Shiradighat: ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಶುರು!
ಸಕಲೇಶಪುರ ಜುಲೈ 31: ಸಕಲೇಶಪುರದಲ್ಲಿ ಗುಡ್ಡ ಕುಸಿತದಿಂದ ಬಂದ್ ಮಾಡಲಾಗಿದ್ದ ಶಿರಾಡಿಘಾಟ್ ರಸ್ತೆಯಲ್ಲಿ ಮಣ್ಣು ತೆರವುಗೊಳಿಸಲಾಗಿದ್ದು ವಾಹನ ಸಂಚಾರ ಮತ್ತೆ ಶುರು ಮಾಡಲಾಗಿದೆ.
ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲೆ ಬಳಿ ಗುಡ್ಡ ಕುಸಿದು ಹಲವಾರು ವಾಹನಗಳು ಕೆಸರಿನಲ್ಲಿ ಮುಚ್ಚಿ ಹೋಗಿದ್ದವು. ಇದರಿಂದಾಗಿ ಶಿರಾಡಿಘಾಟ್ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ನೆನ್ನೆಯಿಂದ ದಾರಿ ಮಧ್ಯೆ ಸಿಲುಕಿದ್ದ ವಾಹನಗಳನ್ನ ತೆಗೆಯುತ್ತಾ ಮಣ್ಣು ತೆರವು ಕಾರ್ಯಚರಣೆಯನ್ನು ಆರಂಭಿಸಿದ್ದ ಅಧಿಕಾರಿಗಳು ಕೆಸರಿನಲ್ಲಿ ಸಿಲುಕಿದ ಟ್ರಕ್ ಅನ್ನು ಹೊರತೆಗೆದಿದ್ದಾರೆ.

ಭಾರೀ ಪ್ರಮಾಣದ ಮಣ್ಣು ಕುಸಿದು ಕೆಸರು ಮಯವಾದ ಶಿರಾಡಿಘಾಟ್ ರಸ್ತೆಯಲ್ಲಿ ಸದ್ಯ ಈಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅದಾಗ್ಯೂ ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಸರು ನಿಂತಿದ್ದು ಕೆಸರಿನ ನಡುವೆಯೇ ವಾಹನಗಳು ಸಂಚಾರ ಮಾಡುತ್ತಿವೆ. ರಸ್ತೆಗೆ ಬಿದ್ದಿದ್ದ ಮಣ್ಣು ತೆರವು ಬಳಿಕ ಕೆಸರಿನಿಂದಾಗಿ ನಿಧಾನವಾಗಿ ವಾಹನಗಳು ಸಂಚಾರಿಸುತ್ತಿವೆ.
ಕಳೆದ ಎರಡು ವಾರಗಳಲ್ಲಿ ಶಿರಡಿಘಾಟ್‌ನಲ್ಲಿ ಮೂರನೇ ಬಾರಿ ಗುಡ್ಡ ಕುಸಿತವಾಗಿದೆ. ಇದು ಪ್ರಕೃತಿ ವಿಕೋಪವಲ್ಲ, ಗುತ್ತಿಗೆದಾರನ ಮಹಾಲೋಪ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ. ಕಳೆದ ವಾರ ಸಕಲೇಶಪುರ ತಾಲ್ಲೂಕಿನ ಇದೇ ದೊಡ್ಡತಪ್ಪು ಬಳಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ಹೀಗಾಗಿ ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿತ್ತು.

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತ ಸಂಭವಿಸಿರುವುದಕ್ಕೆ ಕಳಪೆ ಗುಣಮಟ್ಟದ ಕಾಮಗಾರಿ ಎನ್ನಲಾಗಿದೆ. ಈ ರಸ್ತೆಯನ್ನು ಕೂಡಲೇ ಬಂದ್ ಮಾಡದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತವಾದರೆ ಅದಕ್ಕೆ ಸರ್ಕಾರ ನೆರೆಹೊಣೆಯಾಗಬೇಕಾಗುತ್ತದೆ.
ಇದು ಪ್ರಕೃತಿ ವಿಕೋಪವಲ್ಲ ಗುತ್ತಿದಾರನ ಮಹಾಲೋಪ ಎಮದು ಸಾರ್ವಜನಿಕರ ಆರೋಪವಾಗಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿ ಘಾಟ್ ಪ್ರಮುಖ ರಸ್ತೆಯಾಗಿದೆ. ಉಳಿದಂತೆ ಚಾರ್ಮಾಡಿ ಘಾಟ್ ಮತ್ತು ಸಂಪಾಜೆ ಘಾಟಿಯಿಂದಲೂ ಬೆಂಗಳೂರಿಗೆ ಸಂಪರ್ಕ ಬೆಳೆಸಬಹುದಾಗಿದೆ. ಆದರೆ, ಈ ರಸ್ತೆಗಳು ಅಗಲ ಕಿರಿದಾಗಿರುವುದರಿಂದ ಹೆಚ್ಚಿನ ವಾಹನಗಳ ಓಡಾಟಕ್ಕೆ ಅನುಕೂಲವಾಗಿಲ್ಲ.

ಶಿರಾಡಿ ರಸ್ತೆಯ ಬದಲಿಗೆ ಈ ರಸ್ತೆಗಳನ್ನು ಸಂಚಾರಕ್ಕೆ ಬಳಸಿದರೆ ಘಾಟಿಯಲ್ಲಿ ವಾಹನಗಳ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಜುಲೈ 15ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಶಿರೂರು ಗುಡ್ಡ ಕುಸಿತ ಪ್ರಕರಣ ವಿಶ್ವಮಠದಲ್ಲಿ ಸುದ್ದಿಯಾಗಿದೆ. ಹಾಗೆ ಹಾಸನ ಜಿಲ್ಲೆಯ ಸಕಲೇಶಪುರ ಗುಂಡ್ಯ ನಡುವಿನ ಶಿರಾಡಿ ಘಾಟ್ ನಡುವೆ ಈ ವರ್ಷದಲ್ಲಿ ನಾಲ್ಕನೇ ಬಾರಿ ಗುಡ್ಡ ಕುಸಿತವಾಗಿದೆ.
ಇದರಿಂದ ಹಲವಾರು ವಾಹನಗಳು ಸಿಲುಕಿಕೊಂಡಿದ್ದವು. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಒಟ್ಟಿನಲ್ಲಿ ಸರ್ಕಾರ ಟೆಂಡರ್ ಕೊಡುವ ಮುನ್ನ ಇಂತಹ ವಿಚಾರಗಳ ಬಗ್ಗೆ ಗಮನಕೊಡುವುದು ಮುಖ್ಯವಾಗಿದೆ.












Click it and Unblock the Notifications