ಕೇಂದ್ರದಲ್ಲಿ 'ಕಾಂಗ್ರೆಸ್' ಅಧಿಕಾರದಲ್ಲಿಲ್ಲ, ಈಗಿನದ್ದು 'ಇಂದಿರಾ ಕಾಂಗ್ರೆಸ್': ಅರವಿಂದ್ ಬೆಲ್ಲದ್ ಹೀಗೆ ಹೇಳಿದ್ಯಾಕೆ?
ಧಾರವಾಡ, ಡಿಸೆಂಬರ್ 24: ರಾಜ್ಯದಲ್ಲಿ ಹಿಜಾಬ್ ನಿಷೇಧ ನಿರ್ಧಾರ ಹಿಂಪಡೆಯುವ ಹೇಳಿಕೆ ಕುರಿತು ಸಮರ್ಥನೆ, ಟೀಕೆಗಳು, ವಿಪಕ್ಷ ಮತ್ತು ಆಡಳಿತ ಪಕ್ಷದ ಮಧ್ಯೆ ಮತ್ತೆ ವಾಗ್ವಾದಕ್ಕೆ ಕಾರಣವಾಗಿದೆ. ಪಕ್ಷದ ನಿರ್ಧಾರ ಕುರಿತು ಪ್ರತಿಕ್ರಿಯಿಸಿ ಬಿಜೆಪಿಯವರು ಬ್ರಿಟೀಷರ ಬೂಟು ನೆಕ್ಕುವವರು ಎಂದು ಹೇಳಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೆ ಬಿಜೆಪಿ ಅರವಿಂದ್ ಬೆಲ್ಲದ್ ತಿರುಗೇಟು ನೀಡಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಅನಗತ್ಯವಾಗಿ ಗೊಂದಲಮಯ ಹೇಳಿಕೆ ಕೊಡತ್ತಲೇ ಬಂದವರು. ಬರೀ ಇದೇ ರೀತಿ ಪಾಲಿಸಿ ಮಾಡುತ್ತ ಜನರಿಗೆ ಮಂಕು ಬೂದಿ ಎರಚಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಅರವಿಂದ ಬೆಲ್ಲದ ಕಿಡಿಕಾರಿದರು.

ವಿಧಾನ ಪರಿಷತ್ ಹಿರಿಯ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಆರೋಪ ಕುರಿತು ಅರವಿಂದ ಬೆಲ್ಲದ ಅವರು ಕೆಂಡಮಂಡಲವಾಗಿದ್ದಾರೆ. ತಮಗೆ ಕೇಂದ್ರದಲ್ಲಿ ಅಧಿಕಾರ ಇಲ್ಲದ್ದಕ್ಕೆ ಬಿ ಕೆ ಹರಿಪ್ರಸಾದ್ ಈ ರೀತಿ ಹುಚ್ಚಾಪಟ್ಟೆ ಹೇಳಿಕೆ ನೀಡುತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಇಲ್ಲ: ಮಂತ್ರಿ ಆಗಲು ಯತ್ನ
ರಾಜ್ಯದ ಜನ ಅವರ ಈ ಹೇಳಿಕೆಗೆ ಯಾವುದೇ ರೀತಿಯ ಕಿಮ್ಮತ್ತು ಕೊಡುವುದಿಲ್ಲ. ಇಲ್ಲದ ಹೇಳಿಕೆ ಪ್ರಾಮುಖ್ಯತೆ ಇರುವುದಿಲ್ಲ. ಬಿಕೆ ಹರಿಪ್ರಸಾದ್ ಮೊದಲಿನಿಂದ ಅಧಿಕಾರದ ಸಮೀಪ ಇದ್ದವರು. ದೆಹಲಿಯಲ್ಲಿ ಇದ್ದು ಕೇಂದ್ರ ರಾಜಕಾರಣದಲ್ಲಿ ಕೈಯಾಡುತ್ತ ಅದರ ಅನುಭವ ಪಡೆದವರು. ಇವತ್ತು ಪಾಪಾ ಕೇಂದ್ರದಲ್ಲಿ ಅವರ ಕಾಂಗ್ರೆಸ್ ಸರ್ಕಾರ ಇಲ್ಲಾ, ಹೀಗಾಗಿ ಇಲ್ಲಿ ಬಂದು ಮಂತ್ರಿಯಾಗಲು ಪ್ರಯತ್ನ ಮಾಡಿದರು ಎಂದು ಲೇವಡಿ ಮಾಡಿದರು.
ರಾಜ್ಯದ ನಾಯಕರು ಬಿ ಕೆ ಹರಿಪ್ರಸಾದ್ ಅವರನ್ನು ಹೆಚ್ಚಾಗಿ ಹಚ್ಚಿಕೊಳ್ಳುತ್ತಿಲ್ಲ. ಅವರಿಗೆ ಮಂತ್ರಿ ಕೂಡಾ ಮಾಡಲಿಲ್ಲಾ. ಅದಕ್ಕಾಗಿ ಈಗ ಅವರಿಗೆ ಸ್ವಲ್ಪ ಬ್ಯಾಲೆನ್ಸ್ ತಪ್ಪುತ್ತಿರಬೇಕು ಎಂದು ಅನ್ನಸುತ್ತಿದೆ. ಸದ್ಯ ಅವರು ತಮ್ಮ ನಾಯಕರನ್ನ ಒಲೈಸಲು ಇವತ್ತು ಈ ರೀತಿ ಎತ್ತರ ಪತ್ತರಾಗಿ ಮಾತನಾಡುತಿದ್ದಾರೆ.

ಈಗನದ್ದು ಇಂದಿರಾ ಕಾಂಗ್ರೆಸ್
ಬಿಕೆ ಹರಿಪ್ರಸಾದ್ ಅವರಿಗೆ ಜವಾಹರಲಾಲ್ ನೆಹರು ಪ್ರಧಾನಿ ಆಗಿದ್ದರೂ ಅವರು ಮಹಾತ್ಮಾ ಗಾಂಧಿ ಅವರಿಂದ ಆಗಿದ್ದವರು. ಆ ಸಂದರ್ಭದಲ್ಲಿ ಇಡಿ ಹೋರಾಟದಲ್ಲಿ ಇದ್ದವರೆಲ್ಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಹಿಂದಿನ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಕಾಂಗ್ರೆಸ್, ಈಗಿನದು ಇಂದಿರಾ ಕಾಂಗ್ರೆಸ್ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ವಿಜಯಪುರ ಶಾಸಕ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ವಿಜಯೇಂದ್ರ ಮೇಲೆ ಹರಿಹಾಯುತ್ತಿರುವ ವಿಚಾರ ಕುರಿತು ಸಹ ಮಾತನಾಡಿದರು. ಇದು ಪಕ್ಷದ ಒಳಗಿನ ವಿಚಾರ, ಅದನ್ನ ಅಲ್ಲೇ ಮಾತಾಡ್ತೆವೆ ಎಂದು ತಿಳಿಸಿದರು.
ಬಿಕೆಎಚ್ ಹೇಳಿದ್ದೇನು?
ಬಿಕೆ ಹರಿಪ್ರಸಾದ್ ಅವರು ಭಾನುವಾರ, ಸಮಾನತೆ ಎನ್ನುವ ಬಿಜೆಪಿಯವರಿಗೆ ರೈತರ ಬಗ್ಗೆ, ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ಅಹಾರ, ಉಡುಪಿನ ಹಕ್ಕು ಎಲ್ಲರ ವೈಯಕ್ತಿಕ ಹಕ್ಕಾಗಿದೆ. ಅಲ್ಲದೇ ಭುರ್ಕಾಗು, ಹಿಜಾಬ್‌ಗೂ ವ್ಯತ್ಯಾಸ ಇದೆ. ನಮ್ಮನ್ನು ಟಿಪ್ಪು ಸುಲ್ತಾನ ಪರ ಎನ್ನುವವರು ಬ್ರಿಟಿಷರ ಭೂಟು ನೆಕ್ಕುವವರು ಎಂದು ಬಿಜೆಪಿ ವಿರುದ್ಧ ಅವರು ಹರಿಹಾಯ್ದಿದ್ದರು. ಅದಕ್ಕೀಗ ಬೆಲ್ಲದ್ ತಿರುಗೇಟು ನೀಡಿದ್ದಾರೆ.












Click it and Unblock the Notifications