ಹೊನ್ನಾಳಿ; ಎಂ.ಟಿ.ಬಿ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ: ಕಾಗಿನೆಲೆ ಶ್ರೀ
ದಾವಣಗೆರೆ, ಡಿಸೆಂಬರ್, 12: ಕುರುಬ ಸಮಾಜದವರು ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ಚಾಮೀಜಿ ಹೊನ್ನಾಳಿಯಲ್ಲಿ ಕರೆ ನೀಡಿದರು. ಅಲ್ಲದೇ ಸಚಿವ ಎಂ.ಟಿ.ಬಿ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ ಎಂದು ಹೊಗಳಿದರು.
ಹೊನ್ನಾಳಿ ಪಟ್ಟಣದ ಕನಕಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ಅವರು, ಯಾವ ಕಾರಣಕ್ಕೂ ನಾನು ಕುರಿಮಂದೆಯನ್ನು ಆಗಲು ಬಿಡುವುದಿಲ್ಲ. ಎಲ್ಲರೂ ಕೂಡ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಒಂದೊಂದು ಸಾವಿರ ಕುರಿಗಳಲ್ಲಿ ಮೇಕೆಗಳು ಇರುತ್ತವೆ. ಕುರಿಗಳು ಹೊಟ್ಟೆತುಂಬ ಮೇಯಲು ಮೇಕೆಗಳನ್ನು ಇಟ್ಟುಕೊಂಡಿರುತ್ತಾನೆ ಕುರುಬ. ಆದರೆ ಇಷ್ಟು ಸಂಖ್ಯೆ ಕುರುಬರು ಇರುವಾಗ ಮೇಕೆ ಏಕೆ? ಎಂದು ಪ್ರಶ್ನಿಸಿದರು.
ಸಚಿವ ಎಂ.ಟಿ. ಬಿ. ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ. ಎಲ್ಲೇ, ಯಾವುದೇ ತಾಲೂಕಿಗೆ ಹೋದರೂ ಕನಕ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ 10 ಲಕ್ಷ ರೂಪಾಯಿ ಕೊಡುತ್ತಾರೆ. ಅವರು ಸಮಾಜಕ್ಕೆ ಸಾಕಷ್ಟು ಕೆಲಸವನ್ನು ಮಾಡುತ್ತಿದ್ದಾರೆ. ಎಂಟಿಬಿ ಬಳಿ ಇರುವ ಹಣ ಅವರ ಪರಿಶ್ರಮದ್ದಾಗಿದೆ. ನೀವು ಯೋಚನೆ ಮಾಡಿ ಸದ್ಬಳಕೆ ಮಾಡುವವರಿಗೆ ಹಣ ಕೊಡಿ ಎಂದು ಶ್ರೀಗಳು ನಾಗರಾಜ್ ಅವರಿಗೆ ಕಿವಿ ಮಾತು ಹೇಳಿದರು.

ಸಂಘಟನೆ ಸರಿಪಡಿಸಲು ನಾನಿದ್ದೇನೆ
ನಂತರ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಎಂದಿಗೂ ಯಾರಿಗೂ ಶಾಶ್ವತ ಅಲ್ಲ. ಯಾವ್ಯಾವ ಸಮುದಾಯದ ಬೇಡಿಕೆ ಇದಿಯೋ ಅಂತಹ ಕೆಲಸ ಸ್ಥಳೀಯ ಶಾಸಕರಿಂದ ಆಗಬೇಕು. ಹೊನ್ನಾಳಿಯಲ್ಲಿ 3 ಕೋಟಿ ವೆಚ್ಚದ ಸಮುದಾಯ ಭವನ ಆಗಬೇಕು. ನಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತ ಸಮುದಾಯ ಭವನ ಆಗಬೇಕು. ನಾನು ವೈಯಕ್ತಿಕವಾಗಿ ಸಮುದಾಯ ಭವನ ಕಟ್ಟಲು 25 ಲಕ್ಷ ರೂಪಾಯಿ ಕೊಡುತ್ತೇನೆ. ಇಷ್ಟೊಂದು ದೊಡ್ಡ ಪ್ರಮಾಣದ ಕುರುಬ ಸಮುದಾಯ ಹೊನ್ನಾಳಿಯಲ್ಲಿದೆ. ಆದರೆ ಕನಕ ಭವನ, ಕನಕ ಪುತ್ಥಳಿ ಇಲ್ಲ ಎನ್ನೋದು ಸಂಶಯ ತರುತ್ತಿದೆ ಎಂದು ರೇಣುಕಾಚಾರ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸಮುದಾಯ ಭವನ ಆಗಬೇಕು
ನಂತರ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಎಂದಿಗೂ ಯಾರಿಗೂ ಶಾಶ್ವತ ಅಲ್ಲ. ಯಾವ್ಯಾವ ಸಮುದಾಯದ ಬೇಡಿಕೆ ಇದಿಯೋ ಅಂತಹ ಕೆಲಸ ಸ್ಥಳೀಯ ಶಾಸಕರಿಂದ ಆಗಬೇಕು. ಹೊನ್ನಾಳಿಯಲ್ಲಿ 3 ಕೋಟಿ ವೆಚ್ಚದ ಸಮುದಾಯ ಭವನ ಆಗಬೇಕು. ನಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತ ಸಮುದಾಯ ಭವನ ಆಗಬೇಕು. ನಾನು ವೈಯಕ್ತಿಕವಾಗಿ ಸಮುದಾಯ ಭವನ ಕಟ್ಟಲು 25 ಲಕ್ಷ ರೂಪಾಯಿ ಕೊಡುತ್ತೇನೆ. ಇಷ್ಟೊಂದು ದೊಡ್ಡ ಪ್ರಮಾಣದ ಕುರುಬ ಸಮುದಾಯ ಹೊನ್ನಾಳಿಯಲ್ಲಿದೆ. ಆದರೆ ಕನಕ ಭವನ, ಕನಕ ಪುತ್ಥಳಿ ಇಲ್ಲ ಎನ್ನೋದು ಸಂಶಯ ತರುತ್ತಿದೆ ಎಂದು ರೇಣುಕಾಚಾರ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನೀವೆಲ್ಲರೂ ಒಂದುಗೂಡಬೇಕು-ಎಂಟಿಬಿ
ಹೊನ್ನಾಳಿಯಲ್ಲಿ ಕನಕದಾಸರ ಪುತ್ಥಳಿ ಇಲ್ಲ ಎಂಬುದನ್ನು ಕೇಳಿ ಬೇಸರವಾಯಿತು. ಇನ್ನು ಎರಡು ತಿಂಗಳ ಅವಧಿಯಲ್ಲಿ ಹೊನ್ನಾಳಿಯಲ್ಲಿ ಕನಕದಾಸ ಪುತ್ಥಳಿ ಆಗಬೇಕು. ಚುನಾವಣೆ ಆಗುವುದರೊಳಗೆ ಕನಕದಾಸ ಪುತ್ಥಳಿ ನಿರ್ಮಾಣ ಆಗಬೇಕು. ಸಮಾಜ ಅಂತಾ ಬಂದಾಗ ನೀವೆಲ್ಲರೂ ಒಂದುಗೂಡಬೇಕು ಎಂದು ಕರೆ ನೀಡಿದರು.

ಪುತ್ಥಳಿಗೆ ವೈಯಕ್ತಿಕವಾಗಿ 2 ಲಕ್ಷ ನೀಡುತ್ತೇನೆ
ನೀವು ಯಾವುದೇ ಪಕ್ಷದಲ್ಲಿದ್ದರೂ ಒಗ್ಗಟ್ಟಿನ ಮಂತ್ರ ಪಠಿಸಬೇಕು. ಹೊನ್ನಾಳಿಯಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ವೈಯಕ್ತಿಕ 2 ಲಕ್ಷ ನೀಡುತ್ತೇನೆ. ಕಾಗಿನೆಲೆ ಶ್ರೀಗಳು ರಾಜ್ಯಪ್ರವಾಸ ಮಾಡುತ್ತಿದ್ದಾರೆ. ಅವರು ಸ್ವಾಮೀಜಿ ಆದ ಮೇಲೆ ಇಡೀ ಸಮಾಜದಲ್ಲಿ ಒಳ್ಳೆಯ ಕೆಲಸಗಳು ಆಗಿವೆ. ಸಮಾಜದವರು ಸ್ವಾಮೀಜಿ ಜೊತೆ ಕೈಜೋಡಿಸಬೇಕು. ಹಾಲುಮತದಲ್ಲಿ ಎರಡು ಪಂಗಡಗಳಿಲ್ಲ. ಒಂದೇ ಕಂಬಳಿ ಇರುವುದು, ಅದು ಕರಿಕಂಬಳಿ ಆಗಿದೆ ಎಂದು ಕನಕದಾಸ ಕೀರ್ತನೆ ಪಠಿಸಿ ಹೇಳಿದರು. ಜಾತಿ ಜಾತಿ ಎಂದು ಸಮಾಜದಲ್ಲಿ ಆತಂಕ ಶುರುವಾಗಿದೆ. ಚುನಾವಣೆಗೂ ಮುನ್ನವೇ ಹೊನ್ನಾಳಿಯಲ್ಲಿ ನಿವೇಶನ ಕೊಡಿಸಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಲಾಗುವುದು. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಭರವಸೆಚ ನೀಡಿದರು.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications