10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ: ಸಚಿವ ಕಾಗೋಡು ತಿಮ್ಮಪ್ಪ

Subscribe to Oneindia Kannada

ಧಾರವಾಡ, ಆಗಸ್ಟ್, 12: ಡಿಸೆಂಬರ್ ಅಂತ್ಯದೊಳಗೆ ರಾಜ್ಯದ 10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದ್ದಾರೆ.

ಹಿಂಗಾರು ಬರ ಪರಿಸ್ಥಿತಿ ನಿರ್ವಹಣೆ, ಪ್ರಸಕ್ತ ಮುಂಗಾರು ಮಳೆ ವಿವರ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಕುರಿತು ನಡೆದ ಧಾರವಾಡದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.[ಕಾಗೋಡು ಜಾಗಕ್ಕೆ ಕೋಳಿವಾಡ]

Government land residents will gets title deed: Kagodu

ಪ್ರತಿಯೊಂದು ಕುಟುಂಬವೂ ತನ್ನ ಹಕ್ಕಿನ ಜಾಗದಲ್ಲಿಯೇ ವಾಸಿಸಬೇಕು. ಪಂಚಾಯಿತಿ ಗೆ ಸೇರಿದ ಜಾಗದಲ್ಲಿ ವಾಸಿಸುತ್ತಿರುವವರಿಗೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಪಿಡಿಓ ಅಧಿಕಾರಿಗಳು ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಅವರು ಸೂಚಿಸಿದರು.[ಕಂದಾಯ ಸಚಿವರಾಗಿ ಕಾಗೊಡು ಪ್ರಮಾಣ: ಬದಲಾವಣೆ ತರುವರೆ?]

Government land residents will gets title deed: Kagodu

ಗ್ರಾಮೀಣ ಭಾಗಗಳ ಹೊಲಗಳಿಗೆ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಲು, ವಹಿವಾಟು ರಸ್ತೆಗಳನ್ನು ಗ್ರಾಮದ ನಕಾಶೆಯಲ್ಲಿ ಸೇರಿಸಲು ಹೊಸ ಕಾಯ್ದೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Total 10 lakh families who are residents in government land will get title deed before December 2016 said Karnataka Revenue minister Kagodu Thimmappa at Dharwad on 11 Aug 2016 Chairing a meeting to review the performance of the revenue department.
Please Wait while comments are loading...