ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 16ರಿಂದ ಧಾರವಾಡ ಸಾಹಿತ್ಯ ಸಂಭ್ರಮ

|
Google Oneindia Kannada News

ಧಾರವಾಡ, ಡಿ.17 : ಈ ಬಾರಿಯ 'ಧಾರವಾಡ ಸಾಹಿತ್ಯ ಸಂಭ್ರಮ' ಕಾರ್ಯಕ್ರಮ ಜನವರಿ 16ರಿಂದ ಮೂರುದಿನಗಳ ಕಾಲ ನಡೆಯಲಿದೆ. ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, 300 ಜನರಿಗೆ ಮಾತ್ರ ಅವಕಾಶವಿದೆ.

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ 2015ರ 'ಧಾರವಾಡ ಸಾಹಿತ್ಯ ಸಂಭ್ರಮ'ದ ಬಗ್ಗೆ ಮಾಹಿತಿ ನೀಡಿದ್ದು, ಜನವರಿ 16,17 ಮತ್ತು 18ರಂದು ಈ ಬಾರಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

dharwad

ಸಮಾವೇಶದಲ್ಲಿ ಅಂದಾಜು 200 ಹಿರಿಯ-ಕಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ. ಸಾಹಿತ್ಯ ಸಂಭ್ರಮದಲ್ಲಿ ಪಂ. ಎಂ.ವೆಂಕಟೇಶಕುಮಾರ್ ಅವರ ಸಂಗೀತ ಕಾರ್ಯಕ್ರಮವಿದ್ದು, ಒಂದು ಸಿನಿಮಾ ಪ್ರದರ್ಶನ ಮತ್ತು ಮಾಸ್ತಿಯವರ 'ಇಲ್ಲಿಯ ತೀರ್ಪು' ನಾಟಕ ಪ್ರದರ್ಶನವಿದೆ. [ಸಾಹಿತ್ಯ ಸಂಭ್ರಮ ವೆಬ್ ಸೈಟ್ ನೋಡಿ]

ಸಾಹಿತ್ಯ ಸಂಭ್ರಮದ ಗೋಷ್ಠಿಗಳು : ಮೂರು ದಿನಗಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪತ್ತೇದಾರಿ ಕಾದಂಬರಿ ಈಗ ಏಕೆ ಬರುತ್ತಿಲ್ಲ?, ಲಲಿತ ಪ್ರಬಂಧಗಳ ಓದು, ಕನ್ನಡದಲ್ಲಿ ಅನುವಾದದ ಸಮಸ್ಯೆಗಳು, ಇತಿಹಾಸಕಾರರೊಂದಿಗೆ ಇತಿಹಾಸ­ಕಾರರ ಸಂವಾದ, ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ ಮುಂತಾದ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ.

ಕಾರ್ಯಕ್ರಮಕ್ಕೆ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, 300 ಜನರಿಗೆ ಮಾತ್ರ ಅವಕಾಶವಿದೆ. ಪ್ರತಿನಿಧಿ ಶುಲ್ಕ ರೂ.500. ಅರ್ಜಿಗಳನ್ನು www. dharwadsahityasambhrama.com ವೆಬ್‌ಸೈಟ್‌ನಿಂದ ಪಡೆದು­ಕೊಳ್ಳಬಹುದಾಗಿದೆ.

English summary
Dharwad Sahitya Sambhrama a three-day festival will be held in Dharwad from January 16 to 18 2015. For more details visit dharwadsahityasambhrama.com website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X