Get Updates
Get notified of breaking news, exclusive insights, and must-see stories!

ಅಪಘಾತವಲ್ಲ..ಲಾರಿ ಹತ್ತಿಸಿ ಕೊಲೆ: ದಾವಣಗೆರೆ ಯುವಕರ ಸಾವಿನ ಪ್ರಕರಣಕ್ಕೆ ತಿರುವು

ದಾವರಣಗೆರೆ ಯುವಕರು ಮೃತಪಟ್ಟಿದ್ದು ಅಪಘಾತದಿಂದ ಅಲ್ಲ, ಇದು ಕೊಲೆ ಎಂಬುದು ಸಾಬೀತಾಗಿದೆ. ಲಾರಿ ಹರಿಸಿ ಮೂವರನ್ನು ಕೊಲೆಗೈದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

ದಾವಣಗೆರೆ, ಫೆಬ್ರವರಿ 15: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೂವರು ಯುವಕರು ಸಾವನ್ನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಯುವಕರು ಮೃತಪಟ್ಟಿದ್ದು ಅಪಘಾತದಿಂದ ಅಲ್ಲ, ಇದು ಕೊಲೆ ಎಂಬುದು ಸಾಬೀತಾಗಿದೆ. ಲಾರಿ ಹರಿಸಿ ಮೂವರನ್ನು ಕೊಲೆಗೈದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮೂವರು ಯುವಕರ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ಭೋಲೆ ಯಾದವ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇನ್ನು ಹತ್ಯೆ ಬಳಸಲಾಗಿದ್ದ ಲಾರಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮ ಸಮೀಪದ ಎನ್. ಹೆಚ್ 48ರಲ್ಲಿ ಕಳೆದ 11ರಂದು ಬೆಳಗ್ಗಿನ ಜಾವ ಜಾತ್ರೆ ಮುಗಿಸಿ ರಾಮನಗರದ ಆರು ಯುವಕರು ದಾವಣಗೆರೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಮೂವರು ಯುವಕರು ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಪರಶುರಾಮ , ಶಿವುಕುಮಾರ ಮತ್ತು ಸಂದೇಶ ಸ್ಥಳದಲ್ಲಿ ಸಾವನ್ನಪ್ಪಿದ್ದ ಮೃತ ದುರ್ದೈವಿಗಳು. ಆದರೆ ಮೃತರ ಮನೆಯವರು ಸಂಶಯ ವ್ಯಕ್ತಪಡಿಸಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆಯಲ್ಲಿ ಪಾರಾಗಿ ಬಂದಿದ್ದ ನಾಗರಾಜ, ಗಣೇಶ ಹಾಗೂ ರಾಹುಲ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಫೋಟಕ ಸತ್ಯ ಹೊರ ಬಿದ್ದಿದೆ ಎನ್ನಲಾಗಿದೆ.

ಲಾರಿ ಚಾಲಕನಿಂದ 8,000 ರೂ ನಗದು ದೋಚಿದ ಯುವಕರು

ಲಾರಿ ಚಾಲಕನಿಂದ 8,000 ರೂ ನಗದು ದೋಚಿದ ಯುವಕರು

ಲಾರಿ ಚಾಲಕ ಉತ್ತರ ಪ್ರದೇಶದ ಭೋಲೆ ಯಾದವ್ ಲಾರಿಯನ್ನು ರಸ್ತೆಯ ಬದಿ ನಿಲ್ಲಿಸಿದ್ದ. ಈ ವೇಳೆ ರಾಮನಗರದ ಪರಶುರಾಮ, ನಾಗರಾಜ, ಸಂದೇಶ, ಗಣೇಶ, ರಾಹುಲ್ ಮತ್ತು ಶಿವುಕುಮಾರ ಜಾತ್ರೆ ಮುಗಿಸಿ ಮನೆಗೆ ವಾಪಸ್ ಆಗುವ ವೇಳೆ ಲಾರಿ ಅಡ್ಡಗಟ್ಟಿ ನಿಲ್ಲಿಸಿ ಲಾರಿ ಚಾಲಕನನ್ನು ಹೆದರಿಸಿ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ, ಲಾರಿ ಚಾಲಕನಿಂದ ರೂ . 8,000 ನಗದು ಹಣ , ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಆ ಬಳಿಕ ಲಾರಿಯ ಚಾಲಕನು ದರೋಡೆ ಮಾಡಿಕೊಂಡು ಹೋದ ಬೈಕ್‌ಗಳನ್ನು ಹಿಂಬಾಲಿಸಿದ್ದಾನೆ.

ಸಿಟ್ಟಿಗೆದ್ದು ಯುವಕ ಮೇಲೆ ಲಾರಿ ಹತ್ತಿಸಿದ ಚಾಲಕ

ಸಿಟ್ಟಿಗೆದ್ದು ಯುವಕ ಮೇಲೆ ಲಾರಿ ಹತ್ತಿಸಿದ ಚಾಲಕ

ಒಂದು ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ರಕ್ತಸಿಕ್ತರಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದ ನಾಗರಾಜ, ಗಣೇಶ ಮತ್ತು ರಾಹುಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ದರೋಡೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಮೂವರ ಮೇಲೆ ಲಾರಿ ಹರಿಸಿದ್ದ ಆರೋಪಿ ಭೋಲೆ ಯಾದವ್‌ನನ್ನು ಬಂಧಿಸಿದ್ದಾರೆ. ಈ ವೇಳೆ ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ನನ್ನ ಬಳಿ ಇದ್ದ 8 ಸಾವಿರ ರೂಪಾಯಿ, ಮೊಬೈಲ್ ಅನ್ನು ಕಿತ್ತುಕೊಂಡು ಹೋದರು. ಈ ವೇಳೆ ನನಗೆ ಸಿಟ್ಟು ಬಂತು. ಎರಡು ಬೈಕ್‌ಗಳಲ್ಲಿ ಮುಂದೆ ಹೋಗುತ್ತಿದ್ದಾಗ ಲಾರಿ ಜೋರಾಗಿ ಓಡಿಸಿದೆ. ಎರಡು ಬೈಕ್ ಗಳಿಗೆ ಗುದ್ದಿದೆ. ಒಂದು ಬೈಕ್ ನಲ್ಲಿದ್ದವರು ರಸ್ತೆಯ ಬದಿ ಬಿದ್ದರೆ, ಮತ್ತೊಂದು ಬೈಕ್‌ನಲ್ಲಿದ್ದರವರು ಲಾರಿ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಲಾರಿ ಚಾಲಕ ಸತ್ಯ ಹೇಳಿದ್ದಾನೆ ಎನ್ನಲಾಗಿದೆ.

ಬದುಕುಳಿದ ಮೂವರು ಬಾಯ್ಬಿಟ್ಟ ವಿಚಾರವೇನು?

ಬದುಕುಳಿದ ಮೂವರು ಬಾಯ್ಬಿಟ್ಟ ವಿಚಾರವೇನು?

ಗ್ರಾಮೀಣ ಪೊಲೀಸರಿಗೆ ಈ ಪ್ರಕರಣ ಸವಾಲಿನದ್ದಾಗಿತ್ತು. ಒಂದೆಡೆ ಅಪಘಾತ, ಮತ್ತೊಂದೆಡೆ ಮೂವರ ಸಾವು, ಮೂವರಿಗೆ ಗಾಯ ಹೇಗಾಯ್ತು ಎಂಬ ಗೊಂದಲ ಇತ್ತು. ಮೂವರ ಸಾವಿನ ಕುರಿತಾಗಿ ಜೊತೆಗಿದ್ದ ಮೂವರು ಏನಾದರೂ ಮಾಡಿರಬಹುದಾ ಎಂಬ ಶಂಕೆ ಆರಂಭದಲ್ಲಿ ಬಂತಾದರೂ ಆ ಬಳಿಕ ಲಾರಿ ಸುಲಿಗೆ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ. ಬದುಕುಳಿದ ಮೂವರನ್ನು ವಶಕ್ಕೆ ಪಡೆದಾಗ ಪ್ರಕರಣದ ಎಲ್ಲಾ ವಿಚಾರಗಳೂ ಬಯಲಿಗೆ ಬಂದಿವೆ. ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು, ದರೋಡೆಗೆ ಯತ್ನಿಸಿದ ಮೂವರು ಆರೋಪಿಗಳು ಹಾಗೂ ಲಾರಿ ಹರಿಸಿ ಕೊಂದು ಹಾಕಿದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಈ ಪ್ರಕರಣವನ್ನು ಬೇಧಿಸುವಲ್ಲಿ ಹಾಗೂ ಆರೋಪಿತರ ಪತ್ತೆ ಕಾರ್ಯಚರಣೆಯನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ ಬಸರಗಿ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ, ಸಿವಾಲಾ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಲಿಂಗನಗೌಡ ನೆಗಳೂರು, ಹೆಚ್.ಪಿ ನಾರಪ್ಪ, ದೇವೇಂದ್ರನಾಯ್ಕ, ಅಣ್ಣಯ್ಯ, ಮಂಜುನಾಥ, ಮಹಮ್ಮದ್ ಯೂಸುಫ್ ಅತ್ತಾರ್. ನಾಗರಾಜಯ್ಯ ಮತ್ತು ಡಿ.ಸಿ.ಐ.ಬಿ ವಿಭಾಗದ ಸಿಬ್ಬಂದಿ ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ಅಶೋಕ, ಸುರೇಶ, ಮಲ್ಲಿಕಾರ್ಜುನ, ರಮೇಶನಾಯ್ಕ, ನಟರಾಜ ಹಾಗು ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜು ಭಾಗವಹಿಸಿದ್ದರು.

ಪ್ರಕರಣ ಬೇಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+