ಗೌರಿ ಹತ್ಯೆ ಪ್ರಕರಣ ಭೇದಿಸಲು ಸಹಕರಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆ
ಹುಬ್ಬಳ್ಳಿ, ಜನವರಿ 06: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸಲು ರಾಜ್ಯದ ಎಸ್ಐಟಿ ತಂಡಕ್ಕೆ ಸಹಕರಿಸಿದ ಸಿಬ್ಬಂದಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.
ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಯ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ-ಧಾರವಾಡ
ಕಮೀಷನರೇಟ್ ಘಟಕದ ಬಿ.ಡಿ.ಡಿ.ಎಸ್. (ಸ್ಪೋಟಕ ಪತ್ತೆ ಮತ್ತು ನಿಷ್ಕ್ರೀಯ ದಳ) ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.

ಗೌರಿ ಲಂಕೇಶ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಬಿ.ಡಿ.ಡಿ.ಎಸ್. ತಂಡದ 8 ಜನ ಸಿಬ್ಬಂದಿಗಳಾದ ಆರ್.ಎಫ್. ಮುಂತೇಶ, ಸಿ.ಬಿ. ಜಗದ, ಎನ್.ಜಿ. ತೋಪಲಕಟ್ಟಿ, ಎನ್.ಎಸ್. ಇಂಗಳಗಿ, ಡಿ.ವಾಯ್. ಭೋವಿ, ಸ ಎಮ್.ಪಿ. ಔದಕ್ಕನವರ, ಎಮ್.ಆರ್. ಮಹಳ್ಳಿ, ಎಮ್.ಕೆ. ಕೋನಿ ಇವರಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ಮತ್ತು ಬಹುಮಾನ ಘೋಷಣೆ ಮಾಡಿದ್ದಾರೆ,
ಸಿಎಆರ್ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಮೆಚ್ಚಿ, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪೊಲೀಸ ಮಹಾ ನಿರೀಕ್ಷಕರು, ಬೆಂಗಳೂರು ಇವರು ಪ್ರಶಂಸನಾ ಪತ್ರಗಳನ್ನು ನೀಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಸಹ ಇವರ ಕಾರ್ಯ ಶ್ಲಾಘಿಸಿ, ಸೂಕ್ತ ಬಹುಮಾನವನ್ನು ಘೋಷಿಸಿ, ಪ್ರಶಂಸನಾ ಪತ್ರಗಳನ್ನು ವಾರದ ಕವಾಯತ್ತಿನಲ್ಲಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications