• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರ್ಮಿಕರ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ರೋಹಿಣಿ ಸಿಂಧೂರಿ ದಿಟ್ಟ ಹೆಜ್ಜೆ

|

ಧಾರವಾಡ, ಸೆಪ್ಟೆಂಬರ್ 04 : "ಕಾರ್ಮಿಕರ ಆಸಕ್ತಿ, ಬೇಡಿಕೆಗೆ ಅನುಸಾರವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು" ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.

ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಖಾಸಗಿ ಕಂಪನಿಗಳು, ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯವನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕೈಗೊಳ್ಳಲಾಗಿತ್ತು.

   Dharwad : ಧಾರವಾಡದಲ್ಲಿ ನಡೆದ ಘಟನೆ ನಡೆದು ನಾಲ್ಕು ದಿನಗಳ ನಂತರ ಸಜೀವವಾಗಿ ಒಬ್ಬನ ರಕ್ಷಣೆ

   ಹಾಸನ : ಚಿತ್ರಹಿಂಸೆ ಕೊಟ್ಟು ಜೀತಕ್ಕೆ ಬಿಟ್ಟಿದ್ದ 52 ಕಾರ್ಮಿಕರ ರಕ್ಷಣೆ

   ಬುಧವಾರ ತರಬೇತಿ ಪಡೆದ ಕಾರ್ಮಿಕರ ಜೊತೆ ರೋಹಿಣಿ ಸಿಂಧೂರಿ ಸಂವಾದ ನಡೆಸಿದರು. "ಕಾರ್ಮಿಕರ ಆಸಕ್ತಿ,ಬೇಡಿಕೆಗೆ ಅನುಸಾರವಾಗಿ ರಾಜ್ಯದಾದ್ಯಂತ ಈ ಕಾರ್ಯಕ್ರಮ ವಿಸ್ತರಿಸಲಾಗುವುದು" ಎಂದು ತಿಳಿಸಿದರು.

   ಉದ್ಯೋಗಿಗಳಿಗೆ ಸಿಹಿ ಸುದ್ದಿ, ಗ್ರಾಚ್ಯುಟಿ ಅವಧಿ ಇಳಿಕೆ ಸಾಧ್ಯತೆ!

   ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಹಿಟಾಚಿ ತರಬೇತಿ ಕೇಂದ್ರದಲ್ಲಿ ಕಳೆದ 15 ದಿನಗಳ ಕಾಲ ಕಾರ್ಮಿಕರಿಗೆ ಎಕ್ಸ್ ಕ್ಯಾವೇಷನ್ ಮತ್ತು ಜೆಸಿಬಿ ಆಪರೇಟಿಂಗ್ ತರಬೇತಿ ನಡೆಸಲಾಗಿದ್ದು, ಇಂದು ಸಮಾರೋಪ ಸಮಾರಂಭ ನಡೆಯಿತು.

   ಮಹಾತ್ಮಾಗಾಂಧಿ ನರೇಗಾ:ಕೇಂದ್ರದ ಬಾಕಿ ಕೂಲಿ ಮೊತ್ತ ರಾಜ್ಯದಿಂದಲೇ ಪಾವತಿ

   "ರಾಜ್ಯದಲ್ಲಿ 20 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 55201 ನೋಂದಾಯಿತ ಕಾರ್ಮಿಕರಿದ್ದಾರೆ. ಮಂಡಳಿಯಲ್ಲಿ ಸುಮಾರು 15 ಕಾರ್ಮಿಕ ಕಲ್ಯಾಣ ಯೋಜನೆಗಳಿವೆ. ಆದರೆ, ಬಹುತೇಕರು ಮಕ್ಕಳ ಮದುವೆ ಮತ್ತು ವಿದ್ಯಾಭ್ಯಾಸಕ್ಕೆ ಮಾತ್ರ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ ಸೌಲಭ್ಯಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ" ಎಂದರು.

   "ಬೆಂಗಳೂರಿನಂತಹ ಮಹಾನಗರದಲ್ಲಿ ವಲಸೆ ಬರುವ ಮತ್ತು ಹೋಗುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರನ್ನು ಹುಡುಕಿ ಸೌಲಭ್ಯಗಳನ್ನು ತಲುಪಿಸುವುದು ಸವಾಲಿನ ಕೆಲಸವಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣಕಾರರು, ಸಂಸ್ಥೆಗಳು ತಮ್ಮಲ್ಲಿರುವ ಕಾರ್ಮಿಕರ ನೋಂದಣಿಗೆ ಆದ್ಯತೆ ನೀಡಿದರೆ ಮಾತ್ರ ಈ ಕಾರ್ಯ ಸುಲಭವಾಗಲಿದೆ" ಎಂದು ಹೇಳಿದರು.

   ಹಿಟಾಚಿ, ಜೆಸಿಬಿ ಆಪರೇಟಿಂಗ್ ತರಬೇತಿ ಪಡೆದಿರುವ ಕಾರ್ಮಿಕರೊಂದಿಗೆ ರೋಹಿಣಿ ಸಿಂಧೂರಿ ಅವರು ಸಂವಾದ ನಡೆಸಿದರು.

   English summary
   Secretary of the Karnataka Building and Other Construction Workers Welfare Board Rohini Sindhuri said that labour skill training scheme will extend to all district. Training will run with the help of private company partnership.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X