ಕಲಘಟಗಿಯ ಕುಂದ್ಲಿಯಲ್ಲಿ ವ್ಯಕ್ತಿ ಮೇಲೆ ಗುಂಡಿನ ದಾಳಿ
ಹುಬ್ಬಳ್ಳಿ, ಅಕ್ಟೋಬರ್, 20 : ಕಲಘಟಗಿ ತಾಲೂಕಿನಲ್ಲಿ ಬುಧವಾರ ಬೆಳಿಗ್ಗೆ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಇದೇನು ಮೊದಲಲ್ಲ. ಹಾಗಾಗಾ ಜಿಲ್ಲೆಯಲ್ಲಿ ಇಂತಹ ಗುಂಡಿನ ಸದ್ದು ಸಾಮಾನ್ಯವಾಗಿದೆ.
ಕಲಘಟಗಿ ತಾಲೂಕಿನ ಕಂದ್ಲಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಂಜುನಾಥ ಹೊಸಮನಿ (30) ಎಂಬವರ ಮೇಲೆ ಬುಧವಾರ ಬೆಳಗ್ಗೆ 9 ಗಂಟೆಯ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಮಂಜುನಾಥ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಸ್ಥಿತಿ ಗಂಭೀರವಾಗಿದೆ.

ಮಂಜುನಾಥ ತೊಳಸೂರು ಮತ್ತು ಮೂವರು ಸಹಚರರು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ, ಈ ದಾಳಿಯಿಂದ ಕುದ್ಲಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.
ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.












Click it and Unblock the Notifications