ರಾಜ್ಯದ ಯೋಧ ಮಂಜುನಾಥ ಜಕ್ಕಣ್ಣವರ್ ಹುತಾತ್ಮ

Posted By:
Subscribe to Oneindia Kannada

ಮಹಾರಾಷ್ಟ್ರ, ನವೆಂಬರ್ 27 : ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಯೋಧನೊಬ್ಬ ಹುತಾತ್ಮನಾಗಿದ್ದಾರೆ.

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧಾನೊರಾ ಹಳ್ಳಿಯಲ್ಲಿ ನಕ್ಸಲೀಯರ ವಿರುದ್ಧ ಕಾರ್ಯಾಚಾರಣೆ ಮಾಡಬೇಕಾದರೆ ಸಿ.ಆರ್.ಪಿ.ಎಫ್ ಯೋಧ ಧಾರವಾಡದ ಮನಗುಂಡಿ ಗ್ರಾಮದ ಮಂಜುನಾಥ ಜಕ್ಕಣ್ಣವರ್ ಹುತಾತ್ಮರಾಗಿದ್ದಾರೆ.

CRPF jawan Karnataka's Manjunath killed, 2 others injured in encounter

ನಿನ್ನೆ (ನವೆಂಬರ್ 26) ರಂದು ನಕ್ಸಲರ ಜೊತೆ ಸಿ.ಆರ್.ಪಿ.ಎಫ್ ಯೋಧರು ಮುಖಾಮುಖಿಯಾಗಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಯೋಧ ಜಕ್ಕಣ್ಣವರ್ ಅಸುನೀಗಿ ಇತರೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ನಕ್ಸಲರ ಗುಂಡೇಟಿನಿಂದ ಗಾಯಗೊಂಡಿದ್ದ ಮಂಜುನಾಥ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಎನ್ ಕೌಟಂರ್ ನಲ್ಲಿ ಸಾಕಷ್ಟು ನಕ್ಸಲರಿಗೆ ಗಾಯಗಳಾಗಿದೆ, ಕೆಲವು ನಕ್ಸರು ಹತರಾಗಿದ್ದಾರೆ ಎಂದು ಸಿ.ಆರ್.ಪಿ.ಎಫ್ ಅಧಿಕಾರಿಗಳು ಹೇಳಿದ್ದಾರೆ.

ಮಂಜುನಾಥ ಜಕ್ಕಣ್ಣನವರ್ ಅವರ ಮೃತದೇಹ ನಾಳೆ ರಾಜ್ಯಕ್ಕೆ ತಲುಪಲಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka's Dharwad district's Mangundi villages CRPF jawan Manjunath was killed while two others were injured in an encounter with Naxals in Maharashtra's Gadchiroli district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ