ಹೆಸ್ಕಾಂನ ಸಹಾಯವಾಣಿ ಉದ್ಘಾಟಿಸಿದ ಡಿಕೆ ಶಿವಕುಮಾರ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಮಾರ್ಚ್,16: ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಗ್ರಾಹಕರಿಗೆ ಆನ್ ಲೈನ್ ನಲ್ಲೇ ಬಿಲ್ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೆಸ್ಕಾಂ ಕಚೇರಿಯ ಸಹಾಯವಾಣಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.

ಅವರು ಬುಧವಾರ ನಗರದ ಹೆಸ್ಕಾಂ ಕಚೇರಿಯ ಸಹಾಯವಾಣಿ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಈ ಸಹಾಯವಾಣಿ 1912 ಮುಖಾಂತರ ಗ್ರಾಹಕರು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕಂಪನಿಯಿಂದ ಸಹಾಯ ಪಡೆಯಬಹುದು ಎಂದು ಹೇಳಿದರು.[ಹೆಸ್ಕಾಂ ಕರೆಂಟ್ ಬಿಲ್ ಕಟ್ಟಲು ಆನ್ ಲೈನ್ ವ್ಯವಸ್ಥೆ ಗತಿಯಿಲ್ಲ!]

Energy Minister D K Shivakumar inaugrates HESCOM helpline in Hubballi

ಈ ಸಮಾರಂಭದಲ್ಲಿ ಮಾತನಾಡಿದ ಅವರು, 'ಮುಂಬರುವ ಬಜೆಟ್ ಅವಧಿಯಲ್ಲಿ ನಿರಂತರ ಜ್ಯೋತಿ ಯೋಜನೆಗೆ ರೂಪರೇಷೆ, ಸದ್ಯದ ಧಾರವಾಡ-ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಈ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದರು.[ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]

ಈ ಸಹಾಯವಾಣಿ ಕೇಂದ್ರಕ್ಕೆ ಪ್ರತ್ಯೇಕವಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಸಿಬ್ಬಂದಿಯು ಸಹ ಗ್ರಾಹಕರ ಸೇವೆಗೆ ತೃಪ್ತಿಕರವಾಗಿ ಸೇವೆ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಆಶ್ವಾಸನೆ ನೀಡಿದರು.

ಮುಂಬರುವ 2018 ರ ವೇಳೆಗೆ ರೈತರಿಗೆ ದಿನಪೂರ್ತಿ ವಿದ್ಯುತ್ ಪೂರೈಕೆಯಾಗುವಂತೆ ಸೋಲಾರ್ ವಿದ್ಯುತ್ ಉತ್ಪಾದನೆ ರಾಜ್ಯದ 60 ತಾಲೂಕುಗಳಲ್ಲಿ ಸೋಲಾರ ವಿದ್ಯುತ್ ಪೂರೈಸಲು ಚಿಂತಿಸಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಈ ಪ್ರಕ್ರಿಯೆ ಬಗ್ಗೆ ಒಂದು ವರ್ಷದೊಳಗಾಗಿ ಸೂಕ್ತ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.[ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]

Hubballi

ಮೂರು ವರ್ಷಗಳ ಗ್ಯಾರಂಟಿ ಇರುವ ಬಲ್ಬ್ ಗಳನ್ನು ಪೂರೈಸುವಂತೆ ಹೆಸ್ಕಾಂ ವ್ಯಾಪ್ತಿಗೆ ಒಳಪಡುವಂತೆ ಕ್ರಮಕೈಗೊಳ್ಳಲಾಗಿದೆ, ಮಲೆನಾಡಿನ ಗ್ರಾಮಾಂತರ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸೋಲಾರ್ ವಿದ್ಯುತ್ ಪೂರೈಕೆಗಾಗಿ ಸೂರ್ಯ ರೈತ ಯೋಜನೆ ರೂಪಿಸಲಾಗುತ್ತಿದೆ ಎಂದರು.[ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ']

ಈಗಾಗಲೇ ರಾಜ್ಯದ ಮುದ್ದೇಬಿಹಾಳ, ಅಫಜಲಪೂರ, ಗದಗ, ಕನಕಪುರ, ಮಲೇಮಹಾದೇಶ್ವರ ಬೆಟ್ಟ ಸೇರಿದಂತೆ 100 ಹಳ್ಳಿಗಳಲ್ಲಿ ಸೋಲಾರ ಮೂಲಕ ವಿದ್ಯುತ್ ಪೂರೈಸಲಾಗುವುದು ಎಂದರು. ಈ ಸಮಾರಂಭದಲ್ಲಿ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ , ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಸಕ್ಕರಿ, ಮುಖ್ಯ ಇಂಜಿನಿಯರ ರಾಜಪ್ಪ ಇತರರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Energy Minister D K Shivakumar inaugurated HESCOM (Hubballi Electricity Supply Company Limitted) helpline in Hubballi on Wednesday, March 16th. HESCOM Helpline number is 1912.
Please Wait while comments are loading...