ವೈರಲ್ ವಿಡಿಯೋ; ರೇಣುಕಾಚಾರ್ಯ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ
ದಾವಣಗೆರೆ, ಮಾರ್ಚ್ 10; ಫೇಸ್ ಬುಕ್‌ನಲ್ಲಿ ಸಕ್ರಿಯರಾಗಿರುವ ಕರ್ನಾಟಕದ ರಾಜಕೀಯ ನಾಯಕರಲ್ಲಿ ಎಂ. ಪಿ. ರೇಣುಕಾಚಾರ್ಯ ಸಹ ಒಬ್ಬರು. ರೇಣುಕಾಚಾರ್ಯ ಅವರ ಫೇಸ್ ಬುಕ್ ಪೋಸ್ಟ್ ಒಂದು ವೈರಲ್ ಆಗಿದೆ, ಹೊನ್ನಾಳಿ ಶಾಸಕರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 6ರಂದು ಹೊನ್ನಾಳಿಯ ಬಿಜೆಪಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ವಿಡಿಯೋವೊಂದನ್ನು ಹಾಕಿದ್ದಾರೆ. ಫೇಸ್ ಬುಕ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಹೊನ್ನಾಳಿ ಕ್ಷೇತ್ರದ ಕುಂಕುವ ಭೂಮಿಕಾ ಮತ್ತು ಶಿವಕುಮಾರ್ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ರೇಣುಕಾಚಾರ್ಯ ಅವರು ನವ ಜೋಡಿಗಳಿಗೆ ಆಶೀರ್ವಾದ ಮಾಡಿದರು. ಪ್ರೇಮಿಗಳ ಪೋಷಕರ ಮನವೊಲಿಸಿದರು.
ಈ ವಿಡಿಯೋವನ್ನು ಅವರು ಫೇಸ್ ಬುಕ್‌ನಲ್ಲಿ ಹಾಕಿದ್ದರು. 973 ಜನರು ಇದಕ್ಕೆ ಕಮೆಂಟ್ ಮಾಡಿದ್ದಾರೆ. 1.6 ಸಾವಿರ ಜನರು ಇದನ್ನು ಶೇರ್ ಮಾಡಿದ್ದಾರೆ. ಪ್ರೇಮಿಗಳಿಗೆ ಬೆಂಬಲ ನೀಡಿದ ಜೊತೆಗೆ ಪೋಷಕರನ್ನು ನೋಡಿಕೊಳ್ಳಲು ಸಲಹೆ ನೀಡಿದ ರೇಣುಕಾಚಾರ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಇರುವುದೇನು?
"ನನ್ನ ಮತ ಕ್ಷೇತ್ರದ ಕುಂಕುವ ಗ್ರಾಮದ ನನ್ನ ಹಿತೈಷಿಗಳ ಮಕ್ಕಳಾದ ಭೂಮಿಕಾ ಮತ್ತು ಶಿವಕುಮಾರ್ ಅವರು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಅವರ ಪೋಷಕರಿಗೆ ಮನವೊಲಿಸಿ ನವ ಜೋಡಿಗಳಿಗೆ ಶುಭ ಕೋರಿ ಆಶೀರ್ವಾದ ಮಾಡಿದೆನು" ಎಂಬ ಬರಹದೊಂದಿಗೆ ರೇಣುಕಾಚಾರ್ಯ ಅವರು ಫೇಸ್ ಬುಕ್‌ನಲ್ಲಿ ಈ ವಿಡಿಯೋ ಹಾಕಿದ್ದಾರೆ.

ಪ್ರೇಮಿಗಳಿಗೆ ಜೀವನ ಪಾಠ
ಭೂಮಿಕಾ ಮತ್ತು ಶಿವಕುಮಾರ್ ವಿವಾಹಕ್ಕೆ ಸಾಕ್ಷಿಯಾದ ರೇಣುಕಾಚಾರ್ಯ ಅವರು ಪ್ರೇಮಿಗಳಿಗೆ ಜೀವನ ಪಾಠ ಮಾಡಿದ್ದಾರೆ. "ಹುಡುಗಿ ತಂದೆ-ತಾಯಿ ಬಿಟ್ಟು ಬಂದಿದ್ದಾಳೆ. ನಿನಗಾಗಿ ಪ್ರೀತಿಗಾಗಿ ಅವಳನ್ನು ಸುಖವಾಗಿ ನೋಡಿಕೋ" ಎಂದು ಶಿವಕುಮಾರ್‌ಗೆ ಸಲಹೆ ಕೊಟ್ಟಿದ್ದಾರೆ.

ತಂದೆ-ತಾಯಿಯಂತೆ ನೋಡಿಕೋ
ಎಂ. ಪಿ. ರೇಣುಕಾಚಾರ್ಯ ಅವರು ತಮ್ಮ ಆಪ್ತರ ಪುತ್ರಿಯಾದ ಭೂಮಿಕಾಗೂ ಜೀವನ ಪಾಠ ಹೇಳಿದ್ದಾರೆ. "ತಂದೆ-ತಾಯಿ ನೋಡಿಕೊಳ್ಳುವಂತೆ ಅತ್ತೆ-ಮಾವನನ್ನು ನೋಡಿಕೊಳ್ಳಬೇಕು" ಎಂದು ಸಲಹೆ ನೀಡಿ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ದಾರೆ.
Recommended Video

ದೇವರು ಒಳ್ಳೆಯದು ಮಾಡಲಿ
ಪ್ರೇಮಿಗಳಿಗೆ ಆಶೀರ್ವಾದ ಮಾಡಿದ ರೇಣುಕಾಚಾರ್ಯ, ಭೂಮಿಕಾ ತಂದೆಗೆ ಅಲ್ಲಿಂದಲೇ ಕರೆ ಮಾಡಿ ಮಾತನಾಡಿದ್ದಾರೆ. ನಾನು ಆಶೀರ್ವಾದ ಮಾಡಿದ್ದೇನೆ, ಇಬ್ಬರು ಈಗ ಮನೆಗೆ ಬರುತ್ತಾರೆ ಕುಟುಂಬದವರೆಲ್ಲಾ ಆಶೀರ್ವಾದ ಮಾಡಬೇಕು ಎಂದು ಹೇಳಿದ್ದಾರೆ.












Click it and Unblock the Notifications