New Bus: ಹುಬ್ಬಳ್ಳಿ-ಧಾರವಾಡಕ್ಕೆ ಲೈಟ್ ಟ್ರಾಮ್ ಬಸ್ ವ್ಯವಸ್ಥೆ ಜಾರಿ ಅಪ್ಡೇಟ್

ಧಾರವಾಡ, ಡಿಸೆಂಬರ್ 17: ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬಿಆರ್‌ಟಿಎಸ್ ಸಾರಿಗೆ ಅಂತ್ಯ ಕಾಣುವ ಕಾಲ ಸನೀಹವಾಗುತ್ತಿದೆ ಎಂದನಿಸುತ್ತಿದೆ. ಕಾರಣ ಇಲ್ಲಿಗೆ ಬಹುನಿರೀಕ್ಷೆಯ ಲೈಟ್‌ ಟ್ರಾಮ್ ಸಾರಿಗೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿದೇಶಕ್ಕೆ ಭೇಟಿ ನೀಡಿದ್ದಾರೆ. ವಾಹನಗಳ ತಯಾರಿಕೆ ಕಂಪನಿಗೆ ಭೇಟಿ ನೀಡಿ ನಗರಗಳಲ್ಲಿ ವಾಹನ ಸಂಚಾರ ಆರಂಭ ಕುರಿತು ಮಾತುಕತೆ ನಡೆಸಿದ್ದಾರೆ.

ಹುಬ್ಬಳ್ಳಿ -ಧಾರವಾಡ ನಡುವೆ ಲೈಟ್‌ ಟ್ರಾಮ್ ಸಾರಿಗೆ ಅಳವಡಿಕೆ ಮಾಡಲು ಸಂತೋಷ್‌ ಲಾಡ್ ಅವರು ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನ ವಾಹನ ತಯಾರಿಕಾ ಕಂಪನಿ ಹೆಸ್ (HESS) ನ ಫ್ರಾನ್ಸ್ ಕಚೇರಿಗೆ ಭೇಟಿ ನೀಡಿದ್ದರು. ವಾಹನ ಹಾಗೂ ತಯಾರಿಕೆ ಘಟಕ ಪರಿಶೀಲಿಸಿದ್ದರು.

Santosh Lad Thinking to be Implemented Light Tram Bus Transport in Hubballi- Dharwad

ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ಅವಳಿ ನಗರಗಳಾಗಿ ಹೆಸರು ಪಡೆದಿದೆ. ಈ ಅವಳಿನಗರಗಳ ಮಧ್ಯೆ ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಇಲ್ಲಿ ಸುಸ್ಥಿರ ಸಾರಿಗೆ ಆರಂಭಿಸಿದರೆ ಸಾಕಷ್ಟು ಪ್ರಯೋಜನವಾಗುವ ಆಲೋಚನೆಯಲ್ಲಿ ಸಚಿವರಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕ ಸ್ನೇಹಿ ಸಾರಿಗೆ ಒದಗಿಸಲು ಚಿಂತನೆ ನಡೆದಿದೆ. ಆದಾಯ ಮತ್ತು ಖರ್ಚುಗಳನ್ನು ನೋಡಿಕೊಂಡು ಈ ಹೊಸ ಸಾರಿಗೆ ವ್ಯವಸ್ಥೆ ಅಳವಡಿಸಬೇಕು. ಈ ನಿಟ್ಟಿನಲ್ಲಿ ಅವರು ಫ್ರಾನ್ಸ್ ಪ್ರವಾಸದಲ್ಲಿ ಹೆಸ್ ಕಂಪನಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.

ಸ್ವಿಟ್ಜರ್ಲೆಂಡ್ ಮೂಲಕ HESS ವಾಹನ ತಯಾರಿಕಾ ಕಂಪನಿ ಕಳೆದ 138 ವರ್ಷಗಳಿಂದ ವಾಹನ ಮಾರುಕಟ್ಟೆಯಲ್ಲಿ ಮುಂಚೂನಿಯಲ್ಲಿದೆ. ಎಲೆಕ್ಟ್ರಿಕ್ ಬಸ್‌ಗಳಂತಹ ಸಾರಿಗೆ ವಾಹನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಪ್ರಸಕ್ತದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳು ಪ್ರತಿ ದಿನ ನಡೆಯುತ್ತಿವೆ.

ಎಲ್ಲಾ ನಗರಗಳಿಗೆ ಎಲ್ಲಾ ರೀತಿಯ ಸಾರಿಗೆ ಹೊಂದಿಕೆಯಾಗುವುದಿಲ್ಲ. ಇಂತಹ ತೊಡಕನ್ನು ಗಮನದಲ್ಲಿಟ್ಟುಕೊಂಡೇ ಸಚಿವ ಲಾಡ್‌ ಅವರು ಲೈಟ್‌ ಟ್ರಾಮ್ ನಂತಹ ಸಾರಿಗೆ ಆರಂಭಿಸಲು ಮುಂದಾಗಿದ್ದಾರೆ. ಇಂತಹ ಸಾರಿಗೆ ಉಪಕ್ರಮಗಳು ಜನರಿಗೆ ಬೇಗ ದೊರೆಯಬೇಕು, ಸುರಕ್ಷತೆಗೆ ಆದ್ಯತೆ ನೀಡಬೇಕು, ಸರ್ಕಾರ ಮತ್ತು ಪ್ರಯಾಣಿಕರಿಗೆ ಹೊರೆಯಾಗದಂತೆ ಜಾರಿಗೆ ತರುವ ಉದ್ದೇಶ ಇದೆ.

ಲೈಟ್‌ ಟ್ರಾಮ್ ಹುಬ್ಬಳ್ಳಿ- ಧಾರವಾಡ ನಡುವೆ ಅತ್ಯಂತ ಸೂಕ್ತವಾಗಲಿದೆ. ಪ್ರಸ್ತುತ ಇರುವ ಬಿ ಆರ್ ಟಿಎಸ್ ವ್ಯವಸ್ಥೆ ಬಹಳ ಅವ್ಯವಸ್ಥೆಯನ್ನು ಹುಟ್ಟು ಹಾಕಿದೆ. ಸಾರ್ವಜನಿಕ ವಲಯದಲ್ಲಿ ಅಷ್ಟೊಂದು ಸಮಾಧಾನ ತಂದಿಲ್ಲ. ಹೀಗಾಗಿ ಹುಬ್ಬಳ್ಳಿ-ಧಾರವಾಡ ನಗರಗಳ‌ ಮಧ್ಯೆ ಮೆಟ್ರೋ ರೈಲು, ಮೋನೋ ರೈಲು ಅಥವಾ ಟ್ರಾಮ್ ಸೇವೆ ಆರಂಭಿಸುವಂತೆ ಚರ್ಚೆಗಳು ಆರಂಭವಾಗಿವೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+