ಕಲ್ಯಾಣ ಕರ್ನಾಟಕದಲ್ಲಿ ಏಪ್ರಿಲ್ 16 ರಂದು 'ಬೃಹತ್ ಉದ್ಯೋಗ ಮೇಳ', ವಿದ್ಯಾರ್ಹತೆ
ಬೆಂಗಳೂರು, ಏಪ್ರಿಲ್ 08: ಕರ್ನಾಟಕ ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕದಲ್ಲಿ ಯುವಜನತೆಗಾಗಿ, ನಿರುದ್ಯೋಗ ಯುವ ಸಮುಹಕ್ಕಾಗಿ 'ಬೃಹತ್ ಉದ್ಯೋಗ ಮೇಳ 2025' (Job Fair in Kalyana Karnataka) ಆಯೋಜಿಸಿದೆ. ನಿರುದ್ಯೋಗಿಗಳ ಸಂಖ್ಯೆ ಇಳಿಕೆಗೆ, ಅರ್ಹರಿಗೆ ನೌಕರಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಎಲ್ಲಿ ಮೇಳ ನಡೆಯಲಿದೆ, ವಿದ್ಯಾರ್ಹತೆ, ವಯಸ್ಸು, ಪ್ರಮುಖ ಸಲಹೆ ಸೂಚನೆಗಳು ಇಲ್ಲಿವೆ.
'ಯುವ ಸಮೃದ್ಧಿ ಸಮ್ಮೇಳನ' ಶಿರ್ಷಿಕೆಯಡಿ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಈ 'ಬೃಹತ್ ಉದ್ಯೋಗಮೇಳ' ಜರುಗಲಿದೆ. ಕಲಬುರಗಿ ನಗರದ ಕೆ.ಸಿ.ಟಿ ಕಾಲೇಜ್ ಕ್ಯಾಂಪಸ್‌ನಲ್ಲಿ 16 ಏಪ್ರಿಲ್ 2025 ರಂದು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ 200 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿವೆ. ಯಾವುದೇ ವಿದ್ಯಾರ್ಹತೆ ಇರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಕರೆ ನೀಡಿದೆ.

ವಿವಿಧ ಕಂಪನಿಗಳಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿರುವ ಮೇಳದಲ್ಲಿ ಪಾಲ್ಗೊಳ್ಳಲು ಸಹಾಯವಾಣಿ ಮತ್ತು ಕ್ಯೂಆರ್ ಕೋಡ್ ಸಹ ನೀಡಲಾಗಿದೆ. ವಿವಿಧ ಹಂತಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ರಾಜ್ಯ, ಹೊರ ರಾಜ್ಯ ಹಾಗೂ ದೇಶದ ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಮೇಳಕ್ಕೆ ಆಗಮಿಸಲಿವೆ. ನೋಂದಣಿಗೆ http://skillconnect.kaushalkar.com/ ಗೆ ಭೇಟಿ ನೀಡಿ ಹೆಸರು ನೋಂದಾಯಿಸಬೇಕು. ಮೊದಲು ನೀವು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಉದ್ಯೋಗ ಮೇಳದ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಭ್ಯರ್ಥಿ ನೊಂದಣಿ ಮೇಲೆ ಕ್ಲಿಕ್ ಮಾಡಿಕೊಂಡು, ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಬಳಿಕ ನೀವು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಇನ್ನೂ ಉದ್ಯೋಗದಾತ ಕಂಪನಿಗಳು ಸಹ ಇದೇ ರೀತಿ http://skillconnect.kaushalkar.com/ ಭೇಟಿ ನೀಡಬೇಕು. ಮೊದಲು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ ನಂತರ ಉದ್ಯೋಗ ಮೇಳದ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಉದ್ಯೋಗದಾತ ನೋಂದಣಿ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ತಿಳಿಸಿದೆ.
ಉದ್ಯೋಗ ಮೇಳ ಹೆಚ್ಚಿನ ಮಾಹಿತಿಗೆ ಸಹಾಯವಾಣಿ 08022075030 ಗೆ ಸಂಪರ್ಕಿಸಬೇಕು. ಕೆಸಿಟಿ ಕಾಲೇಜ್ ಕ್ಯಾಂಪಸ್, ಖಮರ್ ಉಲ್ ಇಸ್ಲಾಂ ಕಾಲೋನಿ, ರೋಜಾ.ಬಿ.ರಿಂಗ್ ರಸ್ತೆ, ಕಲಬುರಗಿ 58510' ಇಲ್ಲಿ ಮೇಳ ನಡೆಯಲಿದೆ. ಈ ವಿಳಾಸ ಅನುಸರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಕಲಬುರಗಿ ಮೇಳದ ಬಳಿಕ ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಹಂತ ಹಂತವಗಿ ಉದ್ಯೋಗ ಮೇಳೆ ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಹೇಳಿದರು.












Click it and Unblock the Notifications