Harihar Elections: ಹರಿಹರದಲ್ಲಿ ಹರಿಹರೇಶ್ವರನ ಆಶೀರ್ವಾದ ಯಾರಿಗೆ..?
ದಾವಣಗೆರೆ, ಮಾರ್ಚ್ 25: ಕರ್ನಾಟಕದ ಧಾರವಾಡ ಮತ್ತು ದಾವಣಗೆರೆ ಜಿಲ್ಲೆಯ ಗಡಿ ಭಾಗವಾದ ಹರಿಹರ ಹರಿಹರೇಶ್ವರನ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ರಾಜಕೀಯ ಜಿದ್ದಾಜಿದ್ದಿಗೂ ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುವುದು ಖಚಿತವಾಗಿದೆ. ಮಾಜಿ, ಹಾಲಿ ಶಾಸಕರ ಮುಖಾಮುಖಿಗೆ ಮುಂಬರುವ ವಿಧಾನಸಭಾ ಚುನಾವಣೆ ಸಾಕ್ಷಿಯಾಗಲಿದೆ.
ಸದ್ಯ ಹರಿಹರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಕಾಂಗ್ರೆಸ್‌ನ ಎಸ್. ರಾಮಪ್ಪ ಇಲ್ಲಿನ ಶಾಸಕರು. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನ ಹಾಲಿ ಶಾಸಕರರಿಗೆ ಪೈಪೋಟಿ ನೀಡಲು ಬಿಜೆಪಿಯ ಮಾಜಿ ಶಾಸಕ ಹಾಗೂ ಜೆಡಿಎಸ್‌ನ ಮಾಜಿ ಶಾಸಕರು ಸಜ್ಜಾಗಿದ್ದಾರೆ. ಹೀಗಾಗಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುವುದು ಖಚಿತ ಎನ್ನಲಾಗುತ್ತಿದೆ. ಆದರೆ, ಹರಿಹರೇಶ್ವರನ ಕೃಪೆಗೆ ಯಾರು ಪಾತ್ರರಾಗುತ್ತಾರೋ ಚುನಾವಣೆಯೇ ನಿರ್ಧರಿಸಲಿದೆ.

*ಹರಿಹರ ಐತಿಹ್ಯ*
ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಹರಿಹರೇಶ್ವರ ಕ್ಷೇತ್ರ. ಧಾರವಾಡ ಮತ್ತು ದಾವಣಗೆರೆ ಜಿಲ್ಲೆಯ ಗಡಿ ಭಾಗವಾದ ಹರಿಹರ ಪಟ್ಟಣದಲ್ಲಿರುವ ಈ ಮಂದಿರವು ದಾವಣಗೆರೆ ಜಿಲ್ಲೆಗೆ ಸೇರಿದೆ. ತುಂಗಭದ್ರಾ ನದಿ ತೀರದ ಈ ಹರಿಹರೇಶ್ವರ ದೇವಾಲಯವು ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ಹರಿಹರವು ಹರಿಹರೇಶ್ವರ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ, ಇದನ್ನು "ದಕ್ಷಿಣ ಕಾಶಿ" ಎಂದೂ ಕರೆಯುತ್ತಾರೆ . ಹರಿಹರವನ್ನು "ಮಧ್ಯ ಕರ್ನಾಟಕದ ಕೈಗಾರಿಕಾ ಕೇಂದ್ರ" ಎಂದು ಕರೆಯಲಾಗುತ್ತದೆ.
ಹರಿಹರವು ಬೆಂಗಳೂರಿನಿಂದ ಉತ್ತರಕ್ಕೆ 275 ಕಿಲೋಮೀಟರ್ ದೂರದಲ್ಲಿ ತುಂಗಭದ್ರಾ ನದಿಯ ದಡದಲ್ಲಿದೆ. ಹರಿಹರ ಮತ್ತು ದಾವಣಗೆರೆ (14 ಕಿಮೀ ದೂರ) "ಅವಳಿ ನಗರಗಳು" ಎಂದು ಉಲ್ಲೇಖಿಸಲಾಗಿದೆ. ಹರಿಹರವು ರಸ್ತೆ ಮತ್ತು ರೈಲುಮಾರ್ಗದ ಮೂಲಕ ಸಂಪರ್ಕ ಹೊಂದಿದೆ. ಇದು ವರ್ಷಪೂರ್ತಿ ಅತ್ಯಂತ ಆಹ್ಲಾದಕರ ಹವಾಮಾನವನ್ನು ಕೂಡ ಹೊಂದಿದೆ. ಈ ನಗರದ ಪ್ರಮುಖ ಜೀವನಾಡಿ ತುಂಗಭದ್ರಾ.

*ಹರಿಹರ ರಾಜಕೀಯ*
ಹರಿಹರ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವೇ ಪ್ರಧಾನಪಾತ್ರ ವಹಿಸುತ್ತದೆ. ಇಲ್ಲಿ ಪಕ್ಷಗಳ ಪ್ರಾಬಲ್ಯಕ್ಕೆ ಅಷ್ಟು ಪ್ರಾಮುಖ್ಯತೆಯಿಲ್ಲ. ಹರಿಹರ ಕೇವಲ ಮಲೇಬೆನ್ನೂರು ಹಾಗೂ ಕಸಬಾ ಎರಡು ಹೋಬಳಿಯ ವ್ಯಾಪ್ತಿ ಹೊಂದಿರುವ ಚಿಕ್ಕ ವಿಧಾನಸಭಾ ಕ್ಷೇತ್ರ. ಇಲ್ಲಿನ ಮತದಾರರು ಪಕ್ಷಕ್ಕಿಂತ ಜಾತಿಯ ಅಭ್ಯರ್ಥಿಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಬಂದಿದ್ದಾರೆ.
1972ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್ ಸಿದ್ದವೀರಪ್ಪ ಇಲ್ಲಿಂದ ಗೆಲುವು ಸಾಧಿಸಿದ್ದರು. 1978ರಲ್ಲಿ ಕಾಂಗ್ರೆಸ್‌ನ ಪಿ ಬಸವನ ಗೌಡ ಗೆದ್ದಿದ್ದರು. ಬಳಿಕ ಜೆಎನ್‌ಪಿಯ ಕೆ ಮಲ್ಲಪ್ಪ ಮತ್ತು ಬಿ ಜಿ ಕೊಟ್ರಪ್ಪ ಕ್ರಮವಾಗಿ 1983 ಮತ್ತು 1985 ರಲ್ಲಿ ಗೆಲುವು ಸಾಧಿಸಿದರು. 1989 ರಲ್ಲಿ ಮತ್ತೆ ಕಾಂಗ್ರೆಸ್‌ನ ವೈ ನಾಗಪ್ಪ ಶಾಸಕರಾದರು. 1994ರಲ್ಲಿ ಹೆಚ್ ಶಿವಪ್ಪ , 1999ರಿಂದ 2004ಎ ವರೆಗೆ ಕಾಂಗ್ರೆಸ್‌ನ ಡಾ ವೈ ನಾಗಪ್ಪ ಆಯ್ಕೆಯಾಗುತ್ತಾ ಬಂದಿದ್ದರು.

2008 ರಲ್ಲಿ ಬಿಜೆಪಿಯ ಬಿ ಪಿ ಹರೀಶ್ ಹರಿಹರದಿಂದ ಆಯ್ಕೆಯಾದರು. 2013ರಲ್ಲಿ ಎಚ್ ಎಸ್ ಶಿವಶಂಕರ್ ಆಯ್ಕೆಯಾಗುವ ಮೂಲಕ ಈ ಕ್ಷೇತ್ರ ಜಾತ್ಯಾತೀತ ಜನತಾದಳದ ಪಾಲಾಯಿತು. ಇದೇ ಚುನಾವಣೆಯಲ್ಲಿ ಎಚ್ಎಸ್ ಶಿವಶಂಕರ್ ವಿರುದ್ಧ ಸೋಲು ಕಂಡಿದ್ದ ಬಳಿಕ ಕಾಂಗ್ರೆಸ್‌ನ ಎಸ್ ರಾಮಪ್ಪ ಮತ್ತೆ 2018ರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್ ಅವರನ್ನು ಸೋಲಿಸುವ ಮೂಲಕ ಆರಿಸಿ ಬಂದಿದ್ದಾರೆ.
ಈ ಬಾರಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಹಾಲಿ ಶಾಸಕ ಎಸ್. ರಾಮಪ್ಪ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಉದ್ಯಮಿ ಎನ್.ಎಚ್. ಶ್ರೀನಿವಾಸ, ವಿಟಿಯು ಮಾಜಿ ಕುಲಪತಿ ದೀಟೂರು ಮಹೇಶ್ವರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ಕಾಂಗ್ರೆಸ್‌ನ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಹಾಲಿ ಶಾಸಕ ಎಸ್. ರಾಮಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ.
ಬಿಜೆಪಿಯಲ್ಲೂ ಸ್ಪರ್ಧೆ ಜೋರಾಗಿದ್ದು, ಮಾಜಿ ಶಾಸಕ ಬಿ.ಪಿ. ಹರೀಶ್ ಈ ಬಾರಿಯೂ ಕಣಕ್ಕೆ ಇಳಿಯಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರ ಜೊತೆಗೆ ಎರಡು ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಬಿಜೆಪಿಗೆ ಟಕ್ಕರ್ ಕೊಡಲು ಜೆಡಿಎಸ್‌ನಿಂದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸ್ಪರ್ಧಿಸಲಿದ್ದಾರೆ.
Harihara Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಸ್ ರಾಮಪ್ಪ | 64801 | ಬಿ ಪಿ ಹರೀಶ್ | 57541 |
| 2013 | ಎಚ್ ಎಸ್ ಶಿವಶಂಕರ್ | 59666 | ಎಸ್ ರಾಮಪ್ಪ | 40613 |
| 2008 | ಬಿ ಪಿ ಹರೀಶ್ | 47238 | ಎಚ್ ಶಿವಪ್ಪ | 36220 |
*ಮತದಾರರು*
ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1,78,865 ಮಂದಿ ಮತದಾರರಿದ್ದಾರೆ. ಇವರಲ್ಲಿ ಲಿಂಗಾಯತ, ಕುರುಬರದ್ದೇ ಹೆಚ್ಚು ಪ್ರಾಬಲ್ಯ. ಲಿಂಗಾಯತ ಮತದಾರರು 58,900, ಕುರುಬ ಮತದಾರರು 38,000 ಇದ್ದು, ಉಳಿದಂತೆ ಮುಸ್ಲಿಂ ಸಮುದಾಯದದ 25,800 ಮತಗಳು, ಪರಿಶಿಷ್ಟ ಜಾತಿಯ ಮತಗಳು 23,600, ಪರಿಶಿಷ್ಟ ಪಂಗಡದ 15,565 ಮತಗಳಿವೆ. ಈಡಿಗ ಸಮುದಾಯದ 8,000 ಮತಗಳು, ಮರಾಠಿ ಸಮುದಾಯದ 4,000 ಮತಗಳು ಮತ್ತು ಉಪ್ಪಾರ ಸಮುದಾಯದ 500 ಮತಗಳಿವೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications