ಹುಬ್ಬಳ್ಳಿ: ಮಹಿಳೆಯರೇ ರಥವನ್ನು ಎಳೆಯುವ ಬನಶಂಕರಿ ಜಾತ್ರೆ

Posted By:
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 11: ಹುಬ್ಬಳ್ಳಿಯ ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರೇ ರಥವನ್ನು ಎಳೆದು ನೆರೆದ ಭಕ್ತರ ಗಮನ ಸೆಳೆದರು. ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಭಾಗದಲ್ಲಿ ಹಲವಾರು ಕಾಲೇಜುಗಳಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕಾಲೇಜು ಕನ್ಯೆಯರು ಹಾಗೂ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನದ ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆದರು.

Hubballi : Vidyanagara Banashankari Temple Rathayatra Celebration

ಜಾತ್ರೆಯಲ್ಲಿ ಮಹಿಳೆಯರೊಂದಿಗೆ ಪುರುಷರೂ ಭಾಗವಹಿಸಬಹುದಾಗಿದ್ದರೂ ಆದರೆ ಅವರಿಗೆ ರಥವನ್ನು ಎಳೆಯುವ ಅವಕಾಶ ರಥಬೀದಿಯಲ್ಲಿ ಹೋಗುವಾಗ ಮಾತ್ರ. ಬರುವಾಗ ಕೇವಲ ಮಹಿಳೆಯರೇ ವೈಭವಯುತವಾಗಿ ಅಲಂಕರಿಸಿದ ರಥವನ್ನು ದೇವಸ್ಥಾನದಿಂದ ಸುಮಾರು 100 ಮೀ.ರವರೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಡೊಳ್ಳು, ವಾದ್ಯಮೇಳಗಳೊಂದಿಗೆ ಎಳೆದರು.

ರಥದಲ್ಲಿದ್ದ ಬನಶಂಕರಿಯ ಉತ್ಸವ ಮೂರ್ತಿಗೆ ಭಕ್ತರು ದ್ರಾಕ್ಷಿ, ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ, ಮಹಿಳೆಯರಿಂದ ಕುಂಕುಮಾರ್ಚನೆ, ಮಧ್ಯಾಹ್ನ ಪೂರ್ಣಾಹುತಿ, ಮಹಾ ಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಗಳು ಜರುಗಿದವು.

Hubballi : Vidyanagara Banashankari Temple Rathayatra Celebration

ಮಣಕವಾಡದ ಶ್ರೀ ಸಿದ್ಧರಾಮ ದೇವರು ಜಾತ್ರೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಭಕ್ತಿಯಿಂದ ದೇವರನ್ನು ಸ್ಮರಿಸಿದರೆ ಬದುಕು ನೆಮ್ಮದಿಯಿಂದ ಸಾಗುತ್ತದೆ ಎಂದರು. ಜಗನ್ಮಾತೆ ಬನಶಂಕರಿ ದೇವಿ ನಿಮ್ಮೆಲ್ಲರಿಗೆ ಅನುಗ್ರಹ ನೀಡುತ್ತಾರೆ ಎಂದು ಹರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi : Vidyanagara Banashankari Temple Rathayatra Celebration today. It is unique cart festival in which only woman are allowed to pull the cart.
Please Wait while comments are loading...