ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವ ಸ್ಥಿತಿ ನಮ್ಮದು: ಶಿವಲಿಂಗೇಗೌಡ ವಿರುದ್ಧ ರೇವಣ್ಣ ವ್ಯಂಗ್ಯ

ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ನಾನೇನಾದರೂ ಒಂದು ಪದ ಎಡಿಟ್ ಮಾಡಿರುವುದನ್ನು ತೋರಿಸಿದರೆ, ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಹಾಸನ, ಮಾರ್ಚ್ 20: ಇತ್ತೀಚೆಗೆ ವೈರಲ್ ಆಗಿದ್ದ ಎಚ್.ಡಿ.ರೇವಣ್ಣ ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡುವಿನ ಆಡಿಯೋ ಸಂಭಾಷಣೆ ಬಗ್ಗೆ ಮಾಜಿ ಸಚಿವ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವ ಪರಿಸ್ಥಿತಿ ಈಗ ನಮಗೆ ಬಂದಿದೆ ಎಂದಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ನನಗೆ ಗೊತ್ತಿಲ್ಲ. ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ನಾನೇನಾದರೂ ಒಂದು ಪದ ಎಡಿಟ್ ಮಾಡಿರುವುದನ್ನು ತೋರಿಸಿದರೆ, ಆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಶಾಸಕ ಶಿವಲಿಂಗೇಗೌಡರಿಗೆ ಸವಾಲು ಹಾಕಿದ್ದಾರೆ.

Former Minister HD Revanna Sarcasm Against Arsikere MLA Shivalinge Gowda

ಶಿವಲಿಂಗೇಗೌಡ ರಾಗಿ ಕಳ್ಳ ಎಂದ ಕೂಡಲೇ ಪ್ರಮಾಣ ಮಾಡಲಿಲ್ವಾ, ಕಳೆದ ಒಂದು ವರ್ಷದಿಂದ ಇದು ನಡೆಯುತ್ತಿದೆ. ಕುರುಬರು, ಲಿಂಗಾಯಿತರು, ಒಕ್ಕಲಿಗರು ನನಗೆ ಓಟು ಹಾಕಲ್ಲ ಎಂದು ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರುವುದನ್ನು ತೋರಿಸಿದರೆ, ಆ ಧರ್ಮಸ್ಥಳದ ಮಂಜುನಾಥ ನನ್ನ‌ನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನು ನೋಡಿಕೊಳ್ಳಲಿ. ದೇವರ ಮೇಲೆ ಸತ್ಯ ಮಾಡಲಿ ಬನ್ನಿ ಹೋಗೋಣ ಎಂದರು.

ಅರಸೀಕೆರೆ ಜನ ದುಡ್ಡು ಇಲ್ಲದೆ ಓಟು ಹಾಕಲ್ಲ ಎನ್ನುತ್ತಾರೆ. ಹಾಗಾದರೆ ಹದಿನೈದು ವರ್ಷ ಅರಸೀಕೆರೆ ಜನ ದುಡ್ಡು ತೆಗೆದುಕೊಂಡು ಓಟು ಹಾಕಿದರಾ. ನಾನು ಒಂದು ಬಿಡಗಾಸು ತೆಗೆದುಕೊಂಡಿದ್ದೇನೆ ಎಂದರೆ ರಾಜಕೀಯ ಬಿಟ್ಟು ಹೋಗುತ್ತೇನೆ. ದೇವರು ಎನ್ನುವುದು ಇದ್ದರೆ ಇದೆಲ್ಲಾ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲೇಬೇಕು ಅಂತ ಹೊರಟರು ಏನಾಯಿತು? ರಾಜಕೀಯ ವಿದ್ಯಾಮಾನ ಏನಾಯ್ತು ಎಂದು ಸಮಯ ಬಂದಾಗ ಹೇಳುತ್ತೇನೆ. ಇನ್ನೊಂದು ಸ್ವಲ್ಪ ಬಿಚ್ಚೋದಿದೆ. ಎಳೆಎಳೆಯಾಗಿ ಬಿಚ್ಚುತ್ತೇನೆ. ಹದಿನೈದು ವರ್ಷದಲ್ಲಿ ನಮ್ಮದು ಬಿಚ್ಚಿಡಲು ಏನೇನಿದೆ ಹೇಳಿ ಎಂದು ಪ್ರಶ್ನಿಸಿದರು.

Former Minister HD Revanna Sarcasm Against Arsikere MLA Shivalinge Gowda

ಮಾತು ಮುಂದುವರಿಸಿದ ಎಚ್‌.ಡಿ ರೇವಣ್ಣ, ಕೌಶಿಕ್ ಮುಖರ್ಜಿ ಹತ್ತಿರ ಕರೆದುಕೊಂಡು ಹೋಗಿ 360 ಹಳ್ಳಿಗೆ ಕುಡಿಯುವ ನೀರು ಮಂಜೂರು ಮಾಡಿಸಿಕೊಟ್ಟೆ. ಆಗ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು. ಇದೇ ಈಶ್ವರಪ್ಪ ಬಂದು ಅಡಿಗಲ್ಲು ಹಾಕಿದ್ದರು. ಸುಳ್ಳು ಜಾಸ್ತಿ ದಿನ ನಡೆಯುವುದಿಲ್ಲ. ಸುಳ್ಳು ಯಾವತ್ತಾದರೂ ಒಂದು ದಿನ ಅಂತ್ಯವಾಗುತ್ತದೆ. ಈಗ ನಾನು ಚಿಕ್ಕ ವಿಷಯವನ್ನು ಬಿಚ್ಚಿಟ್ಟಿದ್ದೇನೆ. ನನ್ನ ಕೈಯಲ್ಲಿ ಆದದ್ದನ್ನು ಮಾಡಿದ್ದೇನೆ.

ಈತನನ್ನು ರಾಜಕೀಯವಾಗಿ ಮೇಲೆ ತರಲು ಏನೇನು ಶಕ್ತಿ ತುಂಬಬೇಕೋ ಅದನ್ನು ತುಂಬಿದ್ದೇನೆ. ಈಗ ಅವರು ಸ್ವಲ್ಪ ದೃಢವಾಗಿದ್ದಾರೆ. ಅವರ ಬಳಿ ಹಣಕಾಸಿದೆ. ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವ ಪರಿಸ್ಥಿತಿ ಈಗ ನಮಗೆ ಬಂದಿದೆ. ಇನ್ನೂ 45 ದಿನ ಪರದೆ ಇದೆ, ಅದರ ಮೇಲೆ ಎಳೆಎಳೆಯಾಗಿ ಆಚೆ ತರುತ್ತೇನೆ. ಅರಸೀಕೆರೆ ಮಹಾಜನತೆ ಸ್ವಾಭಿಮಾನದವರು. ನೀವು ದುಡ್ಡು ತಗೆದುಕೊಂಡು ಹದಿನೈದು ಓಟು ಹಾಕಿದ್ದೀರಾ ಎಂದು ಕೇಳುತ್ತೇನೆ ಎಂದು ಕಿಡಿ ಕಾರಿದರು.

ಎರಡು ವರ್ಷದಿಂದ ಶಿವಲಿಂಗೇಗೌಡರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಲೇ ಇದ್ದರು. ಒಂದು ದಿನ ದೇವೇಗೌಡರ ಮುಂದೆ ಎಲ್ಲಾ ಕುಳಿತಿದ್ದರು. ಆಗ ಒಬ್ಬರು ಫೋನ್ ಮಾಡಿ ಏನು ಸಾರ್ ರಾಮಸ್ವಾಮಿ ಇಲ್ಲೇ ಉಳಿದುಕೊಳ್ಳತ್ತಾರೆ ಎಂದರು. ಕಾಂಗ್ರೆಸ್‌ನವರು ಅವನನ್ನು ಒದ್ದು ಓಡಿಸಿದ್ದಾರೆ, ಅದಕ್ಕೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ಎಂದು ಇದೇ ಶಿವಲಿಂಗೇಗೌಡ ಹೇಳಿದ. ಶಿವಲಿಂಗೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದರು.

Former Minister HD Revanna Sarcasm Against Arsikere MLA Shivalinge Gowda

ಇನ್ನು ಅರಸೀಕೆರೆ ನಗರಸಭೆಯ ಏಳು ಜನ ಅನರ್ಹ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ಅವರು ಪಾಪದವರು, ಅದರಲ್ಲಿ ನಂದೇ ತಪ್ಪಿದೆ. ನನ್ನದೇ ತಪ್ಪು, ನಾನು ಅವರ ಬಳಿ ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+