10, 20ರೂ ಕೊಟ್ರೆ ಆಗಲ್ಲ, ರಾಜಸ್ಥಾನದಿಂದ ಬಂದು ಹಣಕ್ಕಾಗಿ ಪೀಡಿಸಿದ ಯುವತಿಯರ ಗುಂಪು
ಚಿಕ್ಕಮಗಳೂರು, ಮೇ 24: ಮನೆ ಬಿದ್ದು ಹೋಗಿದೆ. ಹಾಕಲು ಬಟ್ಟೆ ಇಲ್ಲ, ಪ್ರಕೃತಿ ವಿಕೋಪದಿಂದ ಮನೆ ಆಸ್ತಿ ಕಳೆದು ಕೊಂಡಿದ್ದೇವೆ ಎಂದು ಅನುಕಂಪದ ಮಾತುಗಳನ್ನಾಡಿ ಜನರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಐವರು ಯುವತಿಯರ ವಿರುದ್ಧ ಸಾರ್ವಜನಿಕರು ಗರಂ ಆಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಐವರು ಯುವತಿಯರು ರಾಜಸ್ತಾನದವರು ಎನ್ನಲಾಗುತ್ತಿದ್ದು, ಸ್ಟೈಲಾಗಿ ಡ್ರಸ್ ಮಾಡಿಕೊಂಡು ಮನೆ ಮನೆಗೆ ಹೋಗಿ ಕಷ್ಟಗಳನ್ನು ಹೇಳಿಕೊಂಡು ಹಣ ಸಂಗ್ರಹಿಸುತ್ತಿದ್ದರು. 10, 20 ರೂ. ನೀಡಿದರೇ ಬೇಡ ಎನ್ನುತ್ತಿದ್ದ ಯುವತಿಯರು 100, 200 ರೂ. ಕೊಡುವಂತೆ ಪೀಡಿಸುತ್ತಿದ್ದರು.

ಯುವತಿಯ ಈ ನಡೆಯನ್ನು ಗಮನಿಸಿದ ಕೆಲವರು ಅವರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಸ್ಥಳೀಯರು ವಿಚಾರಿಸಲು ಮುಂದಾಗುತ್ತಿದ್ದಂತೆ ಆಟೋ ಹತ್ತಿ ಸ್ಥಳದಿಂದ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಯುವತಿಯರು ಮನೆ ಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇಂತವರು ನಿಮ್ಮ ಮನೆ ಬಳಿಗೆ ಬಂದರೇ ಹಣ ನೀಡಬೇಡಿ ಎಂಬ ಸಂದೇಶವನ್ನು ಸ್ಥಳೀಯರು ರವಾನಿಸಿದ್ದಾರೆ.
ಹಾಸನ ಪೊಲೀಸರ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ
ಹಾಸನ: ಹಾಸನ ಜಿಲ್ಲೆಯ ಪೊಲೀಸರು ಮಾಡಿರುವ ಹೊಸ ಪ್ರಯತ್ನದಿಂದ ಮೊಬೈಲ್ ಕಳೆದುಕೊಂಡಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದು ಒಂದು ತಿಂಗಳ ಹಿಂದೆಯಷ್ಟೇ ಎಸ್ಪಿ ಹರಿರಾಮ್ ಶಂಕರ್ ಕಳೆದುಹೋಗಿರೋ ಮೊಬೈಲ್ ಗ್ರಾಹಕರಿಗೊಂದು ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿದ್ದರು.

ವಾಟ್ಸಾಪ್ ಮೂಲಕ ವಿನೂತನ ಪ್ರಯತ್ನವನ್ನು ಲಾಂಚ್ ಮಾಡಿ, 8277959500 ನಂಬರ್‌ಗೆ ಹಾಯ್ ಅಂತಾ ಮೆಸೇಜ್ ಹಾಕಿ ಬೇಸಿಕ್ ಮಾಹಿತಿಯನ್ನು ತಿಳಿಸುವಂತೆ ಹೇಳಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಸ್ಪೇಷನ್‌ಗಳಲ್ಲಿಯೂ ಹೆಲ್ಪಲೈನ್‌ನ ಬ್ಯಾನರ್‌ಗಳನ್ನು ಹಾಕಲಾಗಿತ್ತು.
ಇದೀಗ ಪೊಲೀಸರು ತಮ್ಮ ಮೊದಲ ಪ್ರಯತ್ನದಲ್ಲೇ ಯಶ ಕಂಡಿದ್ದು, ಬರೋಬ್ಬರಿ 1,400 ಕ್ಕೂ ಹೆಚ್ಚು ದೂರುಗಳು ದಾಖಲಾಗಿತ್ತು, 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನ ಪತ್ತೆ ಮಾಡಿದ್ದಾರೆ.
ಹಾಸನ ಜಿಲ್ಲೆಯ ಪೊಲೀಸರು ರಾಜ್ಯ ಮಾತ್ರವಲ್ಲದೇ ಕೇರಳ, ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶಕ್ಕೆ ಹೋಗಿ ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. 24 ವಿವೋ, 25 ಸ್ಯಾಮ್ ಸ್ಯಾಂಗ್, 33 ರೆಡ್ ಮಿ, 11 ಒನ್ ಪ್ಲಸ್, 2 ಹಾನರ್ ಸೇರಿ ಒಟ್ಟು 148 ಮೊಬೈಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.
ಮೊಬೈಲ್ ಕಳೆದುಕೊಂಡವರು ಹೆಲ್ಪ್ ಲೈನ್ ನಂಬರ್‌ಗೆ ಹಾಯ್ ಅಂತಾ ಮೆಸೇಜ್ ಹಾಕಿ, ಬೇಕಾದ ಮಾಹಿತಿಯನ್ನು ಪೋರ್ಟ್‌ನಲ್ಲಿ ಹಾಕಿದರೆ ಸಾಕು. ಪೊಲೀಸ್ ಕೇಸ್ ಇರುವುದಿಲ್ಲ. ಯಾವುದೇ ಪ್ರೊಸಿಸರ್ ಇರೋದಿಲ್ಲ, ಮಹಜರ್ ಅನ್ನೋ ತಲೆನೋವು ಕೂಡಾ ಇರೋದಿಲ್ಲ. ಪೊಲೀಸರ ಈ ಸರಳವಾದ ಪ್ರಯೋಗಕ್ಕೆ ಸಾರ್ವಜನಿಕರಿಂದ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸರು ಗ್ರಾಹಕರ ಬೇಸಿಕ್ ಮಾಹಿತಿಯನ್ನು ಪಡೆದುಕೊಂಡು ಕಳೆದುಹೋಗಿರುವ ಮೊಬೈಲ್‌ಗಳನ್ನು ವಾಪಸ್ಸು ತಂದು ಕೊಡುತ್ತಾರೆ. ಈ ಹೊಸ ಪ್ರಯತ್ನದಿಂದ ಮೊಬೈಲ್ ಕದ್ದಿರುವವನು ಸಿಗದೇ ಇದ್ದರೂ ಮೊಬೈಲ್ ಮಾತ್ರ ಪಕ್ಕಾ ಸಿಗುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ಸೆಟ್ ತಗೊಂಡವನಿಗೆ ಪಂಗನಾಮ ಗ್ಯಾರಂಟಿಯಾಗಿದೆ. ಇತ್ತ ಮೊಬೈಲ್ ಕಳ್ಕೊಂಡು, ಅತ್ತ ಮೊಬೈಲ್‌ಗೆ ಕೊಟ್ಟಿದ್ದ ಹಣವನ್ನೂ ಕೂಡ ಕಳೆದುಕೊಳ್ಳಬೇಕಾಗುತ್ತದೆ.












Click it and Unblock the Notifications