ಹುಬ್ಬಳ್ಳಿ: 18ಕಿ.ಮೀ ಬೈಪಾಸ್ ರಸ್ತೆ ಮುಂದಿನ ಜುಲೈನಲ್ಲಿ ಪೂರ್ಣ-ಜೋಶಿ
ಹುಬ್ಬಳ್ಳಿ, ಜೂನ್ 3: 'ಒಟ್ಟು 18 ಕಿ.ಮೀ ಉದ್ದದ ವಿಜಯಪುರ ಹೆದ್ದಾರಿಯಿಂದ ಅಂಚಟಗೆರಿ ವರೆಗೆ ನಿರ್ಮಾಣವಾಗುತ್ತಿರುವ ನೂತನ ಬೈಪಾಸ್ ಯೋಜನೆಗೆ ಕೇಂದ್ರ ಸರ್ಕಾರ 248 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. 2018ರ ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ' ಎಂದು ಸಂಸದ ಪ್ರಹ್ಲಾದ್ ಜೋಶಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರೊಂದಿಗೆ ಸೋಮವಾರ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ವಿಜಯಪುರ ರಸ್ತೆಯಿಂದ ಗದಗ ರಸ್ತೆ ವರೆಗಿನ 3 ಕಿ.ಮೀ. ಕಾಮಗಾರಿಯನ್ನು 68 ಕೋಟಿ ವೆಚ್ಚದಲ್ಲಿ ನ್ಯಾಷನಲ್ ಹೈವೇ (ಪಿಡಬ್ಲೂಡಿ) ನಿರ್ವಹಿಸಲಿದೆ. ಗದಗ ರಸ್ತೆಯಿಂದ ಅಂಚಟಗೆರೆ ವರೆಗಿನ 15 ಕಿ.ಮೀ. ಕಾಮಗಾರಿಯನ್ನು ಎನ್‌ಎಚ್‌ಐಎ ನಿರ್ವಹಿಸಲಿದೆ. ಇದಕ್ಕಾಗಿ ೧೮೦ ಕೋಟಿ ಅನುದಾನ ಮಂಜೂರಾಗಿದ್ದು, ನಗರದಲ್ಲಿನ ಸಂಚಾರ ನಿಯಂತ್ರಣಕ್ಕೆ ಈ ಬೈಪಾಸ್ ರಸ್ತೆ ಸಹಕಾರಿಯಾಗಲಿದೆ' ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications