ಬಿಜೆಪಿ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಂಡ ಪ್ರಣಬ್ ಮುಖರ್ಜಿ
ಗುರ್ಗಾಂವ್, ಸೆಪ್ಟೆಂಬರ್ 03: ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದ್ದ ಪ್ರಣಬ್ ಮುಖರ್ಜಿ, ಇದೀಗ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ಪ್ರಣಬ್ ಮುಖರ್ಜಿ ಫೌಂಡೇಶನ್ ಎಂಬ ಮಾಜಿ ರಾಷ್ಟ್ರಪತಿ ಮುಖರ್ಜಿ ಅವರ ಸಂಘಟನೆಯೊಂದು ಆರೆಸ್ಸೆಸ್ ಜೊತೆ ವಿಲೀನವಾಗುತ್ತದೆ ಎಂಬ ವದಂತಿ ಹಬ್ಬಿದ ಎರಡು ದಿನದ ನಂತರ ನಡೆದ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ.
ಆದರೆ ಈ ಕುರಿತು ಪ್ರಣಬ್ ಮುಖರ್ಜಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಸ್ಪಷ್ಟನೆ ನೀಡಲಾಗಿದ್ದು, ಅಮಥ ಯಾವುದೇ ವಿಲೀನದ ಯೋಚನೆ ಇಲ್ಲ. ಸ್ಮಾರ್ಟ್ ಗ್ರಾಮ ಯೋಜನೆಯ ಅಡಿಯಲ್ಲಿ ಜುಲೈ 2016 ರಲ್ಲಿ ಪ್ರಣಬ್ ಮುಖರ್ಜಿ ಅವರು ಹರ್ಯಾಣದ ಗುರ್ಗಾಂವ್ ನಲ್ಲಿರುವ ಕೆಲವು ಗ್ರಾಮಗಳನ್ನು ದತ್ತು ಪಡೆದಿದ್ದರು. ಅದರ ಸಲುವಾಗಿ ಗುರ್ಗಾಂವಿಗೆ ತೆರಳಿ, ಅಲ್ಲಿ ಮುಖ್ಯಮಂತ್ರಿಗಳ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

ಈ ಯೋಜನೆಯ ಅಡಿಯಲ್ಲಿ ಮುಖರ್ಜಿ ಅವರು 5 ಗ್ರಾಮಗಳನ್ನು ದತ್ತು ಪಡೆದಿದ್ದಾರೆ.ಅವುಗಳ ಸ್ಥಿತಿಗತಿಯ ಬಗ್ಗೆ ತಿಳಿಯಲು ಆಗಾಗಗ ಅಲ್ಲಿಗೆ ಪ್ರವಾಸ ಕೈಗೊಳ್ಳುತ್ತಾರೆ ಎಂದು ಅವರ ಆಅಪ್ತ ಮೂಲಗಳು ತಿಳಿಸಿವೆ.












Click it and Unblock the Notifications