ಕುಡಿದ ನಶೆಯಲ್ಲಿ ಗಾಳಿಯಲ್ಲಿ ಗುಂಡು: ಇಬ್ಬರ ಬಂಧನ
ಧಾರವಾಡ, ಡಿಸೆಂಬರ್ 13 : ಕುಡಿದ ನಶೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಧಾರವಾಡದಲ್ಲಿ ಬುಧವಾರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಧಾರವಾಡ ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ಈ ಘಟನೆ ನಡೆದಿದೆ. ಹನುಮಂತೇಗೌಡ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ವ್ಯಕ್ತಿ. ಇನ್ನೊಬ್ಬ ಆರೋಪಿ ರಾಘವೇಂದ್ರ ಎಂಬುವವರನ್ನು ಕೂಡ ಬಂಧಿಸಲಾಗಿದೆ.

ಆದರೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ, ಸ್ಥಳದಲ್ಲಿದ್ದವು ಪೊಲೀಸರಿಗೆ ತಕ್ಷಣೇ ಮಾಹಿತಿ ನೀಡಿದ್ದಾರೆ, ಪೊಲೀಸರು ಆಗಮಿಸಿ ಅವರನ್ನು ಕರೆದೊಯ್ದಿದ್ದಾರೆ. ತನಿಖೆ ನಡೆಸುತ್ತಿರುವುದಾಗಿ ಡಿಸಿಪಿ ರೇಣುಕಾ ಸುಕುಮಾರ ಹೇಳಿಕೆ ನೀಡಿದ್ದಾರೆ. ವಿದ್ಯಾಗಿರಿ ಪಲೀಸ್ ಠಾಣೆಯಲ್ಲಿ ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ.












Click it and Unblock the Notifications