ಹೌರಾ-ಮೈಸೂರು ವಿಶೇಷ ಬೇಸಿಗೆ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ

ಹುಬ್ಬಳ್ಳಿ, ಮೇ 06; ನೈರುತ್ಯ ರೈಲ್ವೆ ಹೌರಾ-ಮೈಸೂರು ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಜೂನ್ ತನಕ ವಿಸ್ತರಣೆ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರದ ನಿಯಮದಂತೆ ರೈಲಿನ ಮೂಲಕ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ.

ರೈಲು ನಂಬರ್ 08117 ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮೇ 7 ರಿಂದ ಜೂನ್ 25 ರವರೆಗೆ ಹಾಗೂ ಮೈಸೂರು-ಹೌರಾ (08118) ರೈಲು ಸಂಚಾರ ಸೇವೆಯನ್ನು ಮೇ 9 ರಿಂದ ಜೂನ್ 27ರ ತನಕ ವಿಸ್ತರಣೆ ಮಾಡಲಾಗಿದೆ.

ಯಶವಂತಪುರ-ಹೌರಾ (06597) ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ರೈಲು ಸಂಚಾರವನ್ನು ಮೇ 13ರಿಂದ ಜೂನ್ 24ರ ತನಕ ಹಾಗೂ ಹೌರಾ-ಯಶವಂತಪುರ (06598) ರೈಲು ಸಂಚಾರ ಸೇವೆಯನ್ನು ಮೇ 18 ರಿಂದ ಜೂನ್ 29 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

Howrah Mysuru Special Express Train Extended Till June

ರದ್ದು ಮುಂದುವರಿಕೆ : ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್-ಗದಗ ಎಕ್ಸ್‌ಪ್ರೆಸ್ (01139) ಜೂನ್ 30 ರವರೆಗೆ ಹಾಗೂ ಗದಗ-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (01140) ರೈಲು ಸಂಚಾರ ರದ್ದು ಜುಲೈ 1 ರವರೆಗೆ ಮುಂದುವರೆಸಲಾಗಿದೆ.

ನೆಗೆಟಿವ್ ವರದಿ ಕಡ್ಡಾಯ; ಕೋವಿಡ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ರೈಲಿನ ಮೂಲಕ ರಾಜ್ಯಕ್ಕೆ ಆಗಮಿಸಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.

ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಲು ಬಯಸುವ ಇತರೆ ಎಲ್ಲಾ ರಾಜ್ಯಗಳ ಪ್ರಯಾಣಿಕರು, ರೈಲು ಹೊರಡುವ 72 ಗಂಟೆಯೊಳಗಿನ ಅವಧಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವ ದಾಖಲೆ ನೀಡುವುದು ಕಡ್ಡಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+