Breaking; 5 ರೂ. ಗುಟ್ಕಾ ವಿಚಾರಕ್ಕೆ ಸ್ನೇಹಿತನ ಕೊಲೆ
ಹುಬ್ಬಳ್ಳಿ, ಮೇ 24: ವಿಮಲ್ ಪಾನ್ ಮಸಾಲಾ ಕೊಡಿಸುವ ವಿಚಾರಕ್ಕೇ ಸ್ನೇಹಿತರಲ್ಲೇ ಜಗಳ ಪ್ರಾರಂಭವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಆನಂದ ನಗರದ ಮೆಹಬೂಬ್ ರಫೀಕ್ ಕಳಸ ಹಾಗೂ ಗೌಸ್ ಮೊದ್ದೀನ್ ನಡುವೆ ಮಂಜುನಾಥ ನಗರ ಬಳಿಯ ಕೊಡೆ ಬಾರ್ ಬಳಿಯಲ್ಲಿ ವಿಮಲ್ ಕೊಡಿಸುವ ವಿಚಾರಕ್ಕೇ ಜಗಳವಾಗಿದೆ.
ಮೆಹಬೂಬ್ ವಿಮಲ್ ಕೊಡಿಸದ ಹಿನ್ನಲೆಯಲ್ಲಿ ಜಗಳವಾಡಿದ್ದ ಗೌಸ್ ಮೊದ್ದೀನ್ ಆನಂದ ನಗರ ಸರ್ಕಲ್‌ನಲ್ಲಿಯೇ ಮೆಹಬೂಬ್ ಹೊಟ್ಟೆಗೆ ಚಾಕು ಇರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Recommended Video
ಬಿಎಸ್ ವೈ ಪುತ್ರನಿಗೆ ಟಿಕೆಟ್ ಮಿಸ್ | #PoliticalWrap | Oneindia Kannada
ಮೆಹಬೂಬ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಿಂದ ಗೌಸ್ ಮೊದ್ದೀನ್ ಪರಾರಿ ಆಗಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿದರು. ಕೊಲೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications