ದಾವಣಗೆರೆ: ಎಂಸಿಸಿ ಬಿ ಬ್ಲಾಕ್‌ನಲ್ಲಿ ರಸ್ತೆ, ಒಳಚರಂಡಿ ಸಮಸ್ಯೆ

ದಾವಣಗೆರೆ, ಜೂ1: ಭಾರೀ ಮಳೆ ಸುರಿದ ಪರಿಣಾಮ ನಗರದ ಎಂಸಿಸಿ ಬಿ ಬ್ಲಾಕ್‌ನ ಮೂರನೇ ಮುಖ್ಯರಸ್ತೆಯ ಎರಡನೇ ತಿರುವಿನಲ್ಲಿ ನೀರು ನಿಂತು ಜನರು ಸಮಸ್ಯೆ ಅನುಭವಿಸಿದ್ದು, ರಸ್ತೆ ಮತ್ತು ಒಳಚರಂಡಿ‌ ಕಾಮಗಾರಿ ನಡೆಸದೇ ಇರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಈ ಹಿಂದೆ ಮುಖ್ಯಮಂತ್ರಿಗಳ ಅನುದಾನ ಬಂದಿತ್ತು. ಚೇಂಜ್ ಆಫ್ ವರ್ಕ್ ಬದಲಾವಣೆ ಆದ ಕಾರಣ ಸರ್ಕಾರ ಮಟ್ಟದಲ್ಲಿ ಕಡತ ಇದೆ. ಈ ಕಡತ ಹೋಗಿ 8-10 ತಿಂಗಳಾಗುತ್ತಾ ಬರುತ್ತಿದೆ.

ಕಾಮಗಾರಿ ನಡೆಸಲು ಎಲ್ಲಾ ರೀತಿಯ ಒಪ್ಪಿಗೆ ಸಿಕ್ಕಿದ್ದರೂ ಇದುವರೆಗೆ ಹಣ ಬಿಡುಗಡೆ ಮಾಡಿಸಿಲ್ಲ. ಬೆಂಗಳೂರಿಗೆ ಹೋಗಿ ಈ ಕೆಲಸ ಮಾಡಿಕೊಂಡು ಬರಲು ಆಡಳಿತ ವರ್ಗ ಹಾಗೂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಇದರಿಂದಾಗಿ ಜೋರು ಮಳೆ ಬಂದರೆ ನೀರು ನಿಲ್ಲುತ್ತದೆ. ವಾಹನಗಳ ನೀರಿನಿಂದ ರಸ್ತೆ ಜಲಾವೃತಗೊಂಡಿರುತ್ತವೆ. ಜನರು ಓಡಾಡುವುದೇ ಕಷ್ಟವಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆ ಪರಿಹಾರವಾಗಿಲ್ಲ?

ಸಮಸ್ಯೆ ಪರಿಹಾರವಾಗಿಲ್ಲ?

ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆಡಳಿತ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಆಡಳಿತ ವರ್ಗದವರು ಈ ರೀತಿ ಬೇಜವಾಬ್ದಾರಿ ವರ್ತನೆ ತೋರಿದರೆ ಹೇಗೆ? ಮಳೆಗಾಲ ಬಂದಾಗಲೇ ಎಚ್ಚೆತ್ತುಕೊಳ್ಳುತ್ತದೆಯಾ? ಸಮಸ್ಯೆ ಆಗುವ ಮುನ್ನವೇ ಯಾಕೆ ಪರಿಹಾರ ಮಾಡುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ಪಾಲಿಕೆಯ ಅಧಿಕಾರಿಗಳಾದ ಇಇ ಮನೋಹರ್, ಎಇಇ ಜಗದೀಶ್, ಎಇ ಮಧುಸೂದನ್ ಸ್ಥಳಕ್ಕೆ ಆಗಮಿಸಿದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ.ಎಸ್.ಮಂಜುನಾಥ್ ಗಡಿಗುಡಾಳ್ ಸಹ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ಈ ವೇಳೆ ನೀರು ನಿಂತಿರುವುದನ್ನು ಸ್ಥಳೀಯರು ಗಮನಕ್ಕೆ ತಂದರು. ಮೇಯರ್ ಸ್ಥಳ ಪರಿಶೀಲನೆ ಮಾಡಿ ಹೋದರೆ ಆಗದು. ಕೆಲಸ ಆಗಬೇಕು. ಇನ್ನು 15 ದಿನಗಳೊಳಗೆ ಕಾಮಗಾರಿ ಆರಂಭಿಸದಿದ್ದರೆ ವಾರ್ಡ್‌ನ ಜನರು ಪಾಲಿಕೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೇ, ಆಯುಕ್ತರು ಸಹ ಈ ಬಗ್ಗೆ ಗಮನ ಹರಿಸಬೇಕು. ಅವರ ಗಮನಕ್ಕೂ ತನ್ನಿ. ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು. ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಒಳಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿ ಆಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮೇಯರ್ ಜಯಮ್ಮ ಗೋಪಿನಾಯ್ಕ್, ಬೆಂಗಳೂರಿಗೆ ಹೋಗಿ ಕಡತ ಯಾವ ಇಲಾಖೆಯಲ್ಲಿದೆ ಎಂಬುದನ್ನು ಪರೀಕ್ಷಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ವಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್ ಅವರನ್ನು ಅವಶ್ಯಕತೆ ಇದ್ದರೆ ಕರೆದುಕೊಂಡು ಹೋಗುತ್ತೇವೆ. ಹದಿನೈದು ದಿನಗಳೊಳಗಾಗಿ ಸಮಸ್ಯೆಗೆ ಪರಿಹರಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಜನರು ಸುಮ್ಮನಾದರು.

ಕೆಸರು ಗದ್ದೆಯಂಥ ರಸ್ತೆಯಲ್ಲಿಯೇ ಜನತೆ ಬದುಕು

ಕೆಸರು ಗದ್ದೆಯಂಥ ರಸ್ತೆಯಲ್ಲಿಯೇ ಜನತೆ ಬದುಕು

ಸ್ಮಾರ್ಟ್‌ ಸಿಟಿ ಯೋಜನೆ ಘೋಷಣೆ ಆಗಿ ನಾಲ್ಕು ವರ್ಷವಾಗಿದ್ದು ಸಿಟಿಯಂತೂ ಸ್ಮಾರ್ಟ್‌ ಆಗುತ್ತಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ರೂಪಿಸಿರುವ ಮೂಲ, ನೀತಿ ನಿಯಮಗಳೇ ವೇಗಕ್ಕೆ ಅಡ್ಡಿಯಾಗಿವೆ ಎಂದು ಅಧಿಕಾರಿಗಳು, ರಾಜಕಾರಣಿಗಳು ದೂರುತ್ತಿದ್ದಾರೆ. ನಗರದ ಹಳೇಪೇಟೆಯಲ್ಲಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿ ಒಂದೂವರೆ ವರ್ಷ ಆಗಿದ್ದು ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬ ವಿರೋಧಿಸಿ ಇಲ್ಲಿನ ವರ್ತಕರು ಒಂದು ವರ್ಷದ ಹಿಂದೆಯೇ ಪ್ರತಿಭಟನೆ ನಡೆಸಿದ್ದರು. ಮಳೆಗಾಲದಲ್ಲಿ ಇಲ್ಲಿ ಕೆಸರು ಗದ್ದೆಯಂಥ ರಸ್ತೆಯಲ್ಲಿಯೇ ಜನತೆ ಬದುಕು ದೂಡಿದ್ದರು. ಈಗಲೂ ಇನ್ನೂ ಕಾಮಗಾರಿಗಳು ಪೂರ್ಣಗೊಂಡಿಲ್ಲ, ರಸ್ತೆ ಬದಿಯ ವಾಕ್ ಪಾತ್ ನಿರ್ಮಾಣ ಕೆಲಸ ಇನ್ನೂ ನಡೆಯುತ್ತಲೇ ಇದೆ.

ಆಯುಕ್ತರು ಗಮನ ಹರಿಸಬೇಕು

ಆಯುಕ್ತರು ಗಮನ ಹರಿಸಬೇಕು

ಮಳೆಗಾಲ ಇನ್ನಿತರೆ ಕಾರಣಕ್ಕೆ ಕಾಮಗಾರಿ ವಿಳಂಬ ಆಯಿತು ಎಂದು ಅಧಿಕಾರಿಗಳು ಹೇಳುತ್ತಾರೆ. ಈ ನಡುವೆ ಸ್ಮಾರ್ಟ್‌ಸಿಟಿ ಯೋಜನೆಯ ಎಂಡಿ ಬದಲಾವಣೆಯೂ ಆಯಿತು. ಈ ನಡುವೆ ಯೋಜನೆಗೆ ಬಿಡುಗಡೆಯಾದ ಅನುದಾನ ವಾಪಸ್‌ ಆಗುವ ಭೀತಿ ಸೇರಿ ನಾನಾ ಕಾರಣಗಳಿಗೆ ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ಒಂದಿಷ್ಟು ವೇಗ ಸಿಕ್ಕಿದೆ.

ಈ ವೇಳೆ ನೀರು ನಿಂತಿರುವುದನ್ನು ಸ್ಥಳೀಯರು ಗಮನಕ್ಕೆ ತಂದರು. ಮೇಯರ್ ಸ್ಥಳ ಪರಿಶೀಲನೆ ಮಾಡಿ ಹೋದರೆ ಆಗದು. ಕೆಲಸ ಆಗಬೇಕು. ಇನ್ನು ಹದಿನೈದು ದಿನಗಳೊಳಗೆ ಕಾಮಗಾರಿ ಆರಂಭಿಸದಿದ್ದರೆ ವಾರ್ಡ್ ನ ಜನರು ಪಾಲಿಕೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೇ, ಆಯುಕ್ತರು ಸಹ ಈ ಬಗ್ಗೆ ಗಮನ ಹರಿಸಬೇಕು. ಅವರ ಗಮನಕ್ಕೂ ತನ್ನಿ. ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು. ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಒಳಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿ ಆಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮೇಯರ್ ಜಯಮ್ಮ ಗೋಪಿನಾಯ್ಕ್, ಬೆಂಗಳೂರಿಗೆ ಹೋಗಿ ಕಡತ ಯಾವ ಇಲಾಖೆಯಲ್ಲಿದೆ ಎಂಬುದನ್ನು ಪರೀಕ್ಷಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ವಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್ ಅವರನ್ನು ಅವಶ್ಯಕತೆ ಇದ್ದರೆ ಕರೆದುಕೊಂಡು ಹೋಗುತ್ತೇವೆ. ಹದಿನೈದು ದಿನಗಳೊಳಗಾಗಿ ಸಮಸ್ಯೆಗೆ ಪರಿಹರಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಜನರು ಸುಮ್ಮನಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+