ಹಾಸನ: ಮಂತ್ರಿ ರೇವಣ್ಣ ಪತ್ನಿ, ಮಾಜಿ ಮಂತ್ರಿ ಎ.ಮಂಜು ಮಗನ ನಡುವೆ ಜಟಾಪಟಿ

Recommended Video

      ಕಾಂಗ್ರೆಸ್-ಜೆಡಿಎಸ್ ದೋಸ್ತಿ ಬೆಂಗಳೂರಿನಲ್ಲಿದ್ರೆ ಹಾಸನದಲ್ಲಿ ದುಶ್ಮನ್ | Oneindia Kannada

      ಹಾಸನ, ಸೆಪ್ಟೆಂಬರ್ 28: ಬೆಂಗಳೂರಲ್ಲಿ ಇಂದು ಜೆಡಿಎಸ್-ಕಾಂಗ್ರೆಸ್‌ ಪಕ್ಷಗಳು ಭರ್ಜರಿ ದೋಸ್ತಿ ತೋರಿಸಿ ಬಿಬಿಎಂಪಿ ಮೇಯರ್ ಚುನಾವಣೆ ಗೆದ್ದುಕೊಂಡಿದೆ ಆದರೆ ಅದೇ ಹಾಸನದಲ್ಲಿ ಎರಡೂ ಪಕ್ಷಗಳು ಪರಸ್ಪರ ಹಾವು-ಮುಂಗುಸಿಯಂತೆ ಕಿತ್ತಾಡಿವೆ.

      ಇಂದು ಹಾಸನದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಸದಸ್ಯರು ಪರಸ್ಪರ ತಾರಕ ಸ್ವರದಲ್ಲಿ ಕಚ್ಚಾಡಿಕೊಂಡಿದ್ದಾರೆ. ಅದೂ, ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿರುವ ರಾಜಕಾರಣಿಗಳ ಕುಟುಂಬದವರೇ ಹಾಸನದಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದಾರೆ.

      ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್‌ ಗೌಡ ಅವರುಗಳು ಹಾಸನ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಆಯ್ಕೆ ವೇಳೆ ಪರಸ್ಪರ ವಾಗ್ವಾದ ನಡೆಸಿದ್ದಾರೆ.

      Disputation between JDS-Congress members in Hassan

      ಭವಾನಿ ರೇವಣ್ಣ ಅವರು ಹಾಗೂ ಎ.ಮಂಜು ಅವರ ಪುತ್ರ ಪರಸ್ಪರ ತೀವ್ರ ವಾಗ್ದಾಳಿ ನಡೆಸಿಕೊಂಡಿದ್ದಾರೆ. ಮಂಥರ್‌ ಗೌಡ ಬೆಂಬಲಕ್ಕೆ ಹಲವು ಕಾಂಗ್ರೆಸ್ ಸದಸ್ಯರೂ ಬಂದಿದ್ದು, ಜೆಡಿಎಸ್‌ ಸದಸ್ಯರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

      ಬೇರೆಲ್ಲಾ ಕಡೆ ಜೆಡಿಎಸ್-ಕಾಂಗ್ರೆಸ್ ನಡುವೆ ಸಮನ್ವಯ ಸಾಧ್ಯವಾಗುತ್ತಿದೆಯಾದರೂ ಹಾಸನ ಜಿಲ್ಲೆಯಲ್ಲಿ ಇಬ್ಬರ ನಡುವಿನ ಸಮರ ಮುಂದುವರೆದಿದೆ. ಮೊನ್ನೆಯಷ್ಟೆ ಮಾಜಿ ಸಚಿವ ಎ.ಮಂಜು ಅವರು ರೇವಣ್ಣ ಅವರ ಮೇಲೆ ಭೂ ಕಬಳಿಕೆ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+