ಹುಬ್ಬಳ್ಳಿಯಲ್ಲಿ ಪಾಲಿಕೆ ಅಧಿಕಾರಿಗಳು ರಿಯಲ್ ಎಸ್ಟೇಟ್ ಮೇಲೆ ಕಣ್ಣು ಹಾಕಿದ್ರಾ?, ಜನರು ಹೇಳುವುದೇನು?
ಹುಬ್ಬಳ್ಳಿ, ನವೆಂಬರ್, 10: ರಾಜ್ಯದ ಎರಡನೇ ಅತೀದೊಡ್ಡ ಮಹಾನಗರ ಪಾಲಿಕೆ ಎಂದರೆ ಅದು ಹುಬ್ಬಳ್ಳಿ ಧಾರವಾಡ-ಮಹಾನಗರ ಪಾಲಿಕೆ. ಆದರೆ ಇದೇ ಪಾಲಿಕೆ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ರಿಯಲ್ ಎಸ್ಟೇಟ್ ಮೇಲೆ ಕಣ್ಣು ಹಾಕುತ್ತಾ, ಸುತ್ತಮುತ್ತಲಿನ ಗ್ರಾಮಗಳನ್ನು ಸೇರ್ಪಡೆಗೆ ಚಿಂತನೆ ನಡೆಸಿವೆ ಎನ್ನಲಾಗಿದೆ. ಈ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಜಟಾಪಟಿ ನಡೆದಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಸುತ್ತಲೂ ಭೂಮಿಗಿದೆ ಬಂಗಾರದ ಬೆಲೆ. ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಪಾಲಿಕೆ ವ್ಯಾಪ್ತಿಯ ಗ್ರಾಮಗಳ ಸೇರ್ಪಡೆಗೆ ಚಿಂತನೆ ನಡೆಸಿದ್ದು, ಇದಕ್ಕೆ ವಿರೋಧ ಪಕ್ಷ ಮೊದಲೆ ಅವಳಿ ನಗರದಲ್ಲಿ ಅಭಿವೃದ್ಧಿ ಇಲ್ಲ. ಅಂತಹದ್ದರಲ್ಲಿ ಗ್ರಾಮಗಳ ಸೇರ್ಪಡೆ ಮಾಡುತ್ತಿದ್ದಾ ಎಂದು ವಿರೋಧ ಮಾಡುತ್ತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬರೋಬ್ಬರಿ 51 ಕಂದಾಯ ಗ್ರಾಮಗಳ ಸೇರ್ಪಡೆಗೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ಅವಳಿ ನಗರದ ಅಭಿವೃದ್ದಿಗೆ ಅನುದಾನದ ಕೊರತೆ ಎದುರಿಸುತ್ತಿರುವ ಪಾಲಿಕೆ ಗ್ರಾಮಗಳ ಸೇರ್ಪಡೆಗೆ ಮುಂದಾಗುತ್ತಿರೋದ್ಯಾಕೆ? ಎಂದು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಗ್ರಾಮಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿವೆ. ಪಾಲಿಕೆ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡದೇ, ಅವಳಿನಗರದ ಸುತ್ತಲೂ ಇರುವ ಗ್ರಾಮಗಳ ಸೇರ್ಪಡೆಯ ಚಿಂತನೆ ನಡೆಸಿದೆ. ಇದು ಹಲವು ಅನುಮಾನ ಮೂಡಿಸಿವೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಸ್ವ ಹಿತಾಸಕ್ತಿಗಾಗಿ ಗ್ರಾಮಗಳ ಸೇರ್ಪಡೆಗೆ ಮುಂದಾಗುತ್ತಿದ್ದಾರಾ ಆಡಳಿತ ಪಕ್ಷದ ಸದಸ್ಯರು? ಎಂದು ಪಾಲಿಕೆ ಅಧಿಕಾರಿಗಳ ಹಾಗೂ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷ ಕೆಂಡಾಮಂಡಲವಾಗಿದೆ. ನಗರ ಪ್ರದೇಶಗಳಲ್ಲಿ ಕುಂಠಿತಗೊಂಡಿರುವ ಅಭಿವೃದ್ದಿ ಬಗ್ಗೆ ಯೋಚನೆ ಮಾಡದ ಪಾಲಿಕೆಗೆ ರಿಯಲ್ ಎಸ್ಟೇಟ್ ಮೇಲೆ ಕಣ್ಣು ಬಿದ್ದಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಏಕಾಏಕಿ ಕಂದಾಯ ಗ್ರಾಮಗಳ ಸೇರ್ಪಡೆಗೆ ಪಾಲಿಕೆ ರೂಪುರೇಷೆ ನಡೆಸಿದೆ ಎಂದು ಕಿಡಿಕಾರುತ್ತಿದ್ದಾರೆ.
ಒಟ್ಟಿನಲ್ಲಿ ಹೇಳಬೇಕೆಂದ್ರೆ ಆಡಳಿತ ಪಕ್ಷದ ಈ ಏಕಪಕ್ಷೀಯ ನಡೆಗೆ ವಿಪಕ್ಷದಿಂದ ವಿರೋಧ ಮಾಡುತ್ತಿದೆ. ಗ್ರಾಮಗಳಲ್ಲಿ ಏಬೇ ಇದ್ರು ಪಂಚಾಯತಿ ಮಟ್ಟದಲ್ಲಿ ಮಾಡಿಕೊಳ್ಳುತ್ತಾರೆ. ನಗರಗಳ ಅಭಿವೃದ್ಧಿಗೆ ಅನುದಾನ ಇಲ್ಲ. ಅಂತದರಲ್ಲಿ ತಮ್ಮ ಉದ್ದೇಶಕ್ಕೆ ಗ್ರಾಮದ ಜನರನ್ನು ಬಲಿ ಕೊಡ್ತಿದ್ದಾರೆಂದು ವಿರೋಧ ಪಕ್ಷ ಕೆಂಡಾಮಂಡಲವಾಗಿದೆ.












Click it and Unblock the Notifications