ಯುವತಿಯೊಂದಿಗೆ ಅಸಭ್ಯ ವರ್ತನೆ ಬಸ್ ನಿರ್ವಾಹಕನಿಗೆ ಗೂಸಾ
ಬೆಂಗಳೂರು, ಹಾಸನ 12 : ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಹ ಪ್ರಯಾಣಿಕರಿಂದ ಗೂಸಾ ತಿಂದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೊಳೆನರಸಿಂಹಪುರ ಡಿಪೊಗೆ ಸೇರಿದ ಬಸ್‌ನ ನಿರ್ವಾಹಕ ಜವಾಹರ್ ಅಹ್ಮದ್ ಗೂಸಾ ತಿಂದಿರುವ ಆಸಾಮಿ. ನಿನ್ನೆ(ಡಿಸೆಂಬರ್ 11) ರಾತ್ರಿ ಹಾಸನದಿಂದ ಬೆಂಗಳೂರಿಗೆ ಬಸ್ ಸಂಚರಿಸುತ್ತಿತ್ತು, ಬಸ್ ರಶ್ ಇದ್ದ ಕಾರಣ ಯುವತಿ, ನಿರ್ವಾಹಕನಿಗೆ ಮೀಸಲಾದ ಸೀಟಿನ ಪಕ್ಕದ ಸೀಟಿನಲ್ಲೇ ಕೂತಿದ್ದರು. ಬಸ್ ಲೈಟ್ ಆಫ್ ಆಗುತಿದ್ದಂತೆಯೇ ಯುವತಿಯ ಮೈ-ಕೈ ಮುಟ್ಟಲು ಅಹ್ಮದ್ ಪ್ರಾರಂಭಿಸಿದ್ದಾನೆ.

ನಿರ್ವಾಹಕನ ವರ್ತನೆಯಿಂದ ಗಾಬರಿಯಾದ ಯುವತಿ ಕಿರುಚಿದ್ದಾಳೆ, ಕೂಡಲೆ ಸಹ ಪ್ರಯಾಣಿಕರು ನಿರ್ವಾಹಕ ಜವಾಹಾರ್ ಅಹಮದ್ ನಿಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ನಂತರ ಅಹ್ಮದ್‌ನನ್ನು ಕುಣಿಗಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications