ತಿಮ್ಮಾಪುರ ಕ್ರಾಸ್ ನಲ್ಲಿ ಟ್ಯಾಂಕರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಬಸ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 12: ಬೆಂಗಳೂರು ಮೂಲದ ಖಾಸಗಿ ಐಷಾರಾಮಿ ಬಸ್ ವೊಂದು ಪುಣೆ-ಬೆಂಗಳೂರು ಹೆದ್ದಾರಿಯ ತಿಮ್ಮಾಪುರ ಕ್ರಾಸ್ ಬಳಿ ಮಂಗಳವಾರ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಜರ್ಮನಿಯ ಮಹಿಳೆಯೊಬ್ಬರು ಸೇರಿದ ಹಾಗೆ ಆರು ಮಂದಿ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಚಾಲಕ ಮೆಹಬೂಬ್ ಮೈನುದ್ದೀನ್, ಗಬ್ಬರ್ ಮಿಯಾ ಹಾಗೂ ಟೆಗಿ, ಕೊಯಮತ್ತೂರಿನ ಇಷಾ ಫೌಂಡೇಷನ್ ನಲ್ಲಿ ಕೆಲಸ ಮಾಡುವ ಜರ್ಮನ್ ಮೂಲದವರು ಗಾಯಾಳುಗಳಾಗಿದ್ದಾರೆ. ಬಸ್ ಚಾಲಕರ ನಿಯಂತ್ರಣ ತಪ್ಪಿ, ಟ್ಯಾಂಕರ್ ಗೆ ಡಿಕ್ಕಿ ಹೊಡೆದು, ಆ ನಂತರ ಉರುಳಿದೆ ಎಂದು ಕುಂದಗೋಳದ ಇನ್ ಸ್ಪೆಕ್ಟರ್ ದಿನೇಶ್ ಮಾಹಿತಿ ನೀಡಿದ್ದಾರೆ.[ಮಂಡ್ಯ: ನಿಂತ ಲಾರಿಗೆ ಬಸ್ ಡಿಕ್ಕಿ, 30 ಮಂದಿಗೆ ಗಾಯ]

6 injured as bus topples on highway

ಈ ಘಟನೆಯಿಂದ ಕೆಲ ಸಮಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಆ ನಂತರ ಪೊಲೀಸರು ಸಂಚಾರ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದರೆ. ಐಷಾರಾಮಿ ಬಸ್ಸು ಬೆಂಗಳೂರಿಬ ಖಾಸಗಿ ಟ್ರಾವೆಲ್ ಕಂಪೆನಿಯೊಂದಕ್ಕೆ ಸೇರಿದ್ದು, ಬಸ್ಸು ಹಾಗೂ ಲಾರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six people, including a German woman, were injured after a luxury bus hit a tanker at Timmapur Cross on Pune-Bengaluru Highway here on Tuesday.
Please Wait while comments are loading...