ಪಿಎಸ್ಐ ಮಂಜುನಾಥ್ ಕುಸುಗಲ್ ದೌರ್ಜನ್ಯ ಖಂಡಿಸಿ ಗಜೇಂದ್ರಗಡ ಬಂದ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಗದಗ,ಮಾರ್ಚ್, 04: ಪಿಎಸ್ಐ ಮಂಜುನಾಥ್ ಕುಸುಗಲ್ ಅವರು ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಶನಿವಾರ ಮಾ.5 ರಂದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣವನ್ನು ಬಂದ್ ಮಾಡಲಾಗುವುದು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದ್ದಾರೆ.

ಮಾಜಿ ಸಚಿವ ಕಳಕಪ್ಪ ಅವರು ಮಾತನಾಡಿ, 'ಕಾಂಗ್ರೆಸ್ ಕಾರ್ಯಕರ್ತನಂತೆ ವರ್ತಿಸುತ್ತ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಪಿಎಸ್ಐ ಮಂಜುನಾಥ್ ಕುಸುಗಲ್, ಅಮಾಯಕ ಮತ್ತು ಮುಗ್ಧ ಜನತೆಗೆ ಅನಾವಶ್ಯಕ ಕಿರಿಕಿರಿ ನೀಡುತ್ತಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ.["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ?"]

Gajendragad bandh on March 5th

ಪಿಎಸ್ಐ ಮಂಜುನಾಥ್ ಕುಸುಗಲ್ ಅವರು ಕೃಷಿ ಚಟುವಟಿಕೆಗೆ ಬಳಸುವ ಟ್ರ್ಯಾಕ್ಟರ್ ಮತ್ತು ಮನೆ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಒಯ್ಯುತ್ತಿರುವ ಲಾರಿಗಳನ್ನು ತಡೆದು ಹಣ ಕೀಳುತ್ತಿದ್ದಾರೆ. ಈ ವರ್ತನೆಯನ್ನು ಪ್ರಶ್ನಿಸಿದ ಶ್ರೀಸಾಮಾನ್ಯರಿಗೆ ಇಲ್ಲಸಲ್ಲದ ಕೇಸ್ ಗಳನ್ನು ದಾಖಲಿಸಿ ಜನರಿಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ.[ವಿದ್ಯಾರ್ಥಿನಿ ಬೆನ್ನುಬಿದ್ದ ಪೇದೆಗೆ ಬಿತ್ತು ಭರ್ತಿ ಒದೆ!]

ಸಂಚಾರ ವಿಭಾಗದಲ್ಲಿ ಭ್ರಷ್ಟತೆ ಹೆಚ್ಚಿಸುತ್ತಿರುವ ಈ ಮಂಜುನಾಥ್ ಕುಸುಗಲ್ ಟಂಟಂ ಮತ್ತು ದ್ವಿಚಕ್ರ ವಾಹನಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಆದ್ದರಿಂದ ಕೂಡಲೇ ಇಂತಹ ದುವರ್ತನೆಯ ಅಧಿಕಾರಿಯನ್ನು ಕೂಡಲೇ ಸರಕಾರ ಅಮಾನತು ಮಾಡುವಂತೆ ಆಗ್ರಹಿಸಿ ಶನಿವಾರ ಗಜೇಂದ್ರಗಡ್ ಬಂದ್ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gajendragad patna bandh on March 5th. Gajendragad is the city of Hubballi. PSI Manjunath Kusugal give tortured to people from some days.
Please Wait while comments are loading...