ಹುಬ್ಬಳ್ಳಿ: ಬಿಜೆಪಿ ಮಾಜಿ ಶಾಸಕರ ಪುತ್ರ ಸೂರಜ್ ಆತ್ಮಹತ್ಯೆಗೆ ಶರಣು
ಹುಬ್ಬಳ್ಳಿ, ಸೆಪ್ಟೆಂಬರ್ 8: ಹುಬ್ಬಳ್ಳಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಪುತ್ರ ಸೂರಜ್ (೧೮) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಮನೆಯ ಮಹಡಿಯಲ್ಲಿ ಇರುವ ಕೋಣೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಹದಿನೆಂಟು ವರ್ಷದ ಸೂರಜ್, ದೇಶಪಾಂಡೆ ನಗರದಲ್ಲಿರುವ ತಮ್ಮ ಮನೆಯ ಮೇಲಿನ ಕೋಣೆಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ.

ಆತ್ಮಹತ್ಯೆಗೆ ಶರಣಾಗಿರುವ ಸೂರಜ್, ಎಲ್ಲರೊಂದಿಗೂ ಚೆನ್ನಾಗಿಯೇ ಬೆರೆಯುತ್ತಿದ್ದ. ಸದಾಕಾಲ ಲವಲವಿಕೆಯಿಂದ ಇರುತ್ತಿದ್ದನೆಂದು ಹೇಳಲಾಗಿದೆ. ಘಟನೆಯ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರೆಸಿದ್ದಾರೆ.
Recommended Video
ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Oneindia Kannada












Click it and Unblock the Notifications