ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗದ ಕುರಿತು ಮಹತ್ವದ ಸಭೆ
Indian Railways: ವಿ.ಸೋಮಣ್ಣ ಅವರು ರೈಲ್ವೆ ಖಾತೆ ಸಚಿವರಾದಾಗಿನಿಂದಲೂ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಫಲರಾಗುತ್ತಿದೆ. ಹಾಗೆಯೇ ಇದೀಗ ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆ ಕುರಿತು ಚಿತ್ರದುರ್ಗದಲ್ಲಿ ಮಹತ್ವದ ಸಭೆಯೊಂದನ್ನು ನಡೆಸಿದ್ದಾರೆ.
ಈ ರೈಲು ಮಾರ್ಗ ಪೂರ್ಣಗೊಂಡರೆ, ತುಂಬಾ ಅನುಕೂಲವಾಗಲಿದೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತುಮಕೂರು -ಚಿತ್ರದುರ್ಗ -ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ರವರು ಅಭೆ ನಡೆಸಿದ್ದಾರೆ.

ಈ ವೇಳೆ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ, ಸಚಿವ ಡಿ.ಸುಧಾಕರ್, ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಸಿರಾ ಶಾಸಕ ಜಯಚಂದ್ರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಹೊಸ ರೈಲ್ವೆ ಮಾರ್ಗ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ 549.45 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಈ ಮಾರ್ಗದ ಉದ್ದ ಒಟ್ಟು 191 ಕಿಲೋ ಮೀಟರ್ ಆಗಿದೆ. ಹಳೇ ಮಾರ್ಗದಲ್ಲಿ ತುಮಕೂರು-ದಾವಣಗೆರೆ ಹಾಗೂ ದಾವಣಗೆರೆ-ತುಮಕೂರಿಗೆ ಅರಸಿಕೆರೆ ಜಂಕ್ಷನ್ ಮೇಲೆ ಸುತ್ತುವರಿದುಕೊಂಡು ಹೋಗಬೇಕಿತ್ತು. ಇದರಿಂದ ತುಂಬಾ ಸಮಯ ವ್ಯರ್ಥ ಆಗುತ್ತದೆ ಹಾಗೂ ದೂರವೂ ಆಗಲಿದೆ.
ಆದರೆ, ಹೊಸ ಮಾರ್ಗ ಸಮಯ ಹಾಗೂ ಅಂತರ ಎರಡನ್ನು ಕಡಿಮೆ ಮಾಡಲಿದೆ. ಈ ಹೊಸ ಮಾರ್ಗ ಊರುಕೆರೆ, ತಿರುಮೇನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಸಿರಾ, ತಾವರಕೆರೆ, ಅನಿಸಿದ್ರಿ, ಹಿರಿಯೂರು, ಮೇಟಿಕುರಿಕೆ, ಐಮಂಗಳ, ಪಳವನಹಳ್ಳಿ, ಚಿತ್ರದುರ್ಗ, ಸಿರಿಗೆರೆ, ಹೆಬ್ಬಾಳು, ತೋಳಹುಣುಸೆಲ್ಲಿ ರೈಲ್ವೆ ನಿಲ್ದಾಣಗಳನ್ನು ಒಳಗೊಂಡಿರಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹೊಸ ರೈಲ್ವೆ ಮಾರ್ಗದಲ್ಲಿ ಐದು ಪ್ರಮುಖ ಬ್ರಿಡ್ಜ್‌ಗಳು, 18 ಚಿಕ್ಕ ಬ್ರಿಡ್ಜ್‌ಗಳು, 23 ರಸ್ತೆ ಅಂಡರ್ ಪಾಸ್ ಬ್ರಿಡ್ಜ್‌ಗಳು, 7 ರೋಡ್ ಓವರ್ ಬ್ರಿಡ್ಜ್, ಒಂದು ಫೂಟ್ ಓವರ್ ಬ್ರಿಡ್ಜ್, ಒಂದು ಪೆಡಿಸ್ಟಲ್ ಬ್ರಿಡ್ಜ್ ಕೂಡ ನಿರ್ಮಾಣ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ಇತ್ತೀಚೆಗಷ್ಟೇ ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂದು ಸಂಸದ ಗೋವಿಂದ ಕಾರಜೋಳ ಅಪ್ಡೇಟ್ ಮಾಹಿತಿಯೊಂದನ್ನು ನೀಡಿದ್ದರು. ಈ ಹಸೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ 2027ರ ಒಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದರು. ದಾವಣಗೆರೆ-ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಆದರೆ, ಚಿತ್ರದುರ್ಗ ಭಾಗದಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದರು.












Click it and Unblock the Notifications