ನನಗೆ ಭ್ರಷ್ಟ ಅಂದ್ರೆ ಸಹಿಸುವುದಿಲ್ಲ, ಎಸ್ ಆರ್ ಹಿರೇಮಠಗೆ ಜೋಶಿ ಎಚ್ಚರಿಕೆ

ಹುಬ್ಬಳ್ಳಿ, ಅಕ್ಟೋಬರ್ 20: ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಅವರ ಆರೋಪಕ್ಕೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

"ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು, ಕಷ್ಟ ಪಟ್ಟು ಬಿಜೆಪಿಯಲ್ಲಿ ಕೆಲಸ ಮಾಡಿ ಸಂಸದನಾದವನು ಹೀಗಾಗಿ ನಾನು ರಾಜಕೀಯ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ ಆದರೆ, ನನಗೆ ಭ್ರಷ್ಟ ಎಂದರೆ ಮಾತ್ರ ನಾನು ಸಹಿಸಿಕೊಳ್ಳುವುದಿಲ್ಲ" ಎಂದು ಹಿರೇಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

I am not Corrupt MP Pralhad Joshi outburst against SR Hiremath

ನನಗೆ ಭ್ರಷ್ಟ ಎಂದರೆ ಅವರು ಯಾರೇ ಇರಲಿ ಅವರ ವಿರುದ್ದ ನಾನು ಕಾನೂನು ರೀತಿಯಲ್ಲಿ ಹೋರಾಟ ಮಾಡುವೆ ಎಂದು ಜೋಶಿ ಎಸ್ ಆರ್ ಹಿರೇಮಠ್ ಅವರಿಗೆ ಎಚ್ಚರಿಕೆ ನೀಡಿದರು.

ಗುರುವಾರ ಎಸ್ ಆರ ಹಿರೇಮಠ್ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸಂಸದರು ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಗ್ರಹಿಸಿ ನನ್ನ ತೇಜೊವದೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಪ್ರಹ್ಲಾದ್ ಜೋಶಿ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸಹ ಆರೋಪ ಮಾಡಿದ್ದರು.

ಹೀಗಾಗಿ ಇಂದು ಅವರ ಎಸ್ ಆರ್ ಹಿರೇಮಠ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು ಹಿರೇಮಠ ಅವರ ಬಗ್ಗೆ ನಾನು ಯಾವುದೇ ಅಪಪ್ರಚಾರ ಮಾಡಿಲ್ಲ. ಅವರು ನ್ಯಾಯಾಲಕ್ಕೆ ಹಾಜರಾಗದ ಕಾರಣ ನ್ಯಾಯಾಲಯ ದಂಡ ವಿಧಿಸಿದ್ದ ಬಗ್ಗೆ ನಮ್ಮ ಪರ ವಕೀಲರು ತಿಳಿಸಿದ್ದಾರೆ.

ಅವರು ತಪ್ಪು ಮಾಡಿದ್ರೆ ಹಿರೇಮಠ ಅವರು ಒಪ್ಪಿಕೊಳ್ಳುಬೇಕು. ಇದೇ ವಿಷಯಕ್ಕೆ ನಾನು ಗೌರಿ ಲಂಕೇಶ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿ ಅವರ ವಿರುದ್ಧ ಕೋರ್ಟ್ ಕೇಸ್ ನಲ್ಲಿ ಜಯ ಗಳಿಸಿದ್ದೆ.

ರಾಜಕೀಯವಾಗಿ ನನಗೆ ಟೀಕಿಸಿದರೆ ನಾನು ಸಹಿಸಿಕೊಳ್ಳುತ್ತೇನೆ. ಆದರೆ, ಭ್ರಷ್ಟನಂದ್ರೆ ನಾನು ಸಹಿಸುವುದಿಲ್ಲ. ರಾಜಕೀಯಕ್ಕೆ ಬಂದಾಗಿನಿಂದ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲದಿದ್ದರೂ ಯಾಕೆ ಸಹಿಕೊಳ್ಳಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+