135 ಜನ ಶಾಸಕರಿದ್ರೂ ಸ್ಟೆಪ್ನಿ ಹುಡುಕ್ತಿದ್ದಾರೆ: HD ರೇವಣ್ಣ ಹೀಗೆ ಹೇಳಿದ್ದೇಕೆ ಮತ್ತು ಯಾರಿಗೆ? -ಇಲ್ಲಿದೆ ಮಾಹಿತಿ
ಹಾಸನ, ನವೆಂಬರ್, 16: ಕುಮಾರಸ್ವಾಮಿ ನಾಮಕಾವಸ್ತೆ ಸಿಎಂ ಆಗಿದ್ದರು. ಡಿ.ಕೆ.ಶಿವಕುಮಾರ್ ಹೇಳಿದ್ರೆ ಅವರು ಸೈನ್ ಹಾಕಬೇಕಿತ್ತು ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಸನದಲ್ಲಿ ಆಕ್ರೋಶ ಹೊರಹಾಕಿದರು. ಹಾಗೆಯೇ ಇದೀಗ 136 ಜನ ಶಾಸಕರಿದ್ದರೂ ಕೂಡ ಸ್ಟೆಪ್ನಿ ಹುಡುಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಸಿದ್ದರಾಮಯ್ಯ ಅವರ ಮನೆಯಲ್ಲಿ ಕುಳಿತಿದ್ದೆವು. ಆಗ ನವದೆಹಲಿಯಿಂದ ಕರೆ ಮಾಡಿ ಡಿ.ಕೆ.ಶಿವಕುಮಾರ್ ಸಿಎಂ ಹಾಗೂ ನನ್ನನ್ನು ಡಿಸಿಎಂ ಮಾಡುತ್ತೇವೆ ಎಂದಿದ್ದರು. 5 ಜನ ಪ್ರಭಾವಿ ಮುಖಂಡರನ್ನು ಸಂಧಾನಕ್ಕೆ ಕಳಿಹಿಸುತ್ತೇವೆ ಎಂದಿದ್ದರು. ಇದಕ್ಕೆಲ್ಲಾ ಸಿದ್ದರಾಮಯ್ಯನವರೇ ಇದಕ್ಕೆ ಸಾಕ್ಷಿ ಎಂದರು.

ನನಗೆ ಕಾಂಗ್ರೆಸ್ ನಾಯಕರೆಲ್ಲರೂ ಇಂಧನ ಖಾತೆ ನೀಡಬೇಕು ಎಂಬ ಮಾತುಕತೆ ಮಾಡಿದ್ದರು. ಆಗ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಖರ್ಗೆಯವರು ಕೂಡ ಇದ್ದರು. ಆದರೆ ಸರ್ಕಾರ ಬೀಳೋವರೆಗೂ ಇಂಧನ ಖಾತೆ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇನ್ನು ದೇವೇಗೌಡ ಒಬ್ಬ ದೈವ ಭಕ್ತ, ಕೋಮುವಾದಿಗಳನ್ನು ದೂರ ಇಡಲು ಹೋರಾಡಿದರು. ಅವರನ್ನು ಯಾಕೆ ಹತ್ತೂವರೆ ತಿಂಗಳಿಗೆ ಇಳಿಸಿದರು? ನಾವು ಅಧಿಕಾರಕ್ಕೆ ಜೋತು ಬಿದ್ದಿದ್ದರೇ? ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
ಮೋದಿಯವರು ಕುಮಾರಸ್ವಾಮಿಗೆ ನೀನೆ 5 ವರ್ಷ ಮುಖ್ಯಮಂತ್ರಿ ಆಗಿರು ಎಂದು ಆಫರ್ ನೀಡಿದ್ದರು. ಅಂತಹವನ್ನೆಲ್ಲಾ ತ್ಯಜಿಸಿದೆವು, ಅಂತಹ ಕುಟುಂಬ ನಮ್ಮದು ಎಂದರು. ಇನ್ನು ಅಪ್ಪಿ ತಪ್ಪಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದೂ ಕೂಡ ಜಾಸ್ತಿ ದಿನ ಉಳಿಯುವುದಿಲ್ಲ. ಇದು ನೆಹರು, ರಾಜೀವ್ ಗಾಂಧಿ ಕಾಲದ ಕಾಂಗ್ರೆಸ್ ಅಲ್ಲ ಎಂದರು.
2013, 2018ರಲ್ಲಿ ನಮ್ಮ ಎಲ್ಲಾ ಮಹಾನಾಯಕರನ್ನು ಕರೆದುಕೊಂಡಿದ್ದರು. ಯಾಕೆ 120ರಿಂದ 80ಕ್ಕೆ ಬಂದ್ರು ಎಂದು ಲೇವಡಿ ಮಾಡಿದರು. ಇನ್ನ ದೇವೇಗೌಡರು, ಕುಮಾರಸ್ವಾಮಿ ಅವರು ಇರೋವರೆಗೂ ಈ ಪಕ್ಷವನ್ನು ಮುಗಿಸುವುದಕ್ಕೆ ಆಗುವುದಿಲ್ಲ. ಈಗ ನಮ್ಮ ಪಕ್ಷದಿಂದ ಹೋದೋರು ಹೋಗಲಿ. ಮತ್ತೆ ನಾಲ್ಕು ವರ್ಷ ಆದಮೇಲೆ ವಾಪಾಸ್ ಬರುತ್ತಾರೆ. ಈಗ ಹೋಗಿ ನಾಲ್ಕು ವರ್ಷ ಮಜಾ ಮಾಡಿಕೊಂಡು ಬರಲಿ ಎಂದರು.
ಗೌರಿಶಂಕರ್‌ಗೆ ಅವರ ಕ್ಷೇತ್ರವಲ್ಲದಿದ್ದರೂ ಟಿಕೆಟ್ ಗೆಲ್ಲಿಸಿದ್ದರು. ಅಲ್ಲಿದ್ದ ನಮ್ಮ ಹಾಲಿ ಶಾಸಕ ನಿಂಗಪ್ಪಗೆ ಟಿಕೆಟ್ ಕೊಡಲಿಲ್ಲ. ಈಗ ಹೋಗಿದ್ದಾರೆ ಹೋಗಲಿ, 2028ಕ್ಕೆ ಜೆಡಿಎಸ್ ಏನು ಎಂದು ತೋರಿಸುತ್ತೇವೆ.136 ಶಾಸಕರಿದ್ರೂ ಅವರು ಸ್ಟೆಪ್ನಿ ಹುಡುಕುತ್ತಿದ್ದಾರೆ. ಅವರು ಹುಡುಕಿರುವ ಸ್ಟೆಪ್ನಿಗಳು ಡಕೋಟಾಗಳು ಎಂದು ಲೇವಡಿ ಮಾಡಿದರು.
ಈಗ ಇರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್. ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯುವ ಕಾಂಗ್ರೆಸ್ ಪಕ್ಷದ ನಾಯಕರು ನಮ್ಮ ಅವಶ್ಯಕತೆ ಇದ್ದಾಗ ಕಾಲಿಗೆ ಬೀಳೋದಿಕ್ಕೆ ಬಂದಿದ್ದರು ಎಂದರು.












Click it and Unblock the Notifications