ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಮಾರಿ ಕೊರೊನಾಗೆ ದಾವಣಗೆರೆಯಲ್ಲಿ ಮತ್ತೊಂದು ಬಲಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 5: ಮಹಾಮಾರಿ ಕೊರೊನಾ ವೈರಸ್ ಗೆ ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದು ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ.

ನಗರದ ಭಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಪಿ-533 ರ ಜೊತೆಗೆ ದ್ವಿತೀಯ ಸಂಪರ್ಕ ಹೊಂದಿದ್ದ ಸೋಂಕು ಪತ್ತೆಯಾಗಿದ್ದ ಸುಮಾರು 48 ವರ್ಷದ ಪಿ-651 ಮೃತ ಮಹಿಳೆಯಾಗಿದ್ದಾಳೆ.

ಭಾರತದಲ್ಲಿ 24 ಗಂಟೆಗಳಲ್ಲಿ 3,900 ಕೊರೊನಾ ಹೊಸ ಪ್ರಕರಣ ಪತ್ತೆಭಾರತದಲ್ಲಿ 24 ಗಂಟೆಗಳಲ್ಲಿ 3,900 ಕೊರೊನಾ ಹೊಸ ಪ್ರಕರಣ ಪತ್ತೆ

ಕಳೆದ 4 ದಿನಗಳ ಹಿಂದೆ ಈ ಮಹಿಳೆ ಸಾವನ್ನಪ್ಪಿದ್ದು, ರಕ್ತ ಪರೀಕ್ಷೆಯ ವರದಿ ಇಂದು ಪಾಸಿಟಿವ್ ಎಂದು ತಿಳಿದುಬಂದಿದೆ. ಅಧಿಕ ರಕ್ತದೊತ್ತಡ, ಮಧುಮೇಹದಿಂದಾಗಿ ಪಿ-651 ಸಾವನ್ನಪ್ಪಿದ್ದಾರೆ.

Coronavirus In Karnataka: Another Death In Davanagere

ಭಾಷಾ ನಗರದ ನರ್ಸ್ ಪಿ-533 ಸಂಬಂಧಿ ಎನ್ನಲಾದ ದ್ವಿತೀಯ ಸಂಪರ್ಕದ ಪಿ-651 ಉಸಿರಾಟದ ತೊಂದರೆ ಎಸ್‍ಎಆರ್ಐ ಮತ್ತು ರಕ್ತದೊತ್ತಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಮೇ.1 ರಂದು ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೇ.2 ರಂದು ಮಧ್ಯರಾತ್ರಿ 1.50 ರ ವೇಳೆ ಸಾವನ್ನಪ್ಪಿದ್ದರು.

ಸೋಂಕಿತ ನರ್ಸ್ ಪಿ-533 ರಿಂದ 16 ವರ್ಷದ ಪುತ್ರ ಸೇರಿದಂತೆ ಒಟ್ಟು 19 ಜನರಿಗೆ ಸೋಂಕು ಹರಡಿದೆ. ಮೇ. 1ರಂದು ನಗರದ ಜಾಲಿ ನಗರದ 69 ವರ್ಷದ ವೃದ್ಧ ಪಿ-655 ಸಾವನ್ನಪ್ಪಿದ್ದರು. ಇದೀಗ ಕೊರೋನಾ ವೈರಸ್ ಗೆ ಮಹಿಳೆ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಠಿಸಿದೆ.

ಕೊರೊನಾ ಕಾಣಿಸಿಕೊಂಡ ಮರು ದಿನವೇ ಮೃತಪಟ್ಟ ರೋಗಿ!ಕೊರೊನಾ ಕಾಣಿಸಿಕೊಂಡ ಮರು ದಿನವೇ ಮೃತಪಟ್ಟ ರೋಗಿ!

ನರ್ಸ್ ಸೋಂಕು ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಜಿಲ್ಲಾಡಳಿತಕ್ಕೆ ನರ್ಸ್ ನ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ನರ್ಸ್ ನಿಂದ 18 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೊದಲು ಆಕೆಯ ಪುತ್ರನಿಗೂ ಸೋಂಕು ತಗುಲಿತ್ತು. 56 ಮನೆಗಳಿಗೆ ತೆರಳಿ ಫ್ಲೂ ಸರ್ವೆಯನ್ನು ಈ ನರ್ಸ್ ಮಾಡಿದ್ದಳು. ಏಪ್ರಿಲ್ 26 ರಂದು ನರ್ಸ್ ಗೆ ಸೋಂಕು ಪತ್ತೆಯಾಗಿತ್ತು.

ಇನ್ನೂ 293 ಸ್ಯಾಂಪಲ್ ರಿಸಲ್ಟ್ ಗೆ ಜಿಲ್ಲಾಡಳಿತ ಕಾದು ಕುಳಿತಿದೆ. ಇನ್ನೊಬ್ಬ ರೋಗಿ ನಂಬರ್ 556 ಸೋಂಕಿತ ಮೃತ ವೃದ್ದನಿಂದ ಒಟ್ಟು 7 ಜನಕ್ಕೆ ಸೋಂಕು ತಗುಲಿತ್ತು. ಇನ್ನೊಬ್ಬ ಬೇತೂರು ನಿವಾಸಿಗೆ ಹೊರ ಜಿಲ್ಲೆಗೆ ಹೋಗಿ ಬಂದ ಹಿನ್ನೆಲೆ ಸೋಂಕು ಕಂಡು ಬಂದಿತ್ತು.

ಸೋಮವಾರ ದಾವಣಗೆರೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರವಿವಾರ ಒಂದೇ ದಿನ 21 ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದವು. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 32 ಕೊರೊನಾ ಸೋಂಕು ಪೀಡಿತ ಪ್ರಕರಣಗಳಿದ್ದು, ಸದ್ಯ 28 ಅ್ಯಕ್ಟಿವ್ ಕೊರೊನಾ ಸೋಂಕು ಪ್ರಕರಣಗಳಿವೆ.

English summary
A woman has died in Davanagere district due to coronavirus, making it the second victim in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X