Breaking; ಯಶ್ ಸಿನಿಮಾದಂತೆ ಇವರು ಅಣ್ತಮ್ಮಸ್ ಅಂದ್ರು ಆರ್. ಅಶೋಕ!
ಹಾಸನ, ಏಪ್ರಿಲ್ 27; "ನಾವು ಎ ಟಿಂ ಬಿ ಟೀಂ ಮಾತು ಕೇಳಲ್ಲ. ಕಾಂಗ್ರೆಸ್, ಜೆಡಿಎಸ್ ಸಂಬಂಧ ಏನು ಎಂದು ನೀವೇ ಹೇಳಿ" ಎಂದು ಕಂದಾಯ ಸಚಿವ ಆರ್. ಅಶೋಕ ಪ್ರತಿಪಕ್ಷಗಳ ವಿರುದ್ಧ ಆರೋಪ ಮಾಡಿದರು.
ಬುಧವಾರ ಹಾಸನದಲ್ಲಿ ಮಾತನಾಡಿದ ಆರ್. ಅಶೋಕ, "ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡರು. ದೇವೇಗೌಡರು ಯಾರ ಬೆಂಬಲದಿಂದ ಪ್ರಧಾನಮಂತ್ರಿ ಆದರು?" ಎಂದು ಪ್ರಶ್ನಿಸಿದರು.
"ಕುಮಾರಸ್ವಾಮಿ ಯಾರ ಬೆಂಬಲದಿಂದ ಮುಖ್ಯಮಂತ್ರಿಯಾದರು. ಧರ್ಮಸಿಂಗ್ ಕಾಲದಲ್ಲಿ ಯಾರ ಜೊತೆ ಸೇರಿ ಸರ್ಕಾರ ರಚನೆ ಮಾಡಿದರು. ನಮ್ಮ ಜೊತೆ ಒಂದು ಬಾರಿ ಮಾತ್ರ ಮೈತ್ರಿ ಮಾಡಿಕೊಂಡಿದ್ದು" ಎಂದು ಸಚಿವ ಆರ್. ಅಶೋಕ ಹೇಳಿದರು.

"ಹತ್ತು ಸರಿ ಹೊಂದಾಣಿಕೆ ಮಾಡ್ಕಂಡು ಎ ಟೀಂ ಬಿ ಟೀಂ ಅಲ್ಲ ಅಂತ ಏಕೆ ನಮ್ಮ ಮೇಲೆ ಆಪಾದನೆ ಮಾಡುತ್ತೀರಿ. ಇವರಿಬ್ಬರು ಪಕ್ಕಾ ಅಣ್ತಮ್ಮಸ್ ಇದ್ದಂತೆ. ಯಶ್ ಸಿನಿಮಾದಲ್ಲಿ ಬರುವಂತೆ ಅಣ್ತಮ್ಮಸ್" ಎಂದು ಸಚಿವರು ತಿಳಿಸಿದರು.
"ಇವತ್ತಿಗೂ ದೇವೇಗೌಡರಿಗೆ ಕಾಂಗ್ರೆಸ್ ಕಡೆಗೆ ಒಲವು ಇದೆ. ನಮಗೆ ಎ ಟೀಂ, ಬಿ ಟೀಂ ಅವಶ್ಯಕತೆ ಇಲ್ಲ. ಅಭಿವೃದ್ಧಿ ವಿಚಾರವಾಗಿ ನಾವು, ನಮ್ಮ ಸರ್ಕಾರ ನಿಲುವನ್ನು ತೆಗೆದುಕೊಂಡಿದೆ" ಎಂದು ಆರ್. ಅಶೋಕ ಸ್ಪಷ್ಟಪಡಿಸಿದರು.
ಇನ್ನು ಹಾಸನದಲ್ಲಿ ನೂತನ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಮಾಜಿ ಸಚಿವ ಎಚ್. ಡಿ. ರೇವಣ್ಣ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ, "ಹಾಸನಕ್ಕೂ-ಹೊಳೆನರಸೀಪುರಕ್ಕು ಏನು ಸಂಬಂಧ?" ಎಂದರು.
"ಅಭಿವೃದ್ಧಿ ಕಾರ್ಯಕ್ಕೆ ಯಾರು ತೊಂದರೆ ಕೊಡಬಾರದು. ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆ ಉರಿ?. ನಿಮ್ಮ ಕೈಯಲ್ಲಿ ಮಡೋಕೆ ಆಗಿಲ್ಲ, ಹೊಸದಾಗಿ ಮಾಡುವುದಕ್ಕೆ ಹೋದರೆ ಯಾಕೆ ಕಲ್ಲು ಹಾಕ್ತಿರ?. ಅವರ ಕ್ಷೇತ್ರವನ್ನು ಅವರು ನೋಡಿಕೊಳ್ಳಲಿ, ಇಲ್ಲಿಯವರೆಗೂ ಬರೋದು ಬೇಡ" ಎಂದು ತಿಳಿಸಿದರು.












Click it and Unblock the Notifications