Dharwad Result: ದಿಂಗಾಲೇಶ್ವರ ಶ್ರೀಗಳ ಆಶೀರ್ವಾದಿಂದ ನನಗೆ ಗೆಲುವು: ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಧಾರವಾಡ, ಜೂನ್ 04: ಧಾರವಾಡ ಕ್ಷೇತ್ರದಲ್ಲಿ ನನ್ನ ಪ್ರತಿಸ್ಪರ್ಧಿಗಳು ಅಪಪ್ರಚಾರ ಮಾಡುತ್ತಾ ಬಂದರು. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಮಾಡಿಯೇ ಇಲ್ಲ ಎಂದು ಸುಳ್ಳು ಹೇಳಿದರು. ಇಂದು ಬಿಜೆಪಿಗೆ ಗೆಲುವಾಗಿದೆ. ಈ ಗೆಲುವು ಮತದಾರ ಪ್ರಭುಗಳಿಗೆ ಸಲ್ಲಬೇಕು ಎಂದು ಧಾರವಾಡದಿಂದ ಐದನೇ ಭಾರಿಗೆ ಸಂಸತ್‌ಗೆ ಆಯ್ಕೆ ಆದ ಬಿಜೆಪಿ ವಿಜೇತ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಹೇಳಿದರು.
ಮತ ಎಣಿಕಾ ಕೇಂದ್ರದ ಬಳಿ ಅವರು ಸುದ್ದಿಗಾರರ ಜೊತೆ ಮಾತನಾಡಿ, ಪ್ರತಿ ಸ್ಪರ್ಧಿಗಳ ಸುಳ್ಳು ಹೇಳಿಕೆಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ನಮ್ಮ ಕ್ಷೇತ್ರದ ಜನತೆಗೆ ಧನ್ಯವಾದಗಳು ಸಲ್ಲಿಸುತ್ತೇನೆ ಜನತಾ ಜನಾರ್ದನ ಆಶಿರ್ವಾದ ದಿಂದ ಗೆಲುವಾಗಿದೆ. ಮತದಾರ ಪ್ರಭುಗಳಿಗೆ ಈ ಗೆಲುವು ಸಲ್ಲಬೇಕು. ಎಲ್ಲ ಕಾರ್ಯಕರ್ತರು ಮುಖಂಡರು ಸೇರಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಧಾರವಾಡದಲ್ಲಿ ಪ್ರತಿಸ್ಪರ್ಧಿಗಳು ಅಪಪ್ರಚಾರ ಮಾಡುತ್ತಾ ಬಂದರು. ಸಾಕಷ್ಟು ಹಣ ಹೆಂಡವನ್ನ ಹಂಚಿದ್ದಾರೆ. ಆದರೆ ಜನರು ನಮ್ಮ ಕೈ ಹಿಡಿದಿದ್ದಾರೆ. ಕರ್ನಾಟಕದ ಜನರು ಈಗಾಗಲೇ ಬಿಜೆಪಿಗೆ ಆಶಿರ್ವಾದ ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ 300 ಗಡಿ ತಲುಪಿದ್ದೇವೆ. ನಿರೀಕ್ಷೆ ತಕ್ಕಂತೆ ನಾವು ಅಂದುಕೊಂಡಂತೆ ಸೀಟು ಬಂದಿಲ್ಲ
ಎಲ್ಲಿ ಏನು ಆಗಿದೆ ಎಂಬ ವಾಸ್ತವಿವನ್ನು ನೋಡಬೇಕಾಗಿದೆ. ಆದಷ್ಟು ಶೀಘ್ರವೇ ದೆಹಲಿಗೆ ತೆರಳುತ್ತೇನೆ. ಈ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸುತ್ತೇ. ದೇಶದಲ್ಲಿ ಚುನಾವಣಾ ಆಗಿದ್ದು ಎನ್‌ಡಿಎ ಹಾಗೂ 'ಇಂಡಿ' ಮೈತ್ರಿ ಮದ್ಯೆ. ಆದ್ದರಿಂದ ನಮ್ಮ ಜೊತೆಗೆ ನಿಂತವರು ಗಟ್ಟಿಯಾಗಿ ನಿಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಈ ಬಾರಿ ಗೆಲುವಿನ ಅಂತರ ಕಡಿಮೆ ಆಗಿದ್ದರ ಪ್ರಶ್ನೆಗೆ ಉತ್ತರಿಸಿದ ಅವರು, ಪರ್ಸೆಂಟೇಜ್ ಓಟ್ ಗಳು ಕಡಿಮೆಯಾಗಿರುವ ಕಾರಣ ಲೀಡ್ ಕಡಿಮೆ ಆಗಿದೆ. ಈಗಾಗಲೇ ನಾವು ಕೈಗೊಂಡಿರುವ ಕಾಮಗಾರಿಗಳ ಮುಂದುವರೆಸಿಕೊಂಡು ಹೋಗುತ್ತೇವೆ. ನನ್ನ ಖಾತೆಯನ್ನ ಸರಿಯಾಗಿ ನಿಭಾಯಿಸಿದ್ದೇನೆ ಎಂದು ಅವರು ಕ್ಷೇತ್ರದಲ್ಲಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ದಿಂಗಾಲೇಶ್ವರ ಶ್ರೀಗಳ ಆಶೀರ್ವಾದದಿಂದ ಗೆಲುವು: ಜೋಶಿ
ಮುಂದಿನ ಐದು ವರ್ಷ ನನಗೆ ಮಂತ್ರಿಯಾಗಲು ಪ್ರಧಾನಿ ನರೇಂದ್ರ ಮೋದಿಯವರು ಅವಕಾಶ ಮಾಡಿಕೊಟ್ಟಿದ್ದಾರೆ. ಚುನಾವಣೆಗೂ ಮೊದಲು ದಿಂಗಾಲೇಶ್ವರ ಸ್ವಾಮೀಜಿ ಆರೋಪ ಕುರಿತು ಸಹ ಪ್ರತಿಕ್ರಿಯೆ ಕೊಟ್ಟ ಅವರು
ದಿಂಗಾಲೇಶ್ವರ ಶ್ರೀಗಳ ಅವರ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ ಎಂದು ಅವರು ತಿಳಿಸಿದರು.
ಚುನಾವಣೆ ಮೊದಲು ದಿಂಗಾಲೇಶ್ವರ ಶ್ರೀಗಳು ಪ್ರಹ್ಲಾದ್ ಜೋಶಿ ವಿರುದ್ಧ ಬಂಡಾವೆದ್ದಿದ್ದರು. ನಂತರ ಪಕ್ಷೇತರ ಸ್ಪರ್ಧೆಗೆ ಮನಸ್ಸು ಮಾಡಿ ಬಿಜೆಪಿ ವಿರುದ್ಧ ನಾಮಪತ್ರ ಸಲ್ಲಿಸಿದ್ದರು. ಇತ್ತ ಕಾಂಗ್ರೆಸ್‌ನಿಂದ ವಿನೋದ್ ಅಸೂಟಿ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಸ್ವಾಮೀಜಿಗೆ ಕಣಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ಅವರ ಪರ ರಾಜಕೀಯ ಒಲವು ವ್ಯಕ್ತಪಡಿಸಿತ್ತು. ಈ ವೇಳೆ ಪ್ರತಿ ಹಂತದಲ್ಲೂ ದಿಂಗಾಲೇಶ್ವರ ಶ್ರೀಗಳ ಟೀಕೆಗಳು ನನಗೆ ಆಶೀರ್ವಾದ ಎನ್ನುತ್ತಿದ್ದ ಪ್ರಹ್ಲಾದ್ ಜೋಶಿವಯರಿಗೆ ಧಾರವಾಡ ಜನರು ಬಹುಪರಾಕ್ ಹೇಳಿದ್ದಾರೆ.












Click it and Unblock the Notifications