ಶಿವಮೊಗ್ಗ ಗಲಭೆ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದು ಹೀಗೆ
ಹಾಸನ, ಅಕ್ಟೋಬರ್, 03: ಶಿವಮೊಗ್ಗದಲ್ಲಿ ಗಲಭೆ ಕುರಿತು ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಬಿಜೆಪಿಯವರಿಗೆ ಹೇಳುವುದಕ್ಕೆ ಏನಿಲ್ಲ. ಪ್ರತಿ ಸಲ ಸಣ್ಣಪುಟ್ಟ ಗಲಾಟೆ ಆದರೂ ಪಾಕಿಸ್ತಾನ ಮಾಡೋದಕ್ಕೆ ಹೊರಟಿದ್ದಾರೆ ಅಂತಾ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇವತ್ತಿಂದ ಅಲ್ಲ, ಅವತ್ತಿಂದ ಸಿ.ಟಿ.ರವಿ ಆಗ್ಲಿ, ಈಶ್ವರಪ್ಪ ಅವರಾಗಲೀ ಎಲ್ಲಾದ್ರೂ ಸಣ್ಣ ಗಲಾಟೆ ಆದರೂ ಪಾಕಿಸ್ತಾನ ಮಾಡೋದಕ್ಕೆ ಹೊರಟಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವಾಗಲೂ ಹೀಗೆ ಹೇಳ್ಕೊಂಡು ಬರುತ್ತಿದ್ದಾರೆ. ಇಂತಹ ಘಟನೆ ಆಗಬಾರದಾಗಿತ್ತು, ಆಗಿಬಿಟ್ಟಿದೆ. ಈಗ ಕಂಟ್ರೋಲ್ ಆಗಿದೆ, ಸಮಸ್ಯೆ ಇಲ್ಲ ಎಂದರು.

ಫ್ಲೆಕ್ಸ್‌ಗಳನ್ನ ಅನುಮತಿ ತೆಗೆದುಕೊಳ್ಳದೇ ಹಾಕಿದ್ದಾರೆಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಪರ್ಮಿಶನ್ ತೆಗೆದುಕೊಂಡು ಹಾಕಿದ್ದಾರೆ ಅಂತಾ ಅವರು ಹೇಳುತ್ತಾ ಇದ್ದಾರೆ. ಈಗ ಪರ್ಮಿಶನ್ ಇಲ್ಲ ಅಂತಾ ಮಾಧ್ಯಮದವರು ಹೇಳ್ತಾ ಇದ್ದೀರಾ. ಆ ಬಗ್ಗೆ ಚರ್ಚೆ ಬೇಡ, ಈಗ ಶಾಂತವಾಗಿದೆ ಎಂದರು.
ಫ್ಲೆಕ್ಸ್ ಹಾಕುವುದಕ್ಕೆ ಪರ್ಮಿಶನ್ ತಗೊಂಡಿಲ್ಲ ಅಂದ್ರೆ ಅದು ತಪ್ಪು. ಇನ್ನು ಗಣೇಶ ಮೆರವಣಿಗೆ ಹೋಗುವಾಗ ಯಾರಾದ್ರೂ ಕಲ್ಲು ತೂರಾಟ ಮಾಡಿದ್ರೆ ಅದು ಕೂಡ ತಪ್ಪ. ಈಗಾಗಲೇ ಘಟನೆ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಸಮಾಜದವರ ಮೆರವಣಿಗೆ ಹೋದರೆ ಕಲ್ಲು ತೂರಾಟ ಮಾಡುವುದು ತಪ್ಪು ಎಂದು ಹೇಳಿದ್ದಾರೆ ಎಂದರು.
ಮತಾಂಧರ ಕೇಸ್ ವಾಪಾಸ್ ತೆಗೆದುಕೊಂಡ್ರೆ ನಾವ್ ಸುಮ್ನಿರಲ್ಲ
ಚಾಮರಾಜನಗರ, ಅಕ್ಟೋಬರ್, 03: ಮತಾಂಧರ ಕೇಸ್‌ಗಳನ್ನು ವಾಪಾಸ್ ತೆಗೆದುಕೊಂಡರೆ ನಾವು ಸುಮ್ಮನೆ ಇರಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿಯಲ್ಲಿ ಭಾಗಿಯಾದ ಬಳಿಕ ಮಾಧ್ಯಮವರೊಟ್ಟಿಗೆ ಮಾತಾನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಹನಿಮೂನ್ ಪಿರಿಯಡ್ ಮುಕ್ತಾಯವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಮತಾಂಧರ ಕೇಸ್‌ಗಳನ್ನು ವಾಪಾಸ್ ತೆಗೆದುಕೊಳ್ಳಲು ಮಂತ್ರಿಗಳೇ ಮುಂಚೂಣಿಯಲ್ಲಿದ್ದಾರೆ ಎಂದು ಆರೋಪ ಮಾಡಿದರು.
ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ. ಡಿಜೆಹಳ್ಳಿ ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಕೇಸ್ ವಾಪಸ್ ತೆಗೆದುಕೊಳ್ಳಲು ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸುತ್ತಿದೆ, ಕಾಂಗ್ರೆಸ್ ಮಾನಸಿಕತೆ ಈಗ ಜನರಿಗೆ ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications