Get Updates
Get notified of breaking news, exclusive insights, and must-see stories!

World Environment Day 2023: ಈ ಬಾರಿ ಬೆಣ್ಣೆನಗರಿ ದಾವಣಗೆರೆಯ ಥೀಮ್‌ ಏನು?, ಇಲ್ಲಿದೆ ಮಾಹಿತಿ

ದಾವಣಗೆರೆ, ಜೂನ್‌, 05: ಸಾಮಾನ್ಯವಾಗಿ ಜೂನ್‌ 5 ಬಂತೆಂದರೆ ಸಾಕು ಹಲವೆಡೆ ವಿವಿಧ ರೀತಿಯಲ್ಲಿ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅದೇ ರೀತಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಗಿಳಿಗಳ ಸಂತತಿಯನ್ನು ಕಾಪಾಡಲು ಮರಗಳನ್ನು ಕಡಿಯದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ನಗರದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲ ಕಾಂಕ್ರಿಟ್‌ ರಸ್ತೆ ಮಾಡುವುದಕ್ಕಾಗಿ ಬೃಹತ್‌ ಮರಗಳನ್ನೇ ಮಾರಣ ಹೋಮ ಮಾಡಿದ್ದರು. ಅದರಲ್ಲೂ ಇದು ಗಿಳಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಹೀಗೆ ಮರಗಳಿಗೆ ಕೊಡಲಿ ಬೀಳುತ್ತಿದ್ದರೆ ಇಲ್ಲಿನ ಗಿಳಿಗಳ ಸಂತತಿಯೂ ಕಡೆಮೆಯಾಗುವುದಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಎಚ್ಚೆತ್ತ ಕೆಲ ಪರಿಸರ ಪ್ರೇಮಿಗಳು ಮರಗಳನ್ನು ಕಡಿಯದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಲ್ಲದೆ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.

World Environment Day:

ದಾವಣಗೆರೆಯ ಮಹಾನಗರ ಪಾಲಿಕೆ, ರೈಲ್ವೆ ನಿಲ್ದಾಣ, ಜನತಾ ಬಜಾರ್ ಸೇರಿದಂತೆ ಹಲವೆಡೆ ಗಿಳಿಗಳ ಸಾಮ್ರಾಜ್ಯವೇ ಇತ್ತು. ಸದ್ಯ ಮಹಾನಗರ ಪಾಲಿಕೆ ಸುತ್ತಮುತ್ತಲಿರುವ ಸುಮಾರು 20 ರಿಂದ 23 ಮರಗಳೇ ಈ ಗಿಳಿಗಳಿಗೆ ಆಶ್ರಯ ತಾಣವಾಗಿವೆ. ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಗಿಳಿಗಳು ಪ್ರತಿನಿತ್ಯ ಇಲ್ಲಿಗೆ ಬಂದು ಹೋಗುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬೆಣ್ಣೆನಗರಿಯಲ್ಲಿ ಬೆಣ್ಣೆ ದೋಸೆ, ಮಸಲಾ ಮಂಡಕ್ಕಿ ವಿಶೇಷ ಎನ್ನುತ್ತಾರೆ. ಆದರೆ ನಗರ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಗಿಳಿಗಳು ಒಂದೆಡೆ ಕಾಣಸಿಗುವುದು ಅಪರೂಪದಲ್ಲಿ ಅಪರೂಪ. ರಾಜ್ಯದಲ್ಲಿ ಇಂತಹ ತಾಣ ಬೇರೆ ಕಡೆ ಇಲ್ಲ ಎಂಬ ಮಾಹಿತಿಯೂ ಇದೆ.

ಮಹಾನಗರ ಪಾಲಿಕೆಯ ಸುತ್ತಮುತ್ತಲಿನ ಬೃಹತ್‌ ಮರಗಳಲ್ಲಿ ಸಂಜೆ 6:30ರಿಂದ ಬೆಳಗ್ಗೆ 7:15ರವರೆಗೆ ಗಿಳಿಗಳು ಇಲ್ಲಿಯೇ ವಾಸ ಮಾಡುತ್ತವೆ. ನಂತರ ಬೆಳಿಗ್ಗೆಯಾಗುತ್ತಿದ್ದಂತೆ ಇಲ್ಲಿಂದ ಹೊರಡುವ ಗಿಳಿಗಳ ಬಳಗ ಬೇರೆ ಬೇರೆ ಕಡೆ ಆಹಾರ ಹುಡುಕಿ ಹೋಗುತ್ತವೆ. ಸುಮಾರು 150 ಕಿಲೋಮೀಟರ್‌ವರೆಗೆ ಸಾಗುವುದು ಈ ಗಿಳಿಗಳ ಸಂಚಾರವೂ ಇನ್ನೂ ವಿಶೇಷವಾಗಿದೆ. ಹೊಲ, ಗದ್ದೆ ಸೇರಿದಂತೆ ಹಲವೆಡೆ ಸುತ್ತಾಡಿ ಮತ್ತೇ ತಮ್ಮು ಗೂಡಿಗೆ ಸೇರುತ್ತವೆ.

ಪಕ್ಷಿಗಳ ವಾಸಸ್ಥಳ ಉಳಿಯಬೇಕು

ಇಂತಹ ವಿಶಿಷ್ಟವಾದ ಪಕ್ಷಿಗಳ ವಾಸಸ್ಥಳ ಉಳಿಯಬೇಕು, ಬೆಳೆಯಬೇಕು. ಆದ್ದರಿಂದ ಈ ಸ್ಥಳವನ್ನು ಪಕ್ಷಿಗಳ ಸಂರಕ್ಷಣಾ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಎಸ್.ಟಿ.ವೀರೇಶ್ ಅವರು ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾಗ ದಾವಣಗೆರೆ ಗಿಳಿವಿಂಡು ಬಳಗವು ಈ ಬಗ್ಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ವೀರೇಶ್ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.

ಮರಗಳು ನಾಶವಾದಂತೆ ಗಿಳಿಗಳು ಕಣ್ಮರೆ ಅಗುತ್ತಿವೆ. ಇದೊಂದು ಅದ್ಭುತ ತಾಣ. ಈ ತಾಣದಲ್ಲಿರುವ ಮರಗಳನ್ನು ಯಾವ ಅಭಿವೃದ್ಧಿ ಕಾರ್ಯ ಕೈಗೊಂಡರೂ ಕತ್ತರಿಸಬಾರದು. ಮರಗಳನ್ನು ಪೋಷಿಸಬೇಕು. ಹೀಗೆ ಗಿಳಿಗಳ ಆಶ್ರಯ ತಾಣ ಉಳಿಯಬೇಕು ಎಂಬುದು ಇದರ ಸದುದ್ದೇಶವಾಗಿದೆ.

ಮಹಾನಗರ ಪಾಲಿಕೆ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಈ ಕೆಲಸ ಆಗಬೇಕಾದರೆ ಕೆಲವೊಮ್ಮೆ ಮರಗಳನ್ನು ಕಡಿಯಲೇಬೇಕಾಗುತ್ತದೆ. ಆದರೆ ಈ ಪ್ರದೇಶದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು. ಬದಲಿಗೆ ಇದನ್ನು ಗಿಳಿಗಳ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದರೆ ಮುಂದಿನ ಪೀಳಿಗೆಗೂ ಇವುಗಳನ್ನು ನೋಡಲು ಸಹಾಯ ಆಗುತ್ತದೆ.

ಇಲ್ಲಿ ಗಿಳಿಗಳ ದಂಡು ಸೇರುವುದೇಕೆ?

ಸಮಶೀತೋಷ್ಣ ಪ್ರದೇಶದಲ್ಲಿ ಗಿಳಿಗಳು ಹೆಚ್ಚಾಗಿ ವಾಸ ಮಾಡುತ್ತವೆ. ವಿಶಾಲವಾದ ಮರಗಳಿರಬೇಕು. ದೊಡ್ಡದಾದ ಆಲದ ಮರ ಸೇರಿದಂತೆ ಇತರೆ ಮರಗಳ ಮೇಲೆ ಇವುಗಳು ಇರುತ್ತವೆ. ಕೆಲವೊಂದು ಮರಗಳು ದೊಡ್ಡದಿದ್ದರೂ ಸಹ ಅಲ್ಲೇ ವಾಸ ಮಾಡುವುದಿಲ್ಲ. ಇದು ಅವುಗಳ ಜೀವನ ಶೈಲಿಯಾಗಿದೆ.

ಇನ್ನು ಗಿಳಿಗಳು ಒಣಗಿದ ಮರ ಹಾಗೂ ಹರಿಯುವ ನೀರಿನ ಪ್ರದೇಶಗಳಲ್ಲಿ ಹೆಚ್ಚಾಗಿ ಮೊಟ್ಟೆ ಇಡುತ್ತವೆ. ನಿರ್ಜನ ಪ್ರದೇಶದಲ್ಲಿ ಯಾವುದೇ ಗಿಜಿ ಗಿಜಿ, ಜನಸಂದಣಿ ಇರಬಾರದು. ಇಂತಹ ಪ್ರದೇಶ ಆಯ್ಕೆ ಮಾಡಿಕೊಂಡು ಮೊಟ್ಟೆ ಸಂರಕ್ಷಿಸುವ ಮೂಲಕ ಮರಿ ಮಾಡುತ್ತವೆ.

ಗಿಳಿವಿಂಡು ಬಳಗದ ಕೆಲಸವೇನು?

ಇನ್ನು ಗಿಳಿಗಳು, ಮರಗಳ ಉಳಿವಿಗೆ ದಾವಣಗೆರೆ ಗಿಳಿವಿಂಡು ಬಳಗ ಟೊಂಕಕಟ್ಟಿ ನಿಂತಿದೆ. ಇದಕ್ಕಾಗಿ ಕಳೆದ ಎರಡರಿಂದ ಮೂರು ವರ್ಷಗಳಿಂದಲೂ ಕೆಲಸ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಗಿಳಿಗಳನ್ನು ದೂರದಿಂದಲೇ ನೋಡುವ ಭಾಗ್ಯದ ಜೊತೆಗೆ ಮರಗಳನ್ನು ಉಳಿಸಬೇಕೆಂಬ ಉದ್ದೇಶವಿಟ್ಟುಕೊಂಡು ಮುನ್ನಡೆಯುತ್ತಿದೆ.

ಇಂದು ಸಂಜೆ 5:30ಕ್ಕೆ ನಗರದ ಜನತಾ ಬಜಾರ್ ಟೆರೇಸ್ ಮೇಲೆ ಗಿಳಿವಿಂಡು ನೋಡೋಣ ಬನ್ನಿ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗುತ್ತದೆ. ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಶಿಶುಪಾಲ್ ಉಪನ್ಯಾಸ ನೀಡಲಿದ್ದಾರೆ.

ಹಾಗೆಯೆ ಜನತಾ ಬಜಾರ್ ಅಧ್ಯಕ್ಷ ಗುರುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲಿಕೆಯ ಮಾಜಿ ಮೇಯರ್ ಎಸ್.ಟಿ. ವೀರೇಶ್, ಹಿರಿಯ ಪತ್ರಕರ್ತ ಕೆ.ಚಂದ್ರಣ್ಣ, ಎಸ್‌.ಬಿ.ಎಂ ನಿವೃತ್ತ ಅಧಿಕಾರಿ ಅಜಿತ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಎಸ್.ಟಿ. ವೀರೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇನ್ನು ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ಸಕ್ಕಟ್ಟು, ಅಶೋಕ್, ಎಂ.ಜಿ. ಶ್ರೀಕಾಂತ್ ಸೇರಿದಂತೆ ಮತ್ತಿತರರು ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+