ಹುಬ್ಬಳ್ಳಿ: ಮತದಾನಕ್ಕೆ ಚಕ್ಕರ್ ಹೊಡೆದ ಶಿಕ್ಷಕರು

ಹುಬ್ಬಳ್ಳಿ, ಜೂನ್ 09: ಪಶ್ಚಿಮ ಪದವೀಧರ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಗುರುವಾರ ನಡೆದ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆ ಹೊತ್ತಿಗೆ ಮುಕ್ತಾಯಗೊಂಡಿತು. ಮಧ್ಯಾಹ್ನದ ವೇಳೆಗೆ ಶೇ.60 ರಷ್ಟು ಮತದಾನ ಆಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರವು ಗದಗ, ಹಾವೇರಿ, ಧಾರವಾಡ ಹಾಗೂ ಕಾರವಾರ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಶಿಕ್ಷಕ ವರ್ಗದವರು ಈ ಚುನಾವಣೆಗೆ ಸಾರ್ವತ್ರಿಕ ರಜೆ ಘೋಷಿಸಬೇಕಾಗಿತ್ತು. ಹಾಗಾಗಿದ್ದರೆ ಮತದಾನ ಏರಿಕೆ ಕಾಣುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು.[ಹುಬ್ಬಳ್ಳಿ ಹುತಾತ್ಮ ಸೈನಿಕನಿಗೆ ಅಂತಿಮ ನಮನ]

hubballi

ಜಿಲ್ಲಾವಾರು ಮತದಾರರ ವಿವರ: ಧಾರವಾಡ -9319, ಗದಗ- 3898, ಹಾವೇರಿ-5305, ಕಾರವಾರ-3866 ಸೇರಿದಂತೆ ಒಟ್ಟು 22388 ಮತದಾರರಿದ್ದಾರೆ. ಇವರಲ್ಲಿ 7154 ಮಹಿಳಾ ಮತದಾರರಿರುವುದು ವಿಶೇಷ. ಮತಗಟ್ಟೆ ಸ್ಥಾಪಿಸಲಾದ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು.

ಈ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಸವರಾಜ ಹೊರಟ್ಟಿ ಈ ಚುನಾವಣೆಯಲ್ಲಿ ಗೆದ್ದರೆ ಸತತ 7ನೇ ಬಾರಿ ಗೆದ್ದು ಗಿನ್ನೆಸ್ ದಾಖಲೆ ಮಾಡಲಿದ್ದಾರೆ. ಕಾಂಗ್ರೆಸ್ ಟಿ.ಈಶ್ವರ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಬಿಜೆಪಿಯ ಮಾ. ನಾಗರಾಜ ವೃತ್ತಿಯಿಂದ ಫ್ರೋಫೆಸರ್ ಆಗಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಕುಬೇರಪ್ಪ ಬಿಜೆಪಿಯ ಮಾ. ನಾಗರಾಜ ಅವರನ್ನು ಸೋಲಿಸಿ ತಾವೇ ಗೆಲ್ಲುವುದಾಗಿ ಹೇಳಿಕೊಂಡಿದ್ದಾರೆ.[ಬಸವರಾಜ್ ಹೊರಟ್ಟಿಗೆ ಪ್ರತಿಷ್ಠೆ ಪ್ರಶ್ನೆ]

-

-

-

-

-

-

-

-

-

-

ಈ ಕ್ಷೇತ್ರಕ್ಕೆ ಒಟ್ಟು 77 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 92 ಮತಗಟ್ಟೆ ಅಧಿಕಾರಿಗಳು, 180 ಸಹಾಯಕ ಸಿಬ್ಬಂದಿ, 101 ಮತಗಟ್ಟೆ ಸಹಾಯಕರು, 58 ರೂಟ್ ಆಫಿಸರ್ ಗಳನ್ನು ಚುನಾವಣೆಗೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು.[ವಿಧಾನಪರಿಷತ್ ಸದಸ್ಯರು ಹೇಗೆ ಆಯ್ಕೆಯಾಗುತ್ತಾರೆ?]

ಯಾಕೆ ಚುನಾವಣೆ?
ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ವಿಧಾನಪರಿಷತ್ ಸದಸ್ಯರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ, ಅವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+