ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಎಟಿಎಂ ದರೋಡೆ, ಇನ್ನಿತರ ಕ್ರೈಂ ಸುದ್ದಿಗಳು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್, 31: ಹಳೇಹುಬ್ಬಳ್ಳಿ ಗುಡಿಹಾಳ ರೋಡ್ ರಸ್ತೆಯ ವಿಶಾಲನಗರದಲ್ಲಿರುವ ಎಸ್ಬಿಐ ಬ್ಯಾಂಕ್ ನ ಎಟಿಎಂ ಮುರಿದು ದರೋಡೆಕೋರರು ಅದರಲ್ಲಿದ್ದ ಅಂದಾಜು 18 ಲಕ್ಷ ರೂ. ದೋಚಿದ ಪ್ರಕರಣ ರವಿವಾರ ನಗರದಲ್ಲಿ ನಡೆದಿದೆ.

ಎಟಿಎಂ ಬಾಗಿಲ ಮುರಿದು ಒಳನುಗ್ಗಿ ಸಿಸಿಟಿವಿ ಕೇಬಲ್ ಕಟ್ ಮಾಡಿ ಗ್ಯಾಸ್ ಕಟ್ಟರ್ ದಿಂದ ಎಟಿಎಂ ತೆಗೆದು ಅದರಲ್ಲಿದ್ದ ಅಂದಾಜು 17,93,400 ರೂ. ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಪೂರಖಾನ ಅಬ್ದುಲಗಫಾರ ತಮಟಗಾರ ಎಂಬುವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Hubballi Crime roundup : Robbers cut open ATM, loot Rs 18 lakh

ಯುವತಿಯ ಅಪಹರಣ : ಧಾರವಾಡದಲ್ಲಿ ತನ್ನ ಮಗಳು 17 ವರ್ಷದ ಯುವತಿ ಕಾಣೆಯಾಗಿದ್ದಾಳೆ ಎಂದು ಮುಂಡಗೋಡ ತಾಲೂಕಿನ ಕುಂದರಗಿ ಗ್ರಾಮದ ಧರ್ಮರಾಜ ನಿಂಗಪ್ಪ ಮರಾಟಿ ಎಂಬುವರು ವಿದ್ಯಾಗಿರಿ ಠಾಣೆಗೆ ದೂರು ನೀಡಿದ್ದಾರೆ.

ಇಲ್ಲಿಯ ಕಲ್ಯಾಣ ನಗರದಲ್ಲಿರುವ ಸಂದೇಶ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೌಭಾಗ್ಯಳನ್ನು ಅವಳು ರವಿವಾರ ಸಂಜೆ ಹೊರಗಡೆ ಹೋದಾಗ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಧರ್ಮರಾಜ ದೂರಿದ್ದಾರೆ.

ಜೂಜುಕೋರರ ಬಂಧನ: ಅವಳಿ ನಗರದ ವಿವಿಧ ಪೊಲೀಸ್ ಠಾಣೆಯ ಪೊಲೀಸರು ವಿವಿಧೆಡೆ ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ 110 ಕ್ಕೂ ಹೆಚ್ಚು ಜನರನ್ನು ದೀಪಾವಳಿಯಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 2, 24, 665 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೀಪಾವಳಿ ಹಬ್ಬದಂದು ಸಾಮಾನ್ಯವಾಗಿ ನಗರದ ಹಲವಾರು ಕಡೆಗಳಲ್ಲಿ ಜನರು ಇಸ್ಪೀಟ್ ಆಟದಲ್ಲಿ ತೊಡಗಿಕೊಳ್ಳುತ್ತಾರೆ ಇದರಂಗವಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ..

ಸಂಚಾರ ನಿಯಮ ಉಲ್ಲಂಘನೆ : ಸಂಚಾರ ನಿಯಮ ಉಲ್ಲಂಘನೆ ಮಾಡಿದ 270 ಕೇಸ್ ದಾಖಲಿಸಿ 33,200 ರೂ. ದಂಡ ವಸೂಲಿ ಮಾಡಲಾಗಿದೆ ಹು-ಧಾ ಪೊಲೀಸ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Robbers looted Rs 18 lakh after cutting an ATM of State Bank of India in Old Hubbali and many more crime news from across Hubballi and Dharwad district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X