಮೀನುಗಳು

ಕೆಲವೊಂದು ಬಣ್ಣ ಬದಲಾಯಿಸುವಂತಿದ್ದರೆ, ಕೆಲವೊಂದು ಮೀನುಗಳು ದೊಡ್ಡ ಪ್ರಾಣಿಗಳ ಆಕಾರದಲ್ಲಿಯೇ ಇರುವುದು ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುತ್ತಿವೆ. ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಮೊದಲನೇ ಬಾರಿಗೆ ನಡೆಯುತ್ತಿರುವ ಈ ವಿಶೇಷ ಅಪರೂಪದ ಮೀನುಗಳ ಪ್ರದರ್ಶನ ಸಾರ್ವಜನಿಕರಿಗೆ ಆಕರ್ಷಣೀಯವಾಗಿದೆ.

ಮೀನು ಸಾಕಣೆಯ ತರಬೇತಿ

ಮೀನು ಸಾಕಣೆಯ ತರಬೇತಿ

ಮನುಷ್ಯನ ಮಾನಸಿಕ ಮತ್ತು ರಕ್ತದೊತ್ತಡ ಮೀನುಗಳನ್ನು ನೋಡುವುದರಿಂದ ಕಡಿಮೆಯಾಗುತ್ತದೆ ಎಂದು ಸ್ವತಃ ವೈದ್ಯಕೀಯ ರಂಗವೇ ಹೇಳಿದೆ ಎನ್ನುವ ಲೌಕಿಕ್, ಮೀನು ಸಾಕಣೆಯ ಬಗ್ಗೆಯೂ ನಾವು ತರಬೇತಿ ನೀಡುತ್ತಿದ್ದೇವೆ ಎನ್ನುತ್ತಾರೆ.

ಮೀನುಗಳ ಜೊತೆಗೆ ಪ್ರಾಣಿ, ಪಕ್ಷಿಗಳ ಪ್ರದರ್ಶನ

ಮೀನುಗಳ ಜೊತೆಗೆ ಪ್ರಾಣಿ, ಪಕ್ಷಿಗಳ ಪ್ರದರ್ಶನ

ಈ ಪ್ರದರ್ಶನದಲ್ಲಿ 800 ಕ್ಕೂ ಹೆಚ್ಚು ಬಗೆ-ಬಗೆಯ ಜಾತಿಯ ಮೀನುಗಳಿದ್ದು. 60 ಕ್ಕೂ ಹೆಚ್ಚು ಫಿಶ್ ಟ್ಯಾಂಕ್ ಗಳಲ್ಲಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮೀನುಗಳ ಜೊತೆಗೆ ಪ್ರಾಣಿ, ಪಕ್ಷಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.

6 ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ

6 ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ

ಕಳೆದ 6 ತಿಂಗಳಿಂದ ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಪ್ರದರ್ಶನ ನೀಡಲಾಗಿದ್ದು, ಒಟ್ಟು ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ನಮ್ಮ ಮೀನುಗಳ ಪ್ರದರ್ಶನವನ್ನು ವೀಕ್ಷಿಸಿದ್ದಾರೆ-ಅಕ್ವಾಲೈಫ್ ನ ಲೌಕಿಕ್ ಸೋಮನ್

ಮೈಸೂರಿನಲ್ಲಿ ಮೀನುಗಳ ಪ್ರದರ್ಶನ

ಮೈಸೂರಿನಲ್ಲಿ ಮೀನುಗಳ ಪ್ರದರ್ಶನ

ಡಿಸೆಂಬರ್ 4 ರವರೆಗೆ ಪ್ರದರ್ಶನ ನಡೆಯಲಿದ್ದು ನಂತರ ಮೈಸೂರಲ್ಲಿ ಮೀನುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಲೌಕಿಕ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aqua Life Exhibition, has been organized by Laukik Creations and will be hosted at Ashoka Hotel, near Lamington Road Hubballi. from November 25 to December 04. As many as 60 fish tanks have been brought to showcase the colourful aquatic life.
Please Wait while comments are loading...