• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ದಾವಣಗೆರೆಯನ್ನು ರಾಜ್ಯದ ಮತ್ತೊಂದು ರಾಜಧಾನಿ ಮಾಡಿ"

|

ದಾವಣಗೆರೆ, ಜುಲೈ 28: 'ಕರ್ನಾಟಕದ ಮ್ಯಾಂಚೆಸ್ಟರ್' ಎಂದು ಕರೆಸಿಕೊಳ್ಳುವ ವಾಣಿಜ್ಯ ನಗರಿ ದಾವಣಗೆರೆಯನ್ನು ಕರ್ನಾಟಕದ ರಾಜಧಾನಿ ಮಾಡುವಂತೆ ಬಹುಕಾಲದಿಂದ ಸಮಿತಿಯೊಂದು ಬೇಡುತ್ತಾ ಬಂದಿದೆ.

ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ದಾವಣಗೆರೆ ಜಿಲ್ಲೆಗೆ ಆಗಬೇಕಾಗಿರುವ ಅಗತ್ಯ ಕಾರ್ಯಗಳ ಬಗ್ಗೆ ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಸಭೆ ಸೇರಿ ಚರ್ಚೆ ಮಾಡಿದೆ.

ಯಡಿಯೂರಪ್ಪ ಸರಕಾರದಿಂದ ಹೊರಬಿದ್ದ ಮೊದಲ ಆದೇಶ ಯಡಿಯೂರಪ್ಪ ಸರಕಾರದಿಂದ ಹೊರಬಿದ್ದ ಮೊದಲ ಆದೇಶ

ಜಿಲ್ಲೆಗಾಗಿ ಸಮಿತಿಯು ತಯಾರಿಸಿರುವ ಕಾರ್ಯಕ್ರಮ ಪಟ್ಟಿಯ ಬಗ್ಗೆ ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

* ದಾವಣಗೆರೆ-ಹರಿಹರವನ್ನು 2ನೇ ರಾಜಧಾನಿಯನ್ನಾಗಿ ಮಾಡಬೇಕು. * ಧಾರವಾಡದಲ್ಲಿರುವಂತೆ ಹೈಕೋರ್ಟಿನ ಸಂಚಾರಿ ಪೀಠವನ್ನು ಪ್ರಾರಂಭಿಸಬೇಕು. * ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾರ್ಯ ಶೀಘ್ರವಾಗಿ ಆಗಬೇಕು.
* ಅಶೋಕ ಟಾಕೀಸ್ ಬಳಿ ಮೇಲು ಸೇತುವೆ ನಿರ್ಮಾಣ ಮಾಡಬೇಕು. * ಯಶವಂತಪುರದಿಂದ ದಾವಣಗೆರೆ-ಬೆಳಗಾವಿ-ಮೀರಜ್ ವರೆಗೆ ವಿದ್ಯುತ್ ಚಾಲಿತ ಎಕ್ಸ್ ಪ್ರೆಸ್ ರೈಲಿಗೆ ಆಗ್ರಹ.
* ಎಐಎಂಎಸ್ಯು ಸ್ಥಾಪನೆಗೆ ಮನವಿ.
* ಬಾವಿಹಾಳ್-ಪುಟ್ಟಗನಹಳ್ಳಿ ಸರ್ಕಾರಿ ಜಮೀನಿನಲ್ಲಿ ಮೆಕ್ಕೆಜೋಳ ಉಪ
ಉತ್ಪನ್ನ ಕಾರ್ಖಾನೆ ಸ್ಥಾಪನೆ.
* ನಗರದ ಸಿ.ಜಿ. ಆಸ್ಪತ್ರೆಯನ್ನು ಎ-1 ದರ್ಜೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿಸಬೇಕು.
* ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲ ಮನ್ನಾದ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿ ಹೋಗಿದ್ದು, ಅದನ್ನು ದಯಮಾಡಿ ಸರಿಪಡಿಸಿ, ರೈತರಿಗೆ ನೆರವಾಗಿ ಎಂದು ಕೋರಿದ್ದಾರೆ.

English summary
"Make Davanagere city as another capital of Karnataka state" and many demands listed and will be submitted to CM BS Yeddyurappa said MSK Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X