ಹಾಸನ: 400 ಹೋತಗಳನ್ನು ಬಲಿಕೊಟ್ಟು ಹರಕೆ ತೀರಿಸಿದ ಶಾಸಕ ಪ್ರೀತಂಗೌಡ
ಹಾಸನ ಏಪ್ರಿಲ್ 6: ಶ್ರೇಯಸ್ಸಿಗಾಗಿ ಶಕ್ತಿ ದೇವತೆಗೆ ಹರಕೆ ಹೊತ್ತಿದ್ದ ಶಾಸಕ ಪ್ರೀತಂಗೌಡ 400 ಹೋತಗಳನ್ನು ಬಲಿಕೊಟ್ಟು ಹರಕೆ ತೀರಿಸಿದ್ದಾರೆ. ಶಾಸಕರ ಈ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಮೂಕಪ್ರಾಣಿಗಳನ್ನು ಬಲಿಕೊಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಹಾಸನ ತಾಲ್ಲೂಕಿನ ಶಕ್ತಿದೇವತೆ ಪುರದಮ್ಮನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಕುಟುಂಬ ಸಮೇತ ಪುರದಮ್ಮ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಶಾಸಕರು ಈ ವೇಳೆ 400 ಹೋತಗಳನ್ನು ಬಲಿಕೊಟ್ಟು ಹರಕೆ ತೀರಿಸಿದ್ದಾರೆ. ಶಾಸಕರ ಅಭಿಮಾನಿಗಳು ಜಟ್ಕಾ ಕಟ್ ಮೂಲಕವೇ ಹೋತಗಳನ್ನ ಬಲಿಕೊಟ್ಟಿದ್ದಾರೆ.

ಪುರದಮ್ಮ ಸನ್ನಿದಿಯಲ್ಲಿ ನೂರಾರು ಮೇಕೆ ಬಲಿ ನೀಡಿ ಹರಕೆ ಸಲ್ಲಿಸಲಾಗಿದ್ದು, ಹರಕೆಯ ಬಳಿಕ ಮಧ್ಯಾಹ್ನ ಕ್ಷೇತ್ರದ ಸಹಸ್ರಾರು ಜನರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಹಾಸನ ಹೊರವಲಯದ ಉದ್ದೂರು ಸಮೀಪ ಬೃಹತ್ ಪೆಂಡಾಲ್ ರೆಡಿಯಾಗಿದ್ದು 30 ಸಾವಿರಕ್ಕೂ ಅಧಿಕ ಜನರಿಗೆ ಬಾಡೂಟ ನೀಡಲು ತಯಾರಿ ನಡೆಸಲಾಗುತ್ತಿದೆ.
Recommended Video

ಕೋಡಿ ಮಠದ ಸ್ವಾಮಿಗಳು 2022ರ ಭವಿಷ್ಯ ನುಡಿದಿದ್ದಾರೆ | Oneindia Kannada












Click it and Unblock the Notifications