ಧಾರವಾಡದಲ್ಲಿ ಶೂಟೌಟ್; ಅಕೌಂಟೆಂಟ್ ಸಾವು
ಧಾರವಾಡ, ಸೆಪ್ಟೆಂಬರ್ 25: ಹುಬ್ಬಳ್ಳಿ ನಗರದಲ್ಲಿ ಶೂಟೌಟ್ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ಧಾರವಾಡದಲ್ಲಿ ಮತ್ತೊಂದು ಶೂಟೌಟ್ ನಡೆದಿದೆ.
ನಗರದ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಶಾಮ್ ಸುಂದರ್ ಮುತಕುಡಿ ಎಂಬುವವರು ಕಾರಿನಲ್ಲಿ ಬರುವಾಗ ಬೈಕ್ ನಲ್ಲಿ ಬಂದ ಮೂವರು ಗುಂಡು ಹಾರಿಸಿದ್ದಾರೆ. ದೆಹಲಿಯಲ್ಲಿ ಪ್ಯಾನಾಸೋನಿಕ್ ಕಂಪೆನಿಯಲ್ಲಿ ಶ್ಯಾಮ್ ಅಕೌಂಟೆಂಟ್ ಆಗಿದ್ದರು. ಬೈಪಾಸ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅವರು ಹೋಗುವಾಗ ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications