ಗದಗದಲ್ಲಿ ಭಾರಿ ಅಪಘಾತ ಮದುವೆಗೆ ತೆರಳುತ್ತಿದ್ದ 6 ಮಂದಿ ದುರ್ಮರಣ

ಗದಗ, ಡಿಸೆಂಬರ್ 30: ಗದಗದಲ್ಲಿ ಇಂದೆ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮದುವೆಗೆಂದು ತೆರಳುತ್ತಿದ್ದ 6 ಮಂದಿ ಮಸಣಕ್ಕೆ ತೆರಳುವಂತಾಗಿದೆ.

ಕುಟುಂಬವೊಂದು ಐ-10 ಕಾರಿನಲ್ಲಿ ಧಾರವಾಡದಿಂದ ಗದಗಗಕ್ಕೆ ಬರುತ್ತಿತ್ತು, ಇದೇ ಸಮಯ ಮುಂಡರಗಿ ರಿಂಗ್‌ ರೋಡ್‌ ಬಳಿ ಎದುರಿನಿಂದ ಬಂದ ಐ-10 ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಹಾರಿ ಬಂದು ಧಾರವಾಡದಿಂದ ಬರುತ್ತಿದ್ದ ಐ-10 ಕಾರಿನ ಮೇಲೆ ಬಿದ್ದಿದೆ.

ಐ-10 ಕಾರಿನಲ್ಲಿದ್ದ ಆರೂ ಮಂದಿ ಸಾವನ್ನಪ್ಪಿದ್ದಾರೆ. ಐ-20 ಕಾರಿನಲ್ಲಿದ್ದ ನಾಲ್ಕು ಮಂದಿಗೆ ತೀವ್ರ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಇದೆ.

Massive accident near Gadag 6 people dead

ಐ-10 ಕಾರಿನಲ್ಲಿದ್ದವರನ್ನು ಆನಂದ ಬೆಟಗೇರಿ, ಸಿದ್ದು ಕೋರಿಶೆಟ್ಟಿ, ಮನೋಜಕುಮಾರ ಕರಡಿಗುಡ್ಡ, ಅಮೃತ, ಚನ್ನು ವಾಡದ್, ಅರುಣ್ ಬೆಟಗೇರಿ ಎಂದು ಗುರುತಿಸಲಾಗಿದೆ, ಎಲ್ಲರೂ ಧಾರವಾಡದ ಹೆಬ್ಬಳ್ಳಿ ಅಗಸಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಅಪಘಾತದ ರಭಸದಲ್ಲಿ ಐ-10 ಕಾರು ತೀವ್ರವಾಗಿ ಜಖಂಗೊಂಡಿದೆ. ಕಾರಿನ ಪೂರ್ಣ ದೇಹ ಕಿತ್ತು ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+