ಕಿಮ್ಸ್ ಮಹತ್ವದ ಕಾರ್ಯ:ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಮರುಜನ್ಮ...!

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿಜಕ್ಕೂ ಉತ್ತರ ಕರ್ನಾಟಕದ ಸಂಜೀವಿನಿಯೇ ಸರಿ. ಈ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ವೈದ್ಯಕೀಯ ಸೇವೆಯ ಮೂಲಕ ಹೆಸರು ಮಾಡಿರುವ ಕಿಮ್ಸ್ ಈಗ ಮಹತ್ವದ ಕಾರ್ಯದ ಮೂಲಕ ಜನರ ಮೆಚ್ಚುಗೆ ಪಡೆದಿದೆ.

ಹುಬ್ಬಳ್ಳಿ, ಮಾರ್ಚ್ 17: ಅದು ಉತ್ತರ ಕರ್ನಾಟಕದ ಸಂಜೀವಿನಿ. ಅದೆಷ್ಟೋ ಆರೋಪ, ಪರ, ವಿರೋಧ ಸುದ್ದಿಯಲ್ಲಿರುವ ಸಂಜೀವಿನಿ ಈಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಜನರ ಸೇವೆಗಾಗಿಯೇ ಇರುವ ಸಂಜೀವಿನಿ ಈಗ ಕುಟುಂಬವೊಂದಕ್ಕೆ ಮರುಜನ್ಮ ನೀಡಿರುವ ಸಂಜೀವಿಯಾಗಿದೆ.

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿಜಕ್ಕೂ ಉತ್ತರ ಕರ್ನಾಟಕದ ಸಂಜೀವಿನಿಯೇ ಸರಿ. ಈ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ವೈದ್ಯಕೀಯ ಸೇವೆಯ ಮೂಲಕ ಹೆಸರು ಮಾಡಿರುವ ಕಿಮ್ಸ್ ಈಗ ಮಹತ್ವದ ಕಾರ್ಯದ ಮೂಲಕ ಜನರ ಮೆಚ್ಚುಗೆ ಪಡೆದಿದೆ.

Kims Hospital Give ReBirth To Belagavi Youth

ಮೂತ್ರಪಿಂಡ ಕಸಿ ಮಾಡುವ ಮೂಲಕ ಸಾಕಷ್ಟು ಜನಮನ್ನಣೆ ಪಡೆಯುತ್ತಿರುವ ಕಿಮ್ಸ್ ಈಗ ಹೊಂದಾಣಿಕೆಯಾಗದ ರಕ್ತದ ಗುಂಪಿನ ಮೂತ್ರಪಿಂಡ ಕಸಿ ಮಾಡುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ಕಾರ್ಯದಿಂದ ಕುಟುಂಬವೊಂದಕ್ಕೆ ಪುನರ್ ಜನ್ಮ ನೀಡಿದಂತಾಗಿದೆ.

ಕಿಡ್ನಿ ಕೊಡುವ ಮತ್ತು ಸ್ವೀಕರಿಸುವವರ ಮೇಲೆ ವಿಶೇಷ ಕಾಳಜಿ ವಹಿಸಿ ಕರ್ನಾಟಕ ಸರ್ಕಾರದ ಮೊದಲ ABO incompatible ಶಸ್ತ್ರಚಿಕಿತ್ಸೆ ಮೂಲಕ ಬೆಳಗಾವಿ ಮೂಲದ ಕುಟುಂಬದಲ್ಲಿ ಹೊಸ ಖುಷಿಯನ್ನು ಹುಟ್ಟು ಹಾಕಿದ್ದಾರೆ.

ಇನ್ನೂ ಕಿಡ್ನಿ ಸ್ವೀಕರಿಸುವವರಲ್ಲಿ ಕಸಿ ಪೂರ್ವ ಪ್ರಿ ಟ್ರಾನ್ಸಪ್ಲಾಂಟ್ ಆ್ಯಂಟಿ-ಬಿ ಟೈಟರ್ ಮಾಡಿ ನಂತರ ಗ್ಲೈಕೋಸಾರ್ಬ್ ನೊಂದಿಗೆ ಆ್ಯಂಟಿ ಬಿ-ಕಾಲಮ್ ಥೆರಪಿ ಮಾಡಿ ಪೂರ್ವ ಕಸಿ ಮಾಡುವ ಮೂಲಕ ಮೊದಲ ಹಂತವನ್ನು ಪೂರ್ಣಗೊಳಿಸಿ ಸುಮಾರು ಹದಿನೈದು ದಿನಗಳ ಕಾಲ ವಿಶೇಷ ಕಾಳಜಿ ವಹಿಸಿ ಶಸ್ತ್ರಚಿಕಿತ್ಸೆ ಮಾಡಿ ಬೆಳಗಾವಿ ಮೂಲದ ಯುವಕನಿಗೆ ಪುನರ್ ಜನ್ಮ ನೀಡಿರುವುದು ವಿಶೇಷವಾಗಿದೆ.

Kims Hospital Give ReBirth To Belagavi Youth

ಮೂತ್ರಪಿಂಡ ವಿಭಾಗ, ಮೂತ್ರಶಾಸ್ತ್ರ, ಅರವಳಿಕೆ, ರೋಗ ಶಾಸ್ತ್ರ ವಿಭಾಗದ ವೈದ್ಯರ ತಂಡ ವಿಶೇಷ ಶ್ರಮವಹಿಸಿ ಇಂತಹದೊಂದು ಸಾಧನೆ ಮಾಡಿದೆ‌. ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯು ಸಾಕಷ್ಟು ಸಾಧನೆಯ ಮೂಲಕ ಜನಮನ್ನಣೆ ಪಡೆದ ಆಸ್ಪತ್ರೆಯಾಗಿದೆ. ಅಲ್ಲದೇ ಅದೆಷ್ಟೋ ಅವ್ಯವಸ್ಥೆಗಳಿಂದ ಕೂಡ ಸುದ್ದಿಯಾಗಿದೆ. ಅದು ಏನೇ ಇರಲಿ ಇಲ್ಲಿನ ವೈದ್ಯಕೀಯ ಸೇವೆ ಮಾತ್ರ ಶ್ಲಾಘನೀಯವಾಗಿದೆ.

ಸೈಬರ್‌ ವಂಚನೆ: ಕ್ರೆಡಿಟ್ ಕಾರ್ಡ್ ಹೆಸರಲ್ಲಿ 1.49 ಲಕ್ಷ ರೂ ಪಂಗನಾಮ

ಧಾರವಾಡ: ಕ್ರೆಡಿಟ್‌ ಕಾರ್ಡ್‌ ಬಾಕಿ ಮೊತ್ತ ಪಾವತಿಸದಿದ್ದರೆ ಕಾರ್ಡ್‌ ಬ್ಲಾಕ್‌ ಆಗುತ್ತದೆ ಎಂದು ವ್ಯಕ್ತಿಯೊಬ್ಬರ ಖಾತೆಗೆ ಸೈಬರ್‌ ವಂಚಕರು ಕನ್ನ ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಜಿಲ್ಲೆಯ ದೇಸಾಯಿಗಲ್ಲಿಯ ಶ್ರೀರಂಗ ಎಸ್‌. ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದ ಬ್ಯಾಂಕ್‌ ಮಾಹಿತಿ ಪಡೆದು 1.49 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಶ್ರೀರಂಗ ಅವರಿಗೆ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಶಾಖೆ ಅಧಿಕಾರಿ ಹೆಸರಲ್ಲಿ ಕರೆ ಮಾಡಿದ ವಂಚಕ, ಬಾಕಿ ಹಣ ಪಾವತಿಸಲು ಹೇಳಿದ್ದಾನೆ. ಕಾರ್ಡ್‌ ಬಳಸದಿದ್ದರೂ ಬಾಕಿ ಮೊತ್ತ ಹೇಗೆ ತೋರಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಅದಕ್ಕೆ, ಕಾರ್ಡ್‌ ಬ್ಲಾಕ್‌ ಮಾಡುವುದಾಗಿ ಬೆದರಿಸಿದ ವಂಚಕ ಅವರಿಂದ ಕ್ರೆಡಿಟ್‌ ಕಾರ್ಡ್‌ ನಂಬರ್‌, ಸಿಸಿವಿ ನಂಬರ್‌ ಹಾಗೂ ಮುಕ್ತಾಯ ದಿನಾಂಕದ ಮಾಹಿತಿ ಪಡೆದಿದ್ದಾನೆ. ನಂತರ, ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ, ಎನಿಡೆಸ್ಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ಧಾರವಾಡ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+