ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಅಸಹಾಯಕ ಎಂದು ಹಾಸನದಲ್ಲಿ ಕಣ್ಣೀರಿಟ್ಟ ದೇವೇಗೌಡರು...

|
Google Oneindia Kannada News

ಹಾಸನ, ಜೂನ್ 23: ಬರಗಾಲದಿಂದ ಕಂಗೆಟ್ಟು ರೈತರು ಆತಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂಕಷ್ಟದ ಸ್ಥಿತಿಯಲ್ಲೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಮಾಜಿ ಪ್ರಧಾನಿ - ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಶ ಎಚ್ ಡಿ ದೇವೇಗೌಡರು ಗುರುವಾರ ಕಣ್ಣೀರು ಹಾಕಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ್ರೆ ಕಾವೇರಿ ಸಮಸ್ಯೆ ಖಲ್ಲಾಸ್: ಬಿಎಸ್ವೈಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ್ರೆ ಕಾವೇರಿ ಸಮಸ್ಯೆ ಖಲ್ಲಾಸ್: ಬಿಎಸ್ವೈ

ಹಾಸನ ಜಿಲ್ಲೆಯ ಕೊಣನೂರು ಹೋಬಳಿಯ ಕಟ್ಟೇಪುರ ಗ್ರಾಮದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಮೂರು ತಿಂಗಳೊಳಗೆ ಕಾವೇರಿ ನೀರು ಹಂಚಿಕೆಯ ತೀರ್ಮಾನ ಆಗಲಿದೆ. ಈಗಿನ ಸನ್ನಿವೇಶ ನೋಡುತ್ತಿದ್ದರೆ ರಾಜ್ಯಕ್ಕೆ ನ್ಯಾಯ ದೊರಕುವುದು ಅನುಮಾನ ಎಂದು ಅವರು ಕಣ್ಣೀರಿಟ್ಟಿದ್ದಾರೆ.

No justice in Cauvery dispute to Karnataka, former PM HD Deve gowda tears

ಈಗಿನ ಪರಿಸ್ಥಿತಿಯಲ್ಲಿ ಉಪವಾಸಕ್ಕೆ ಕೂತು ಸತ್ಯಾಗ್ರಹ ಮಾಡುವಷ್ಟು ಚೈತನ್ಯ ಕೂಡ ನನಗಿಲ್ಲ ಎಂದು ನೊಂದು ನುಡಿದ ಅವರು, ನಾನು ಅಸಹಾಯಕನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ಸಂದಿಗ್ಧಕ್ಕೆ ಸಿಲುಕಿದ್ದಾಗ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ದೇವೇಗೌಡರು ಪ್ರಧಾನಿ ಮೋದಿ ಗಮನ ಸೆಳೆದಿದ್ದರು.

ಕಾವೇರಿ ಹಂಚಿಕೆಯಲ್ಲಿ ಕರ್ನಾಟಕದ ಸೋಲಿಗೆ ಕಾರಣ ಇಲ್ಲಿದೆ, ಪರಿಹಾರವೂ ಇದೆ...ಕಾವೇರಿ ಹಂಚಿಕೆಯಲ್ಲಿ ಕರ್ನಾಟಕದ ಸೋಲಿಗೆ ಕಾರಣ ಇಲ್ಲಿದೆ, ಪರಿಹಾರವೂ ಇದೆ...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ಬೆಂಬಲ ಸೂಚಿಸಿ, ಕೆಲವು ಮಹತ್ವದ ಸಲಹೆಗಳನ್ನು ಕೊಟ್ಟಿದ್ದರು. ಇದಕ್ಕಾಗಿ ಸ್ವತಃ ಸಿದ್ದರಾಮಯ್ಯ ಕೂಡ ಧನ್ಯವಾದ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
We cannot expect justice in Cauvery dispute to Karnataka, Iam helpless, former PM HD Deve gowda tears in Hassan district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X