ಧಾರವಾಡ : ಹಾಲಿನ ಪ್ಯಾಕೆಟ್ ಮೂಲಕ ಮತದಾನದ ಜಾಗೃತಿ
ಧಾರವಾಡ, ಮಾರ್ಚ್ 18 : ಧಾರವಾಡ ಜಿಲ್ಲಾಡಳಿತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಬೇಕು ಎಂದು ಪಣತೊಟ್ಟಿದೆ. ಏಪ್ರಿಲ್ 23ರಂದು ಮತದಾನ ಮಾಡುವಂತೆ ಹಾಲಿನ ಪ್ಯಾಕೆಟ್‌ಗಳ ಮೂಲಕ ಜನರಿಗೆ ಸಂದೇಶ ರವಾನಿಸಲಾಗುತ್ತಿದೆ.
ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಹಾಲು ಒಕ್ಕೂಟದ ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಇತರ ಉತ್ಪನ್ನಗಳ ಪ್ಯಾಕೇಟ್ ಮೂಲಕವು ಮತದಾರರನ್ನು ಜಾಗೃತಿ ಮಾಡುವ ಕಾರ್ಯವನ್ನು ಜಿಲ್ಲಾ ಸ್ವಿಪ್ ಸಮಿತಿ ಕೈಗೊಂಡಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಲು 1950 ಉಚಿತ ಸಹಾಯವಾಣಿಗೆ ಕರೆ ಮಾಡಿ ಎಂಬ ಸಂದೇಶವನ್ನು ಮುದ್ರಿಸಿ ವಿತರಣೆ ಮಾಡಲಾಗುತ್ತಿದೆ. ಏಪ್ರಿಲ್ 23ರಂದು ಧಾರವಾಡ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿದೆ.
ಧಾರವಾಡದ ಕೆಎಂಎಫ್ ಘಟಕ ಪ್ರತಿ ದಿನ ಸುಮಾರು 90 ಸಾವಿರ ಲೀಟರ್ ಹಾಲು, 10 ಸಾವಿರ ಲೀಟರ್ ಮೊಸರು, 3 ಸಾವಿರ ಲೀಟರ್ ಮಜ್ಜಿಗೆ ಹಾಗೂ 20 ಸಾವಿರ ಲೀಟರ್ ಲಸ್ಸಿಯನ್ನು ಉತ್ಪಾದಿಸುತ್ತಿದೆ.
ಈ ಎಲ್ಲಾ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಮತದಾನ ಮಾಡಿ ಎಂಬ ಮಾಹಿತಿ ಮುದ್ರಿಸಲಾಗಿದೆ. ಕಳೆದ ಒಂದು ವಾರದಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ಮತದಾನದ ದಿನದವರೆಗೂ ಇದು ಮುಂದುವರೆಯಲಿದೆ ಎಂದು ಧಾರವಾಡ ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಹೆಗಡೆ ಹೇಳಿದ್ದಾರೆ.











Click it and Unblock the Notifications