84ನೇ ಕನ್ನಡ ಸಾಹಿತ್ಯ ಸಮ್ಮೇಳನ : ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಣೆ

ಧಾರವಾಡ, ಜನವರಿ 03 : 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಿದೆ. ಧಾರವಾಡದಲ್ಲಿ ಜನವರಿ 4ರಂದು ಸಾಹಿತ್ಯ ಜಾತ್ರೆಗೆ ಚಾಲನೆ ಸಿಗಲಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಧಾರವಾಡ ಘಟಕ ಜನವರಿ 4, 5 ಮತ್ತು 6ರಂದು ವಿಶೇಷ ಪ್ರವಾಸಿ ಪ್ಯಾಕೇಜ್‌ ಟೂರ್ ಆಯೋಜನೆ ಮಾಡಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರವಾಸಿಗರು ಇದರ ಸುದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಜಲಧಾರೆ, ಶಿಲ್ಪಕಲೆ ಹಾಗೂ ದೇವಸ್ಥಾನಗಳ ವೀಕ್ಷಣೆಗೆ ಧಾರವಾಡದಿಂದ ಹೋಗುವ ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 4 ಹಂತದಲ್ಲಿ ಪ್ಯಾಕೇಜ್‌ಗಳನ್ನು ವಿಂಗಡನೆ ಮಾಡಲಾಗಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 84ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಜನವರಿ 3ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂರು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಟೂರ್ ಪ್ಯಾಕೇಜ್‌ಗಳ ವಿವರ ಚಿತ್ರಗಳಲ್ಲಿದೆ....

ಪ್ಯಾಕೇಜ್ - 01

ಪ್ಯಾಕೇಜ್ - 01

ಪ್ಯಾಕೇಜ್‌ 01ರಲ್ಲಿ ಧಾರವಾಡ-ನವಿಲುತೀರ್ಥ-ಗೋಕಾಕ ಫಾಲ್ಸ್-ಗೋಡಚಿನಮಲ್ಕಿ-ಧಾರವಾಡ ಸೇರಿದೆ. ವಯಸ್ಕರಿಗೆ 300, ಮಕ್ಕಳಿಗೆ 150 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ.

ಪ್ಯಾಕೇಜ್ 02

ಪ್ಯಾಕೇಜ್ 02

ಪ್ಯಾಕೇಜ್‌ - 02ರಲ್ಲಿ ಧಾರವಾಡ-ದಾಂಡೇಲಿ-ಮೌಳಂಗಿ-ಕೂಳಗಿ ನೇಚರ್ ಪಾರ್ಕ್-ಉಳವಿ-ಧಾರವಾಡ. ವಯಸ್ಕರಿಗೆ 300 ರೂ., ಮಕ್ಕಳಿಗೆ 150 ರೂ. ದರ ನಿಗದಿ ಮಾಡಲಾಗಿದೆ.

ಪ್ರವಾಸಿ ತಾಣಗಳು

ಪ್ರವಾಸಿ ತಾಣಗಳು

ಪ್ಯಾಕೇಜ್‌ 3ರಲ್ಲಿ ಧಾರವಾಡ-ಆಲಮಟ್ಟಿ ಡ್ಯಾಂ-ಕೂಡಲಸಂಗಮ-ಧಾರವಾಡ ಸೇರಿವೆ. ವಯಸ್ಕರಿಗೆ 440 ರೂ., ಮಕ್ಕಳಿಗೆ 220 ರೂ. ದರ ನಿಗದಿ ಮಾಡಲಾಗಿದೆ.

ಪ್ಯಾಕೇಜ್‌ - 04

ಪ್ಯಾಕೇಜ್‌ - 04

ಪ್ಯಾಕೇಜ್‌ 04ರಲ್ಲಿ ಧಾರವಾಡ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ಬನಶಂಕರಿ-ಧಾರವಾಡ ಸೇರಿವೆ. ವಯಸ್ಕರಿಗೆ 360 ರೂ., ಮಕ್ಕಳಿಗೆ 180 ರೂ. ದರ ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+