ಪಂಚಮಸಾಲಿ ಸ್ವಾಮೀಜಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್
ದಾವಣಗೆರೆ, ಫೆಬ್ರವರಿ 03: "ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾರೂ ಸುಮ್ಮನಿರಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಂದರೆ ನಿಮ್ಮ ಬಂಡವಾಳ ಹೊರಗೆ ತೆಗೆಯುತ್ತೇನೆ" ಎಂದು ದಾವಣಗೆರೆಯ ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಹರಿಹರದ ವಾಸವಿ ಕಲ್ಯಾಣ ಮಂಟಪದಲ್ಲಿ ತುಮಕೂರು ಸಿದ್ಧಗಂಗಾ ಶ್ರೀ ಹಾಗೂ ಪೇಜಾವರ ಶ್ರೀ ಪುಣ್ಯಸ್ಮರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಂಗವಾಗಿ ಎಚ್.ಶಿವಪ್ಪ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಸಭೆಯಲ್ಲಿ ಹರಿಹರದ ಮಾಜಿ ಶಾಸಕ ಮಾತನಾಡಿದ ಈ ವಿಡಿಯೋ ಈಗ ವೈರಲ್ ಆಗಿದೆ. "ನನ್ನನ್ನು ಮುಗಿಸಲು ಬಂದರೆ ನಾನು ನಿಮ್ಮನ್ನು ಮುಗಿಸುತ್ತೇನೆ. ನನ್ನನ್ನು ಮುಗಿಸಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ಬಂಡವಾಳವನ್ನು ಇಂಚಿಂಚು ಬಯಲಿಗೆಳೆಯುತ್ತೇನೆ" ಎಂದಿದ್ದಾರೆ ಅವರು. "ಅಲ್ಪಸ್ಪಲ್ಪ ತಿಳಿದೋರು ಕುರ್ಚಿ ಮೇಲೆ ಕೂತು ಹಗುರವಾಗಿ ಮಾತನಾಡಿದರೆ ಅಂಥವರ ನಾಲಿಗೆ ಕಟ್ ಮಾಡೋ ಶಕ್ತಿ ನನ್ನಲ್ಲಿದೆ" ಎಂದು ಗುಡುಗಿದ್ದಾರೆ.
"ಹುಲಿ ಸುಮ್ಮನಿದೆ ಎಂದ ಮಾತ್ರಕ್ಕೆ ಅದು ಬಲಹೀನವಾಗಿದೆ ಎಂದರ್ಥವಲ್ಲ. ಮುಂದೆ ಬೇಟೆಗೆ ಸಿದ್ಧವಾಗಿದೆ ಎಂದರ್ಥ. ನಾನು ಯಾವುದೋ ಒಂದು ಸಮಾಜದ ನಾಯಕನಲ್ಲ, ಕಳೆದ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ರಾಜಕೀಯ ಕಾರಣದಿಂದ ಈ ಫಲಿತಾಂಶ ಬಂದಿದೆ" ಎಂದು ಸಮರ್ಥಿಸಿಕೊಂಡರು.

ಜನವರಿಯಲ್ಲಿ ಪಂಚಮಸಾಲಿ ಪೀಠದಲ್ಲಿ ನಡೆದ ಹರ ಜಾತ್ರೆಗೆ ಪಂಚಮಸಾಲಿ ಸಮಾಜದವರೇ ಆದ ಎಚ್ ಎಸ್ ಶಿವಶಂಕರ್ ಅವರನ್ನು ಆಹ್ವಾನ ಮಾಡಿರಲಿಲ್ಲ. ಇದರಿಂದ ಪಂಚಮಸಾಲಿ ಪೀಠದ ಸ್ವಾಮೀಜಿ ವಚನಾನಂದ ಶ್ರೀಗಳಿಗೆ ತಿರುಗೇಟು ನೀಡಿರಬಹುದು ಎನ್ನಲಾಗುತ್ತಿದೆ.












Click it and Unblock the Notifications